ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ (lok sabha election 2024) ಮಂಗಳವಾರ ನಡೆದಿದ್ದು, ಮತದಾರರು ಉತ್ಸಾಹದಿಂದ ಹಕ್ಕು ಚಲಾವಣೆ ಮಾಡಿದ್ದಾರೆ. ಸಂಜೆ 5ಗಂಟೆವರೆಗೆ ಶೇ.66.05 ಮತದಾನ (Voter Turnout) ನಡೆದಿದೆ.
14 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದ ಮತದಾನ ಸಂಜೆ 6ಗಂಟೆವರೆಗೆ ನಡೆಯಲಿದೆ. ಬೆಳಗ್ಗೆ ಮೊದಲ ಎರಡು ಗಂಟೆಗಳಲ್ಲಿ ಅಂದರೆ 9 ಗಂಟೆವರೆಗೆ ಶೇ.9.45% ಮತದಾನ ದಾಖಲಾಗಿತ್ತು. ಬಳಿಕ 11 ಗಂಟೆಗೆ ಶೇ.24.48 ಹಾಗೂ 1 ಗಂಟೆವರೆಗೆ ಶೇ.41.59 ಮತದಾನ ವರದಿಯಾಗಿತ್ತು. ಅದೇ ರೀತಿ ಮಧ್ಯಾಹ್ನ 3ಗಂಟೆವರೆಗೆ ಶೇ.54.20 ವೋಟಿಂಗ್ ನಡೆದಿದೆ. ಇನ್ನು ಸಂಜೆ 5 ಗಂಟೆ ವೇಳೆಗೆ ಶೇ. 66.05 ವೋಟಿಂಗ್ ದಾಖಲಾಗಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಗರಿಷ್ಠ ಶೇ.72.75 ಮತದಾನವಾಗಿದ್ದು, ಕಲಬುರಗಿಯಲ್ಲಿ ಕನಿಷ್ಠ ಶೇ.57.20 ವೋಟಿಂಗ್ ಆಗಿದೆ.
ಇಂದು ನಡೆಯುತ್ತಿರುವ ಕರ್ನಾಟಕ ಲೋಕಸಭಾ ಚುನಾವಣೆ 2024ರ ಸಂಜೆ 5 ಗಂಟೆಯ ವರೆಗಿನ ಶೇಕಡಾವಾರು ಮತದಾನ ಹೀಗಿದೆ. ಮತದಾನ ಮಾಡಲು ಇನ್ನು ಕೆಲವೇ ಕ್ಷಣಗಳು ಉಳಿದಿವೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ, ಬೇಗ ಬಂದು ವೋಟ್ ಹಾಕಿ.@ECISVEEP@SpokespersonECI#ceokarnataka #LokaSabhaElection2024#Election#DeshkaGarv #VoteIndia pic.twitter.com/U5BtMTpkFI
— Chief Electoral Officer, Karnataka (@ceo_karnataka) May 7, 2024
ಕ್ಷೇತ್ರವಾರು ಮತದಾನ ಮಾಹಿತಿ
ಚಿಕ್ಕೋಡಿ-ಶೇ. 72.75
ಬೆಳಗಾವಿ- ಶೇ.65.67
ಬಾಗಲಕೋಟೆ- ಶೇ.65.55
ವಿಜಯಪುರ-ಶೇ.60.95
ಕಲಬುರಗಿ- ಶೇ. 57.20
ರಾಯಚೂರು-ಶೇ.59.48
ಬೀದರ್- ಶೇ.60.17
ಕೊಪ್ಪಳ- ಶೇ.66.05
ಬಳ್ಳಾರಿ-ಶೇ.68.94
ಹಾವೇರಿ-ಶೇ.71.90
ಧಾರವಾಡ-ಶೇ.67.15
ಉತ್ತರ ಕನ್ನಡ – 69.57
ದಾವಣಗೆರೆ-ಶೇ.70.90
ಶಿವಮೊಗ್ಗ-72.07
ಇದನ್ನೂ ಓದಿ Lok Sabha Election 2024: ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 54.20 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?