Site icon Vistara News

IPL 2024 : ಇರಾನ್​- ಇಸ್ರೇಲ್ ಯುದ್ಧದ ನಡುವೆ ವಿಮಾನ ಪ್ರಯಾಣದ ಭಯಾನಕ ಅನುಭವ ವಿವರಿಸಿದ ಪೀಟರ್ಸನ್​

Kevin peterson

ಬೆಂಗಳೂರು: ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಐಪಿಎಲ್ 2024 (IPL 2024) ಪಂದ್ಯಾವಳಿಗಾಗಿ ಭಾರತಕ್ಕೆ ಬಂದಿದ್ದಾರೆ. ಈ ವೇಳೆ ಅವರು ಇಸ್ರೇಲ್​- ಇರಾನ್ ಯುದ್ಧದ ನಡುವೆ ತಮ್ಮ ವಿಮಾನ ಪ್ರಯಾಣದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಮುಂಬೈಗೆ ಬಂದಿಳಿಯುವ ಮೊದಲು ಎದುರಿಸಿದ ಆತಂಕವನ್ನು ಬಣ್ಣಿಸಿದ್ದಾರೆ.

ಶನಿವಾರ ತಡರಾತ್ರಿ ನಡೆದ ಭೀಕರ ದಾಳಿಯಲ್ಲಿ ಇರಾನ್ ಇಸ್ರೇಲ್ ಮೇಲೆ 300 ಕ್ಕೂ ಹೆಚ್ಚು ಡ್ರೋನ್​​ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ.. ಇಸ್ರೇಲ್ ತಲುಪುವ ಮೊದಲು 170 ಡ್ರೋನ್​ಗಳು ಮತ್ತು 30 ಕ್ರೂಸ್ ಕ್ಷಿಪಣಿಗಳನ್ನು ಇಸ್ರೇಲ್​ ಹೊಡೆದು ಉರುಳಿಸಿದೆ. 110 ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಕೆಲವು ಇಸ್ರೇಲ್ ನೆಲದ ಮೇಲೆ ಬಿದ್ದಿದ್ದು, 12 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಡಮಾಸ್ಕಸ್​ನಲ್ಲಿರುವ ತನ್ನ ರಾಯಭಾರ ಕಚೇರಿ ಕಟ್ಟಡದ ಮೇಲೆ ಏಪ್ರಿಲ್ 1 ರಂದು ನಡೆದ ವಾಯು ದಾಳಿ ನಡೆಸಿದ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪದೇ ಪದೇ ಬೆದರಿಕೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಯುದ್ಧ ಆರಂಭಗೊಂಡಿದೆ. ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ನಾಗರಿಕರಿಗೆ ಸುರಕ್ಷಿತವಾಗಿರಲು ಹೇಳಿದೆ. ಅಲ್ಲದೆ ಸ್ಥಳೀಯ ಅಧಿಕಾರಿಗಳ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಸಲಹೆ ನೀಡಿದೆ.

IPL 2024 : ಗೆಲುವಿನ ಹಾದಿಗೆ ಮರಳಿದ ರಾಜಸ್ಥಾನ್​, ಪಂಜಾಬ್​ಗೆ ಮತ್ತೊಂದು ಸೋಲು

ಭಾರತೀಯ ಜನರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ ಮತ್ತು ಇಸ್ರೇಲ್ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿದ್ದೇವೆ ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ.

ವಿಮಾನದ ಮಾರ್ಗ ಬದಲಾವಣೆ

ಇಸ್ರೇಲ್ ಕಡೆಗೆ ಇರಾನ್​​ನ ಕ್ಷಿಪಣಿ ಉಡಾವಣೆಯಿಂದಾಗಿ ತಮ್ಮ ವಿಮಾನವನ್ನು ಮಾರ್ಗ ಬದಲಾವಣೆ ಮಾಡಬೇಕಾಯಿತು ಎಂದು ಕೆವಿನ್ ಪೀಟರ್ಸನ್ ಬಹಿರಂಗಪಡಿಸಿದರು. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆತಂಕಕಾರಿ ಅನುಭವವನ್ನು ವಿವರಿಸಿದ್ದಾರೆ. ಅವರ ಪೋಸ್ಟ್ ಪರಿಸ್ಥಿತಿಯ ಆತಂಕ-ಪ್ರಚೋದಕ ಸ್ವರೂಪ ಬಹಿರಂಗಪಡಿಸಿದೆ,

ಇರಾನ್ ಕ್ಷಿಪಣಿಗಳನ್ನು ತಪ್ಪಿಸಲು ನಾವು ಮಾರ್ಗ ಬದಲಾವಣೆ ಮಾಡಬೇಕಾಯಿತು ಕಳೆದ ರಾತ್ರಿ ನಮ್ಮ ವಿಮಾನವು ಹಿಂತಿರುಗಿ ಮತ್ತೊಂದು ದೊಡ್ಡ ಲೋಡ್ ಇಂಧನವನ್ನು ತುಂಬಿಸಬೇಕಾಯಿತು. ಹುಚ್ಚುತನ. ಹೇಗಾದರೂ, ನಂತರ ಮುಂಬೈನಲ್ಲಿ ಇಳಿದೆ. ವಾಖೆಂಡೆ ನನ್ನ ನೆಚ್ಚಿನ ಕ್ರಿಕೆಟ್ ಮೈದಾನಗಳಲ್ಲಿ ಒಂದಾಗಿದೆ!” ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

Exit mobile version