ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ (Lok Sabha Election 2024) ಮತದಾನ ಮಂಗಳವಾರ ನಡೆಯಲಿದೆ. ಇಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಕೇಂದ್ರದಲ್ಲಿ ಮತದಾರರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆಗಳ ಸುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಭದ್ರತೆ ಏರ್ಪಡಿಸಲಾಗಿದೆ.
14 ಕ್ಷೇತ್ರಗಳಲ್ಲಿ ಮತದಾನ
ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 14 ಕ್ಷೇತ್ರಗಳಲ್ಲಿ 28,269 ಮತಗಟ್ಟೆ ಸ್ಥಾಪಿಸಿದ್ದು, ಶಾಂತಿಯುತ ಚುನಾವಣೆ ನಡೆಸಲು ಸುಮಾರು 40 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಮತದಾನಕ್ಕಿಂತ ಇನ್ನೊಂದಿಲ್ಲ ಮತ್ತು ಅದು ಪ್ರತಿಯೊಬ್ಬ ನಾಗರಿಕರ ಹಕ್ಕು. ಎಲ್ಲರೂ ತಪ್ಪದೇ ಮೇ 7 ರಂದು ಬಂದು ತಮ್ಮ ಮತವನ್ನು ಚಲಾಯಿಸುವಂತೆ ಕರ್ನಾಟಕದ ಪ್ರಖ್ಯಾತ ಹಾಸ್ಯ ದಿಗ್ಗಜರಾದ ಪ್ರಾಣೇಶ್ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
— Chief Electoral Officer, Karnataka (@ceo_karnataka) May 6, 2024
@ECSIVEEP@SpokespersonECI#ceokarnataka #LokaSabhaElection2024#VotingMatters #may7 pic.twitter.com/93DziVJJic
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಘಟಾನುಘಟಿಗಳು ಸ್ಪರ್ಧಿಸಿರುವ 2ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಒಟ್ಟು 2.59 ಕೋಟಿ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
ಹಾವೇರಿ ಪಂಚಾಯತ್ ರಾಜ್ಯ ಇಂಜಿನೀಯರಿಂಗ್ ಕಚೇರಿಯಲ್ಲಿ ಸ್ಥಾಪಿಸಲಾದ ಗ್ರೀನ್ ಬೂತ್ ಮತದಾರರನ್ನು ಆಕರ್ಷಿಸಲು ಹಸಿರು ತಳಿರು ತೋರಣಗಳಿಂದ ಅಲಂಕೃತಗೊಂಡಿದೆ.#ceokarnataka #LokaSabhaElection2024#Election2024#YourVoteYourVoice#VotingMatters pic.twitter.com/9uK3DLmedX
— Chief Electoral Officer, Karnataka (@ceo_karnataka) May 6, 2024
227 ಅಭ್ಯರ್ಥಿಗಳು ಕಣದಲ್ಲಿ
ಕಾಂಗ್ರೆಸ್, ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ, ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ
ಪಕ್ಷಗಳು 23, ಸ್ವತಂತ್ರ ಅಭ್ಯರ್ಥಿಗಳು 117 ಸೇರಿ ಒಟ್ಟು 227 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಇದರಲ್ಲಿ 206
ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಈ ಕ್ಷೇತ್ರಗಳಲ್ಲಿ 2,59,52,958 ಮತದಾರರಿದ್ದು, 1,29,48,978 ಪುರುಷ, 1,29,64,570 ಮಹಿಳಾ ಹಾಗೂ 1,945 ತೃತೀಯ ಲಿಂಗಿ ಮತದಾರರು ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಕಡಿಮೆ 16,41,156 ಮತದಾರರಿದ್ದರೆ, ಅತಿ ಹೆಚ್ಚು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 20,98,202 ಮತದಾರರಿದ್ದಾರೆ.
ಮತದಾನದ ದಿನದಂದು ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಅನೇಕ ಸೌಲಭ್ಯಗಳನ್ನು ಮತಗಟ್ಟೆಗಳಲ್ಲಿ ಒದಗಿಸಲಾಗುವುದು. ಇಲ್ಲಿ ಪ್ರತಿ ಮತವೂ ಅಮೂಲ್ಯ.#ceokarnataka #LokaSabhaElection2024#Election2024#YourVoteYourVoice#VotingMatters pic.twitter.com/yeHVlWvFeE
— Chief Electoral Officer, Karnataka (@ceo_karnataka) May 6, 2024
ಮತದಾರರಿಗೆ ಮೂಲಸೌಕರ್ಯ
ತಾಪಮಾನ ಹೆಚ್ಚಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಆಯೋಗ ಮತದಾನದ ದಿನದಂದು ಮತಗಟ್ಟೆಯಲ್ಲಿ ಮತದಾರರಿಗಾಗಿ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಒಆರ್‌ಎಸ್ ಜ್ಯೂಸ್, ಕುಳಿತುಕೊಳ್ಳಲು ಕಾಯ್ದಿರಿಸಿದ ಕೊಠಡಿಗಳು, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಆಂಬ್ಯುಲೆನ್ಸ್ ವಾಹನಗಳು ಮುಂತಾದ ಹಲವು ಮೂಲ ಸೌಲಭ್ಯಗಳನ್ನು ಒದಗಿಸಿದೆ. ಇನ್ನು ದೃಷ್ಟಿಹೀನ ಮತದಾರರ ಸಹಾಯಕ್ಕಾಗಿ ಬ್ರೈಲ್ ಸೌಲಭ್ಯವುಳ್ಳ ಇವಿಎಂ ಗಳನ್ನು ಮತಗಟ್ಟೆಗಳಲ್ಲಿ ಅಳವಡಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು ಮತದಾರರ ಚೀಟಿ ನಿಮ್ಮ ಹತ್ತಿರ ಇಲ್ಲದಿದ್ದರೆ ಇವುಗಳಲ್ಲಿನ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಬಳಸಿ ಮತ ಚಲಾಯಿಸಬಹುದು.#ceokarnataka #LokaSabhaElection2024#Election2024#YourVoteYourVoice#VotingMatters pic.twitter.com/RJJBagyHXz
— Chief Electoral Officer, Karnataka (@ceo_karnataka) May 6, 2024
ಇದನ್ನೂ ಓದಿ | Lok Sabha Election 2024: ಗುಜರಾತ್‌ನಲ್ಲಿ ಶೇ.10ಕ್ಕಿಂತ ಹೆಚ್ಚು ಮುಸ್ಲಿಮರಿದ್ದರೂ ಕಾಂಗ್ರೆಸ್ ಒಬ್ಬ ಮುಸ್ಲಿಮನಿಗೂ ಟಿಕೆಟ್ ಕೊಟ್ಟಿಲ್ಲ!
ಮತದಾರರ ಗುರುತಿನ ಚೀಟಿ ಕಡ್ಡಾಯ
ಚುನಾವಣಾ ಆಯೋಗದಿಂದ ಈಗಾಗಲೇ ನೀಡಲಾಗಿರುವ ವೋಟರ್ ಸ್ಲಿಪ್ ಜತೆಗೆ ಮತದಾರರ ಗುರುತಿನ ಚೀಟಿ,
ಆಧಾರ್‌ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್, ಪೋಸ್ಟ್ ಆಫೀಸ್ ಪಾಸ್‌ಬುಕ್, ಕಾರ್ಮಿಕ ಸಚಿವರು ನೀಡುವ
ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೆಸೆನ್ಸ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಪಿಂಚಣಿಯ ದಾಖಲೆ,
ರಾಜ್ಯಸರ್ಕಾರ, ಸಾರ್ವಜನಿಕ ಸಂಸ್ಥೆಗಳು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ
ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಎಂಪಿ, ಎಂಎಲ್‌ಎ, ಎಂಎಲ್‌ಸಿಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಸಾಮಾಜಿಕ ನ್ಯಾಯ ಸಬಲೀಕರಣ ನೀಡಿರುವ ವಿಶಿಷ್ಟ ಅಂಗವಿಕಲ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಬಹುದು.