ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ಚುರುಕುಗೊಳಿಸಿವೆ. ಈ ನಡುವೆ ಬಿಜೆಪಿಯಿಂದ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ನಾಯಕರಿಗೆ ಸ್ಥಾನ ನೀಡಲಾಗಿದೆ. ಪ್ರಮುಖವಾಗಿ ಈ ಬಾರಿ ರಾಜ್ಯದಲ್ಲಿ ಟಿಕೆಟ್ ಕೈತಪ್ಪಿದ ನಾಯಕರಿಗೆ ಅವಕಾಶ ನೀಡಿರುವುದು ಕಂಡುಬಂದಿದೆ.
ಕರ್ನಾಟಕದಲ್ಲಿ ನಡೆಯುವ ಚುನಾವಣಾ ಪ್ರಚಾರಕ್ಕಾಗಿ ಒಟ್ಟು 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, 10 ಕೇಂದ್ರ ಸಚಿವರು, 3 ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ನಾಯಕರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಇವರು ರಾಜ್ಯದಲ್ಲಿ ನಡೆಯುವ ಬಿಜೆಪಿ ಸಭೆ, ಸಮಾವೇಶ, ರೋಡ್ ಶೋಗಳಲ್ಲಿ ಭಾಗಿಯಾಗಿ ಪ್ರಚಾರ ಮಾಡಲಿದ್ದಾರೆ.
ರಾಜ್ಯದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರಲ್ಹಾದ್ ಜೋಶಿ, ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಹಲವರು ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ | Lok Sabha Election 2024: ಸುಮಲತಾ ಭೇಟಿ ಮಾಡಿದ ವಿಜಯೇಂದ್ರ; ನಾಳೆಯೇ ಫೈನಲ್ ಅಂದ್ರು ರೆಬೆಲ್ ಲೇಡಿ!
ಟಿಕೆಟ್ ವಂಚಿತ ಹಾಲಿ ಸಂಸದರ ಪೈಕಿ ಡಿ.ವಿ. ಸದಾನಂದ ಗೌಡ, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್ ಎ. ನಾರಾಯಣಸ್ವಾಮಿ ಪಟ್ಟಿಯಲ್ಲಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೂ ಅವಕಾಶ ನೀಡಲಾಗಿದೆ. ಇನ್ನು ಮೈಸೂರು ಅಭ್ಯರ್ಥಿ ಯದುವೀರ್ ಒಡೆಯರ್‌ಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಅದೇ ರೀತಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹೆಸರು ಕೂಡ ಇಲ್ಲ.
ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಬಿಜೆಪಿ ಸ್ಟಾರ್ ನಾಯಕರ ಪಟ್ಟಿ
- ನರೇಂದ್ರ ಮೋದಿ
- ಜೆ.ಪಿ.ನಡ್ಡಾ
- ರಾಜನಾಥ್ ಸಿಂಗ್
- ಅಮಿತ್ ಶಾ
- ನಿತಿನ್ ಗಡ್ಕರಿ
- ಬಿ.ಎಸ್. ಯಡಿಯೂರಪ್ಪ
- ಬಿ.ವೈ. ವಿಜಯೇಂದ್ರ
- ಎಸ್. ಜೈಶಂಕರ್
- ನಿರ್ಮಲಾ ಸೀತಾರಾಮನ್
- ಪ್ರಲ್ಹಾದ್ ಜೋಶಿ
- ಸ್ಮೃತಿ ಇರಾನಿ
- ಶೋಭಾ ಕರಂದ್ಲಾಜೆ
- ಎ. ನಾರಾಯಣಸ್ವಾಮಿ
- ಆರ್. ಅಶೋಕ್
- ಕೆ. ಅಣ್ಣಾಮಲೈ
- ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್
- ಯೋಗಿ ಆದಿತ್ಯನಾಥ್
- ಹಿಮಂತ ಬಿಸ್ವಾ ಶರ್ಮಾ
- ಡಾ. ಪ್ರಮೋದ್ ಸಾವಂತ್
- ದೇವೇಂದ್ರ ಫಡ್ನವಿಸ್
- ಬಸವರಾಜ ಬೊಮ್ಮಾಯಿ
- ಸುಧಾಕರ್ ರೆಡ್ಡಿ
- ಡಿ.ವಿ. ಸದಾನಂದ ಗೌಡ
- ಜಗದೀಶ ಶೆಟ್ಟರ್
- ನಳಿನ್ ಕುಮಾರ್ ಕಟೀಲ್
- ಸಿ.ಟಿ. ರವಿ
- ಎಂ. ಗೋವಿಂದ್ ಕಾರಜೋಳ್
- ಡಾ. ಸಿ.ಎನ್. ಅಶ್ವತ್ಥನಾರಾಯಣ
- ಬಿ.ಶ್ರೀರಾಮುಲು
- ಅರವಿಂದ ಲಿಂಬಾವಳಿ
- ವಿ. ಸುನೀಲಕುಮಾರ್
- ಜಿ.ವಿ. ರಾಜೇಶ್
- ಪಿ. ರಾಜೀವ್
- ಜೆ. ಪ್ರೀತಂ ಗೌಡ
- ಬಸನಗೌಡ ಪಾಟೀಲ್ ಯತ್ನಾಳ್
- ಬೈರತಿ ಬಸವರಾಜ
- ಪ್ರಮೋದ್ ಮಧ್ವರಾಜ್
- ಛಲವಾದಿ ನಾರಾಯಣಸ್ವಾಮಿ
- ಪ್ರತಾಪ್ ಸಿಂಹ
- ಎನ್. ಮಹೇಶ್
Lok Sabha Election 2024: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನಿಂದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು (JDS candidates list) ಅಂತಿಮಗೊಂಡಿದ್ದು, ಅಭ್ಯರ್ಥಿಗಳ ಅಧಿಕೃತ ಪಟ್ಟಿ ಶುಕ್ರವಾರ ಬಿಡುಗಡೆಯಾಗಿದೆ. ಮಂಡ್ಯದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬು ಹಾಗೂ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ.
ರಾಜ್ಯ ಜೆಡಿಎಸ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗಿದೆ. ಆದರೆ, ಕಾರಣಾಂತರಗಳಿಂದ ಪಟ್ಟಿ ಘೋಷಣೆ ಮುಂದೂಡಿಕೆಯಾಗಿತ್ತು. ಇದೀಗ ಮಾಜಿ ಸಿಎಂ ಎಚ್‌ಡಿಕೆ ಅವರು, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕರ್ತರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ನಿರೀಕ್ಷೆಯಂತೆ ಹಾಸನದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು, ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಲಾಗಿದೆ. ಇನ್ನು ಕೋಲಾರದಲ್ಲಿ ಮಲ್ಲೇಶ್ ಬಾಬುಗೆ ಟಿಕೆಟ್ ನೀಡಿರುವುದು ಕಂಡುಬಂದಿದೆ.
ಮಂಡ್ಯ ಕೋಲಾರ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳಿಗೆ ಎನ್.ಡಿ.ಎ ಮೈತ್ರಿ ಅಭ್ಯರ್ಥಿಗಳಾಗಿ ಆಯ್ಕೆಯಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ (ಮಂಡ್ಯ) , ಶ್ರೀ ಮಲ್ಲೇಶ್ ಬಾಬು (ಕೋಲಾರ) ಹಾಗೂ ಶ್ರೀ ಪ್ರಜ್ವಲ್ ರೇವಣ್ಣ (ಹಾಸನ) ಅವರಿಗೆ ಅಭಿನಂದನೆಗಳು. 💐 pic.twitter.com/QLUmL2AtHU
— Janata Dal Secular (@JanataDal_S) March 29, 2024
ಇದನ್ನೂ ಓದಿ | Lok Sabha Election 2024: ಅನುಮಾನ ಬೇಡ, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ: ಸಾಹಿತಿ ಎಸ್.ಎಲ್. ಭೈರಪ್ಪ
ಕೋಲಾರ ಕ್ಷೇತ್ರದಲ್ಲಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ, ಬಂಗಾರಪೇಟೆ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಮಲ್ಲೇಶ್ ಬಾಬು, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ಈ ಪೈಕಿ ಸಮೃದ್ಧಿ ಮಂಜುನಾಥ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಅಂತಿಮವಾಗಿ ಮಲ್ಲೇಶ್ ಬಾಬು ಅವರಿಗೆ ಪಕ್ಷ ಮಣೆ ಹಾಕಿದೆ.