Site icon Vistara News

Kuwait fire : ಕುವೈತ್ ನಲ್ಲಿ ಅಗ್ನಿ ಅವಘಡ: 5 ಭಾರತೀಯರು ಸೇರಿ 35 ಮಂದಿ ಸಾವು

Kuwait fire

ಕುವೈತ್: ದಕ್ಷಿಣ ಕುವೈತ್ ನ ಮಂಗಾಫ್ ನಗರದಲ್ಲಿ ಸಂಭವಿಸಿದ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ (Kuwait fire) ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಎಂದು ಆ ದೇಶದ ಸರ್ಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ. ವರದಿಗಳ ಪ್ರಕಾರ, ದುರಂತ ಘಟನೆಯಲ್ಲಿ ಕನಿಷ್ಠ ಐದು ಮಂದಿ ಭಾರತೀಯರು ಸಹ ಮೃತಪಟ್ಟಿದ್ದಾರೆ . ಈ ಕಟ್ಟಡವು ಹೆಚ್ಚಿನ ಸಂಖ್ಯೆಯಲ್ಲಿ ಕೇರಳಿಗರನ್ನು ಹೊಂದಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೃತರಲ್ಲಿ ಇಬ್ಬರು ತಮಿಳುನಾಡು ಮತ್ತು ಉತ್ತರ ಭಾರತದವರು ಎನ್ನಲಾಗಿದೆ. ಆದಾಗ್ಯೂ, ಅಧಿಕಾರಿಗಳಿಂದ ಅಧಿಕೃತ ದೃಢೀಕರಣಕ್ಕಾಗಿ ಇನ್ನೂ ಪ್ರಕಟಗೊಂಡಿಲ್ಲ.

ಕುವೈತ್ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಗಂಭೀರ ಸ್ಥಿತಿಯಲ್ಲಿರುವ ಕೆಲವರು ಸೇರಿದಂತೆ ಗಾಯಗೊಂಡ ಎಲ್ಲರನ್ನು ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಕಟ್ಟಡದ ಬೆಂಕಿಯಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಆರೈಕೆ ಒದಗಿಸಲು ವೈದ್ಯಕೀಯ ತಂಡಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

ವರದಿಯ ಪ್ರಕಾರ, ಬುಧವಾರ ಮುಂಜಾನೆ 4: 30 ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಪ್ರಾರಂಭಗೊಂಡಿತ್ತು. ಬೆಂಕಿಯನ್ನು ನೋಡಿದ ನಂತರ ಕೆಲವರು ಅಪಾರ್ಟ್​ಮೆಂಟ್​ನಿಂದ ಜಿಗಿದು ಮೃತಪಟ್ಟಿದ್ದರೆ ಇತರರು ಸುಟ್ಟಗಾಯಗಳು ಮತ್ತು ಹೊಗೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.

ಭಾರತೀಯ ಉದ್ಯಮಿಯ ಒಡೆತನದ ಕಟ್ಟಡ: ವರದಿ
ಒನ್​ಮನೋರಮಾ ವರದಿಯ ಪ್ರಕಾರ, ಹತ್ತಿರದ ವಾಣಿಜ್ಯ ಪ್ರದೇಶದ ಸುಮಾರು 195 ಕಾರ್ಮಿಕರು ಮತ್ತು ಹಲವಾರು ಮಲಯಾಳಿಗಳನ್ನು ವಾಸಿಸುತ್ತಿದ್ದ ಈ ಈ ಕಟ್ಟಡವು ಎನ್​ಬಿಟಿಸಿ ಗ್ರೂಪ್ ಗೆ ಸೇರಿದ್ದು. ಕೇರಳದ ಉದ್ಯಮಿ ಕೆಜಿ ಅಬ್ರಹಾಂ ಅವರ ಒಡೆತನದಲ್ಲಿರುವ ಈ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದರೂ, ಇನ್ನೂ ಹಲವಾರು ಮಂದಿ ಒಳಗೆ ಸಿಲುಕಿರುವ ವರದಿಗಳಿವೆ.

Exit mobile version