Site icon Vistara News

King Charles : ಬ್ರಿಟನ್​ ರಾಜಕುಮಾರ ಚಾರ್ಲ್ಸ್​​​ಗೆ ಕ್ಯಾನ್ಸರ್​

King Charles

ಲಂಡನ್: ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಸಾರ್ವಜನಿಕ ಕರ್ತವ್ಯಗಳನ್ನು ಮುಂದೂಡಲಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಯಾವ ಕ್ಯಾನ್ಸರ್ ಹಾಗೂ ಇನ್ನಿತರ ಮಾಹಿತಿಯನ್ನು ಪ್ರಕಟಿಸಿಲ್ಲ. ಆಸ್ಪತ್ರೆ ಸೇರಿದ್ದ ಅವರಿಗೆ ತಪಾಸಣೆ ವೇಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

75 ವರ್ಷದ ಕಿಂಗ್ ಚಾರ್ಲ್ಸ್ ಕಳೆದ ತಿಂಗಳು ಪ್ರಾಸ್ಟೇಟ್​ ಸರಿಪಡಿಸುವ ವೈದ್ಯಕೀಯ ಕಾರ್ಯವಿಧಾನಕ್ಕೆ ಒಳಗಾದ ನಂತರ ಮೂರು ರಾತ್ರಿಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದರು. ಪರೀಕ್ಷೆಗಳು ಕ್ಯಾನ್ಸರ್​​ನ ಒಂದು ರೂಪವನ್ನು ಗುರುತಿಸಿವೆ ಎಂದು ಅರಮನೆ ಮಾಹಿತಿ ನೀಡಿದೆ. ಚಾರ್ಲ್ಸ್ ಅವರ ಕ್ಯಾನ್ಸರ್ ಬಗ್ಗೆ ಅರಮನೆ ಯಾವುದೇ ವಿವರಗಳನ್ನು ನೀಡಿಲ್ಲ ಆದರೆ ಇದು ಪ್ರಾಸ್ಟೇಟ್ ಅಲ್ಲ ಎಂದು ರಾಜಮನೆತನದ ಮೂಲಗಳು ತಿಳಿಸಿವೆ.

ಬ್ರಿಟನ್ ರಾಜಮನೆತನದ ಇತಿಹಾಸ

ಬ್ರಿಟನ್ ರಾಜಮನೆತನಕ್ಕೆ ಸುದೀರ್ಘ ಇತಿಹಾಸವಿದೆ. 9ನೇ ಶತಮಾನದಲ್ಲಿ ಬ್ರಿಟನ್ ರಾಜಮನೆತನ ಇತಿಹಾಸದ ಬೇರುಗಳಿವೆ. ವೆಸ್ಸೆಕ್ಸ್‌ನ ಆಂಗ್ಲೋ-ಸ್ಯಾಕ್ಸೋನ್ ರಾಜ್ಯವೇ ಮುಂದೆ ಇಂಗ್ಲಿಷ್ ರಾಜ್ಯವಾಗಿ ಉದಯವಾಯಿತು. ಈಗಿರುವ ಬ್ರಿಟನ್ ರಾಜಮನೆತನದ ಇತಿಹಾಸವು 1707ರಿಂದ ಆರಂಭವಾಗುತ್ತದೆ. ಈ ರಾಯಲ್ ಫ್ಯಾಮಿಲಿಗೂ ಮೊದಲು ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಪ್ರತ್ಯೇಕ ರಾಜ್ಯಗಳಾಗಿದ್ದವು. ಆ ಬಳಿಕ ಮೂರು ರಾಜ್ಯಗಳು ಜತೆಯಾಗಿ ಬ್ರಿಟನ್ ರಾಜ್ಯವು ಸೃಷ್ಟಿಯಾಯಿತು. ಜತೆಗೇ ರಾಯಲ್ ಫ್ಯಾಮಿಲಿ ಕೂಡ.

ಇದನ್ನೂ ಓದಿ : Mohamed Muizzu: ಮೇ 10ರೊಳಗೆ ಭಾರತದ ಸೇನೆ ವಾಪಸ್;‌ ಮಾಲ್ಡೀವ್ಸ್‌ ಅಧ್ಯಕ್ಷ ಘೋಷಣೆ

ಐದನೇ ರಾಜ ಜಾರ್ಜ್ (1865-1936) ಮತ್ತು ಮೇರಿ ಆಪ್ ಟೆಕ್ ಅವರು ಎರಡನೇ ಎಲಿಜಬೆತ್ ಅವರ ಅಜ್ಜ ಮತ್ತು ಅಜ್ಜಿ. ಇವರಿಗೆ ಆರು ಮಕ್ಕಳು. ಈ ಪೈಕಿ ನಾಲ್ವರಿಗೆ ಮಕ್ಕಳಿದ್ದರೆ, ಇಬ್ಬರಿಗೆ ಇರಲಿಲ್ಲ. ಹಿರಿಯ ಮಗ 8ನೇ ಕಿಂಗ್ ಎಡ್ವರ್ಡ್ 1936ರಲ್ಲಿ ತಂದೆಯ ನಂತರ, ಬ್ರಿಟನ್ ರಾಜನಾದ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೊನ್ನೆ ನಿಧನರಾದ ಎರಡನೇ ಎಲಿಜಬೆತ್ ಅವರ ದೊಡ್ಡಪ್ಪ. ರಾಣಿ ಎಲಿಜಬೆತ್ ಅವರ ಅಪ್ಪ ಆರನೇ ಕಿಂಗ್ ಜಾರ್ಜ್ ಅವರು ಕಿಂಗ್ ಎಡ್ವರ್ಡ್ ಸಹೋದರ.

ಈಗ ರಾಜನಾಗಿರುವ ಮೂರನೇ ಕಿಂಗ್ ಚಾರ್ಲ್ಸ್ ಬಗ್ಗೆ ನಾನಾ ಕತೆಗಳಿವೆ. ಈ ಯಾರು ಚಾರ್ಲ್ಸ್ ಯಾರು ಎಂದರೆ, ಸುರಸುಂದರಿ ಡಯಾನಾಳ ಗಂಡ. ಮದುವೆ ಮುಂಚೆಯೇ ಚಾರ್ಲ್ಸ್‌, ವಿವಾಹಿತೆ ಕ್ಯಾಮಿಲ್ಲಾ ಪಾರ್ಕರ್ ಜತೆ ಅಫೇರ್ ಇಟ್ಟುಕೊಂಡಿದ್ದರು. ಈ ಬಗ್ಗೆ ತಾಯಿ ಎರಡನೇ ಎಲಿಜಬೆತ್ ಬುದ್ಧಿ ಹೇಳಿದ್ದಳು. ರಾಜಮನೆತನದಲ್ಲಿ ಈ ಬಗ್ಗೆ ಸಾಕಷ್ಟು ಕಿರಿಕಿರಿಯಾಗಿತ್ತು. ಆದರೆ, ಅವರೇನೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. 1981ರಲ್ಲಿ ಡಯಾನಾ ಅವರನ್ನು ಮದುವೆಯಾದರು. ಅಂತಿಮವಾಗಿ ಚಾರ್ಲ್ಸ್ ಮತ್ತು ಡಯಾನಾ 1996ರ ಡೈವೋರ್ಸ್ ಪಡೆದುಕೊಂಡರು. ಇದಾದ ವರ್ಷದಲ್ಲೇ 1997ರಲ್ಲಿ ಪ್ಯಾರಿಸ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಡಯಾನಾ ನಿಧನರಾದರು. ಕಾರಿನಲ್ಲಿ ಆಕೆಯ ಗೆಳೆಯ ದೋದಿ ಅಲ್ ಫಯಾದ್ ಕೂಡ ಇದ್ದ. 2005ರಲ್ಲಿ ಚಾರ್ಲ್ಸ್, ಕ್ಯಾಮಿಲ್ಲಾ ಪಾರ್ಕರ್ ಅವರನ್ನು ವಿವಾಹವಾದರು.

Exit mobile version