Site icon Vistara News

KPSC: ಗಮನಿಸಿ; ಕೆಪಿಎಸ್‌ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ತಿದ್ದುಪಡಿ ಅಧಿಸೂಚನೆಯಲ್ಲಿ ಏನಿದೆ?

KPSC

KPSC

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) ಗೆಜೆಟೆಡ್‌ ಪ್ರೊಬೆಷನರಿ(ಕೆಎಎಸ್)ಯ (KAS Recruitment 2024) ಗ್ರೂಪ್‌ ಎ ಮತ್ತು ಗ್ರೂಪ್‌ ಬಿಯ ಒಟ್ಟು 384 ಹುದ್ದೆಗಳ ಭರ್ತಿಗೆ ಫೆಬ್ರವರಿ 26ರಂದು ಅಧಿಸೂಚನೆ ಹೊರಡಿಸಿತ್ತು. ಹೈದರಾಬಾದ್‌ ಕರ್ನಾಟಕ ಹಾಗೂ ಉಳಿಕೆ ವೃಂದಗಳಿಗೆ ಸಂಬಂಧಪಟ್ಟಂತೆ ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆಯಲ್ಲಿ ಕೆಲವು ತಿದ್ದುಪಡಿ ಮಾಡಿ ಪ್ರಕಟಣೆ ಹೊರಡಿಸಿದೆ. ಏನೆಲ್ಲ ಬದಲಾವಣೆಗಳಿವೆ ಎನ್ನುವ ವಿವರ ಇಲ್ಲಿದೆ.

ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್‌ ಪ್ರಬೇಷನರ್ಸ್‌ ಗ್ರೂಪ್‌- ಎ ಮತ್ತು ಗ್ರೂಪ್‌-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿಂತೆ ಫೆಬ್ರವರಿ 26ರಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿನ ಗ್ರೂಪ್‌ -ಎ ವೃಂದದ ಆರ್‌.ಪಿ.ಸಿ. ಮತ್ತು ಹೈದರಾಬಾದ್‌ ಕರ್ನಾಟಕ ವೃಂದದ ಒಟ್ಟು ಸಂಖ್ಯೆ 123 (ಆರ್‌.ಪಿ.ಸಿ.) ಮತ್ತು 36 (ಹೈ.ಕ.) ಎಂದು ನಮೂದಿಸಲಾಗಿತ್ತು. ಜತೆಗೆ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೃಂದದ ಒಟ್ಟು ಹುದ್ದೆಗಳ ಸಂಖ್ಯೆ 307 (ಆರ್‌.ಪಿ.ಸಿ.) ಮತ್ತು 77 (ಹೈ.ಕ.) ಎಂದೂ ಉಲ್ಲೇಖಿಸಲಾಗಿತ್ತು. ಆದರೆ ಇದರಲ್ಲಿ ಸ್ವಲ್ಪ ಬದಲಾವಣೆ ಇದೆ. ಅವುಗಳ ಒಟ್ಟು ಸಂಖ್ಯೆ 126 (ಆರ್‌.ಪಿ.ಸಿ.) ಮತ್ತು 33 (ಹೈ.ಕ.) ಎಂದೂ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೈಂದದ ಒಟ್ಟು ಹುದ್ದೆಗಳ ಸಂಖ್ಯೆ 310 (ಆರ್‌.ಪಿ.ಸಿ.) ಮತ್ತು 74 (ಹೈ.ಕ.) ಎಂದಾಗಬೇಕು.

ಇದನ್ನೂ ಗಮನಿಸಿ

ಜತೆಗೆ ಅಧಿಸೂಚನೆಯ ಅನುಬಂಧ-1ರಲ್ಲಿನ ವಾಣಿಜ್ಯ ತೆರಿಗೆ ಅಧಿಕಾರಿ (ವಾಣಿಜ್ಯ ತೆರಿಗೆ ಇಲಾಖೆ) ಗ್ರೂಪ್‌-ಬಿ ವೃಂದದ ಆರ್‌.ಪಿ.ಸಿ. ಮತ್ತು ಹೈ.ಕ. ವೃಂದದ ವರ್ಗೀಕರಣದಲ್ಲಿ ಇಂಗ್ಲಿಷ್‌ನಲ್ಲಿ COMMRRCIAL TAX INSPECTOR GROUP-B ಎಂದಿದೆ. ಇದು COMMERCIAL TAX OFFICER GROUP-B ಎಂದಾಗಬೇಕು ಎಂದು ಪ್ರಕಟಣೆ ತಿಳಿಸಿದೆ.

ದಿನಾಂಕ ವಿಸ್ತರಣೆ

ಇನ್ನೊಂದು ಮುಖ್ಯ ವಿಚಾರ ಎಂದರೆ ಅರ್ಜಿ ಸಲ್ಲಿಕೆಯ ದಿನಾಂಕವನ್ನೂ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್‌ 3ರ ವರೆಗೆ ಅವಕಾಶ ನೀಡಲಾಗಿತ್ತು. ಜತೆಗೆ ಮೇ 5ರಂದು ಪೂರ್ವಭಾವಿ ಪರೀಕ್ಷೆ ನಡೆಸುವುದಾಗಿ ತಿಳಿಸಲಾಗಿತ್ತು. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಮತ್ತು ಚುನಾವಣಾ ಚಟುವಟಿಕೆ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಏಪ್ರಿಲ್‌ 15ರ ವರೆಗೆ ವಿಸ್ತರಿಸಲಾಗಿದೆ. ಮಾತ್ರವಲ್ಲ ಪೂರ್ವಭಾವಿ ಪರೀಕ್ಷೆಯನ್ನೂ ಮುಂದೂಡಲಾಗಿದೆ. ಪೂರ್ವಭಾವಿ ಪರೀಕ್ಷೆ ಜುಲೈ 7ರಂದು ನಡೆಯಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ. ರಾಕೇಶ್‌ ಕುಮಾರ್‌ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಗೆಜೆಟೆಡ್‌ ಪ್ರಬೇಷನರ್ಸ್‌ ನಿಯಮದ ಪ್ರಕಾರ ಮುಖ್ಯ ಪರೀಕ್ಷೆಯು ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್‌ ಎಂಬ ಎರಡು ಪ್ರತಿಯನ್ನು ಒಳಗೊಂಡಿದೆ. ಆಯೋಗವು ಈ ಹಿಂದೆ ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಎಲ್ಲ ಅಭ್ಯರ್ಥಿಗಳು ಈ ಪತ್ರಿಕೆಯನ್ನು ಕಡ್ಡಾಯವಾಗಿ ಬರೆಯಲೇಬೇಕು ಎಂದೂ ಸೂಚಿಸಲಾಗಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: KAS Recruitment 2024: ಕೆಎಎಸ್‌ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌; 384 ಹುದ್ದೆಗಳಿಗೆ ಅರ್ಜಿ ಆಹ್ವಾನ!

Exit mobile version