ಬೆಂಗಳೂರು: ಕೋಲಾರ ಲೋಕ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲೇಶ್ ಬಾಬು (6,19, 482 ಮತಗಳು) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಗೌತಮ್ (6,20, 093 ಮತಗಳು) ವಿರುದ್ಧ 71,388 ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಮೊದಲ ಗೆಲುವಾಗಿದೆ. ಮೀಸಲು ಕ್ಷೇತ್ರವಾಗಿದ್ದ ಕೊಲಾರದಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ನಾಯಕರ ನಡುವಿನ ಜಿದ್ದಿನ ಬಳಿಕ ಈ ಫಲಿತಾಂಶ ಪ್ರಕಟಗೊಂಡಿದೆ. 2024 ರ ಲೋಕಸಭಾ ಚುನಾವಣೆಯ 2 ನೇ ಹಂತದಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26, 2024 ರಂದು ಮತದಾನ ನಡೆದಿತ್ತು.
ಮಲ್ಲೇಶ ಬಾಬು (ಜೆಡಿಎಸ್)- 6,19, 482 ಮತಗಳು
ಕೆ. ವಿ ಗೌತಮ್ (ಕಾಂಗ್ರೆಸ್)- 6,20, 093 ಮತಗಳು
ಗೆಲುವಿನ ಅಂತರ- 71,388
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಎಸ್ .ಮುನಿಸ್ವಾಮಿ ಅವರು ಕಾಂಗ್ರೆಸ್ನ ಕೆ.ಎಚ್.ಮುನಿಯಪ್ಪ ಅವರನ್ನು 2,10,021 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.56.32ರಷ್ಟು ಮತಗಳನ್ನು ಪಡೆದಿತ್ತು.
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರು ಜೆಡಿಎಸ್ ನ ಕೋಲಾರ ಕೇಶವ ಅವರನ್ನು 47,850 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 37.16% ಮತಗಳನ್ನು ಗಳಿಸಿದೆ.
2009ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರು ಬಿಜೆಪಿಯ ಡಿ.ಎಸ್.ವೀರಯ್ಯ ಅವರನ್ನು 23,006 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ 37.17% ಮತಗಳನ್ನು ಪಡೆದಿತ್ತು.
ಕ್ಷೇತ್ರದ ವಿಶೇಷತೆ
ಕರ್ನಾಟಕದ ಕೋಲಾರ ಪ್ರದೇಶವು ಖನಿಜ ಸಂಪತ್ತಿನ ಮೂಲಕ ಪ್ರಖ್ಯಾತಿ. ಕೆಜಿಎಫ್ ಚಿನ್ನ ಗಣಿ ಇಲ್ಲಿದೆ. ಈ ಪ್ರದೇಶವು ಹಾಲು ಉತ್ಪಾದನೆಯಲ್ಲಿಯೂ ದಾಖಲೆಯನ್ನು ನಿರ್ಮಿಸಿದೆ. ರಾಜಧಾನಿ ಬೆಂಗಳೂರಿನಿಂದ 65 ಕಿಲೋಮೀಟರ್ ದೂರದಲ್ಲಿರುವ ಈ ನಗರವು ದೇವಾಲಯಗಳು ಮತ್ತು ಪ್ರಾಚೀನ ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಕೋಲಾರ ಲೋಕಸಭಾ ಕ್ಷೇತ್ರವು (Kolar lok sabha constituency) ಪರಿಶಿಷ್ಟ ಜಾತಿಗೆ ಮೀಸಲಾಗಿರುವ ರಾಜ್ಯದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಒಂದು . ಇದರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಸ್ವಾತಂತ್ರ್ಯದ ನಂತರ ನಡೆದ ಒಟ್ಟು 16 ಚುನಾವಣೆಗಳಲ್ಲಿ 15 ರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಈ ಪಕ್ಷದಭದ್ರಕೋಟೆ ಎಂದು ಕರೆಯಬಹುದು. 1984ರಲ್ಲಿ ಜನತಾ ಪಕ್ಷದ ವಿ.ವೆಂಕಟೇಶ್ ಗೆಲುವು ಸಾಧಿಸಿದಾಗ ಕಾಂಗ್ರೆಸ್ ಪಕ್ಷ ಈ ಸ್ಥಾನವನ್ನು ಕಳೆದುಕೊಂಡಿತ್ತು. 2019ರಲ್ಲಿ ಬಿಜೆಪಿಯ ಎಸ್, ಮುನಿಸ್ವಾಮಿ ಗೆಲುವು ಸಾಧಿಸಿದ್ದರು.
ಜೂನ್ 4, 2024 ರಂದು ಮತ ಎಣಿಕೆ ನಡೆಯಲಿದೆ.ಈ ಬಾರಿ ಕಾಂಗ್ರೆಸ್ ನ ಕೆ.ವಿ.ಗೌತಮ್ ಅವರು ಜೆಡಿಎಸ್ ನ ಮಲ್ಲೇಶ್ ಬಾಬು ವಿರುದ್ಧ ಕಣದಲ್ಲಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರವು ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ ಗೋಲ್ಡ್ ಫೀಲ್ಡ್ಸ್, ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕವಾಗಿ ಪ್ರಬಲವಾಗಿವೆ.
ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು 2019 ರಲ್ಲಿ ಬಿಜೆಪಿ ಕಸಿದುಕೊಂಡಿತ್ತು. ಬಿಜೆಪಿಯ ಎಸ್.ಮುನಿಸ್ವಾಮಿ ಅವರು ನಾಲ್ಕು ಬಾರಿ ಕಾಂಗ್ರೆಸ್ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಗೆಲುವು ಸಾಧಿಸಿದ್ದರು.