ಮೈಸೂರು : ಕೆಆರ್ ನಗರ ಎಂದು ಕರೆಸಿಕೊಳ್ಳುವ ಕೃಷ್ಣರಾಜ ನಗರ ತಾಲೂಕು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕಾಂಗ್ರೆಸ್ನ ಡಿ. ರವಿಶಂಕರ್ (103084) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಸಾ.ರಾ.ಮಹೇಶ್ (77261) ವಿರುದ್ಧ 25823 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ನಡೆದಿರುವ ಚುನಾವಣೆಗಳಲ್ಲಿ ಸಾ ರಾ ಮಹೇಶ್ ಅವರು ಕಾಂಗ್ರೆಸ್ನ ಡಿ ರವಿಶಂಕರ್ ವಿರುದ್ಧ 1,779 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಕೆಆರ್ ನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಕುರುಬ ಸಮುದಾಯದ ಮತಗಳು ಹೆಚ್ಚಿದ್ದು, ಒಟ್ಟು 2,06,000 ಮತದಾರರಿದ್ದಾರೆ. ಒಕ್ಕಲಿಗ ಸಮುದಾಯದ 60,000, ಕುರುಬ ಸಮುದಾಯದ 55,000, ಲಿಂಗಾಯತ ಸಮುದಾಯ 10,000 ಮತಗಳಿವೆ. ನಾಮದಾರಿ ಸಮಾಜದ 6000. ಉಳಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೇರಿದಂತೆ ಇತರೆ ಸಮುದಾಯದ ಮತದಾರರು ಇದ್ದಾರೆ.
1952ರಲ್ಲಿ ನಡೆದ ಕೆಆರ್ ನಗರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಎಸ್ ಹೆಚ್ ತಮ್ಮಯ್ಯ ಪಕ್ಷೇತರ ಅಭ್ಯರ್ಥಿಯಾಗಿ ಗೆಲವು ಸಾಧಿಸಿದ್ದರು. ಅಂತೆಯೇ 1978ರಿಂದ 1994ರವರೆಗೆ ಇಲ್ಲಿ ಎಚ್ ವಿಶ್ವನಾಥ್ ಹಾಗೂ ನಂಜಪ್ಪ ಅವರೇ ಚಾಪು ಮೂಡಿಸಿದ್ದರು. ಅವರಿಬ್ಬರೇ ಪ್ರತಿಯೊಂದು ಬಾರಿ ಗೆಲುವು ಸಾಧಿಸುತ್ತಿದ್ದರು. 1999ರಲ್ಲೂ ಅವರೇ ಕಾಂಗ್ರೆಸ್ನಿಂದ ಜಯ ಸಾಧಿಸಿದ್ದರು. ಆದರೆ 2008, 2013 ಹಾಗೂ 2018ರಲ್ಲಿ ಗೆದ್ದು ಸಾರಾ ಮಹೇಶ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.