ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election 2024) ರಾಜ್ಯ ಕಾಂಗ್ರೆಸ್‌ನ ಅಭ್ಯರ್ಥಿಗಳ (Congress candidates List) ಪಟ್ಟಿ ಬಿಡುಗಡೆಗೆ ಕೌಂಟ್‌ಡೌನ್ ನಡೆಯುತ್ತಿದ್ದು, ಇಂದು ರಾಜ್ಯದ 17 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ.
ಎರಡು ದಿನಗಳಿಂದ ಈ ಕುರಿತು ದೆಹಲಿಯಲ್ಲಿ ವರಿಷ್ಠರ ಸರಣಿ ಸಭೆ ನಡೆಯುತ್ತಿದ್ದು, ಅಳೆದು ತೂಗಿ ಟಿಕೆಟ್ ಹಂಚಿಕೆ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ (AICC president) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಜೊತೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕುಳಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಆ 17 ಕ್ಷೇತ್ರಗಳ ಅಭ್ಯರ್ಥಿಗಳು ಯಾರ್ಯಾರು? ಸಂಭಾವ್ಯ ಪಟ್ಟಿ ಇಲ್ಲಿದೆ:
ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
ಬೆಂಗಳೂರು ಕೇಂದ್ರ- ಮನ್ಸೂರ್ ಅಲಿಖಾನ್
ಬೆಂಗಳೂರು ಉತ್ತರ – ಪ್ರೊ.ರಾಜೀವ್ ಗೌಡ
ಮೈಸೂರು – ಕೊಡಗು – ಎಂ.ಲಕ್ಷ್ಮಣ್
ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ
ದಕ್ಷಿಣ ಕನ್ನಡ – ಪದ್ಮರಾಜ್
ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್
ಬಾಗಲಕೋಟೆ – ಸಂಯುಕ್ತಾ ಶಿವಾನಂದ ಪಾಟೀಲ್
ರಾಯಚೂರು – ಕುಮಾರ್ ನಾಯಕ್
ಚಿತ್ರದುರ್ಗ – ಚಂದ್ರಪ್ಪ
ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್
ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ
ಹುಬ್ಬಳ್ಳಿ-ಧಾರವಾಡ – ವಿನೋದ್ ಅಸೂಟಿ
ಬೀದರ್ – ರಾಜಶೇಖರ್ ಪಾಟೀಲ್
ಕೊಪ್ಪಳ – ರಾಜಶೇಖರ್ ಹಿಟ್ನಾಳ್
ದಾವಣಗೆರೆ – ಡಾ.ಪ್ರಭಾ ಮಲ್ಲಿಕಾರ್ಜುನ್
ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
ಪೆಂಡಿಂಗ್ ಕ್ಷೇತ್ರಗಳು
ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ – ಶಿವಶಂಕರ್ ರೆಡ್ಡಿ, ವೀರಪ್ಪ ಮೊಯ್ಲಿ
ಕೋಲಾರ – ಚಿಕ್ಕಪೆದ್ದಣ್ಣ, ಎಲ್.ಹನುಮಂತಯ್ಯ,
ಚಾಮರಾಜನಗರ – ಸುನೀಲ್ ಬೋಸ್, ದರ್ಶನ್ ಧ್ರುವ ನಾರಾಯಣ
ಬಳ್ಳಾರಿ – ಸೌಪರ್ಣಿಕಾ ತುಕಾರಾಂ, ವೆಂಕಟೇಶ್ ಪ್ರಸಾದ್, ವಿ.ಎಸ್. ಉಗ್ರಪ್ಪ
ನಾಳೆ ಬಿಜೆಪಿ 2ನೇ ಪಟ್ಟಿ
ನಾಳೆ ರಾಜ್ಯ ಬಿಜೆಪಿಯ 2ನೇ ಪಟ್ಟಿ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ. 5 ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯನ್ನು ವರಿಷ್ಠರು ಪೆಂಡಿಂಗ್ ಇಟ್ಟಿದ್ದಾರೆ. 2 ದಿನಗಳಿಂದ ರಾಜ್ಯದಲ್ಲಿ ಟಿಕೆಟ್‌ಗಾಗಿ ನಡೆಯುತ್ತಿರುವ ಕ್ಷೇತ್ರ ರಾಜಕೀಯದ ಬಗ್ಗೆ ಇಲ್ಲಿನ ನಾಯಕರಿಂದ ವರಿಷ್ಠರಿಗೆ ಮಾಹಿತಿ ಹೋಗಿದೆ. ಟಿಕೆಟ್‌ಗಾಗಿ ತೀವ್ರ ಫೈಟ್ ಇರೋ ಕ್ಷೇತ್ರಗಳನ್ನು ತಡವಾಗಿ ಘೋಷಣೆ ಮಾಡಲಾಗುತ್ತಿದೆ.
ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬೆಳಗಾವಿ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಜಿದ್ದಾಜಿದ್ದಿನ ಫೈಟ್ ಇದೆ. ಸಂಭಾವ್ಯ ಅಭ್ಯರ್ಥಿಗಳು:
ಚಿಕ್ಕಬಳ್ಳಾಪುರ – ಡಾ.ಕೆ. ಸುಧಾಕರ್ – ಅಲೋಕ್ ವಿಶ್ವನಾಥ್
ಉತ್ತರ ಕನ್ನಡ – ಹರಿಪ್ರಕಾಶ್ ಕೋಣೆಮನೆ – ವಿಶ್ವೇಶ್ವರ ಹೆಗಡೆ ಕಾಗೇರಿ
ಚಿತ್ರದುರ್ಗ – ನಾರಾಯಣ ಸ್ವಾಮಿ – ಜನಾರ್ದನ ಸ್ವಾಮಿ
ರಾಯಚೂರು – ಅಮರೇಶ್ವರ ನಾಯಕ್ – ಬಿ.ವಿ. ನಾಯಕ್
ಬೆಳಗಾವಿ – ಜಗದೀಶ್ ಶೆಟ್ಟರ್ – ಈರಣ್ಣ ಕಡಾಡಿ
ಎರಡನೇ ಪಟ್ಟಿ ಬಿಡುಗಡೆ ಮುನ್ನವೇ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ ತಲೆದೋರಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗಳಲ್ಲಿ ಟಿಕೆಟ್ ವಂಚಿತರ ಬಂಡಾಯ ಪಕ್ಕಾ ಎನ್ನುವಂತಿದೆ. ಆಕ್ಷೇಪ- ಅಸಮಾಧಾನಗಳ ಹೇಳಿಕೆಗಳೇ ಅಭ್ಯರ್ಥಿಗಳಿಗೆ ಕಂಟಕವಾಗಬಹುದು ಎನ್ನಲಾಗಿದೆ.
ಜಗದೀಶ್ ಶೆಟ್ಟರ್‌ಗೆ ಬೆಳಗಾವಿಯಲ್ಲೇ ಗೋಬ್ಯಾಕ್ ಎಫೆಕ್ಟ್ ಕಾಣಿಸಿಕೊಂಡಿದೆ. ಬಾಗಲಕೋಟೆಯಲ್ಲಿ ಸಂಯುಕ್ತಾ ಪಾಟೀಲ್‌ಗೂ ಗೋ ಬ್ಯಾಕ್ ಸಮಸ್ಯೆ ಎದುರಾಗಿದೆ. ದಾವಣಗೆರೆಯಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್ ಸ್ಪರ್ಧೆಗೂ ವಿರೋಧ ಕಂಡುಬಂದಿದೆ. ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್‌ಗೂ ಬಂಡಾಯದ, ಒಳಪೆಟ್ಟಿನ ಭಯ ಕಾಣಿಸಿಕೊಂಡಿದೆ. ಕೊಪ್ಪಳದಲ್ಲಿ ಟಿಕೆಟ್‌ವಂಚಿತರಾದ ಸಂಗಣ್ಣ ಕರಡಿ ಪಕ್ಷೇತರ ಸ್ಪರ್ಧೆಯ ಬಗ್ಗೆ ಸುಳಿವು ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್‌ಗೆ ಟಿಕೆಟ್ ಕೊಟ್ಟರೆ ವಿಶ್ವನಾಥ್ ವಿರೋಧ ತಲೆದೋರಬಹುದು. ಇವುಗಳನ್ನು ನಿಭಾಯಿಸುವ ತಲೆನೋವು ವರಿಷ್ಠರಿಗೆ ಉಂಟಾಗಿದೆ.
ಇದನ್ನೂ ಓದಿ: Lok Sabha Election 2024: 17 ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಅಂತಿಮವಾಗಿದೆ: ಡಿಕೆಶಿ