ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರ ಕಣ ಬಿರುಸಾಗುತ್ತಿರುವಂತೆ, ಪ್ರಮುಖ ಮಾಧ್ಯಮ ಸಂಸ್ಥೆಗಳು ತಮ್ಮ ಸಮೀಕ್ಷೆಯ ವಿವರಗಳನ್ನು ಹೊರಗೆಡಹುತ್ತಿವೆ. ಇತ್ತೀಚಿನ ಟೈಮ್ಸ್ ನೌ- ಇಟಿಜಿ (TIMES NOW-ETG) ಸಂಶೋಧನಾ ಸಮೀಕ್ಷೆಯ (Poll survey) ಪ್ರಕಾರ ಬಿಜೆಪಿ (BJP) ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಭರ್ಜರಿ ಗೆಲುವು ಸಾಧಿಸಲು ಸಜ್ಜಾಗಿದೆ. ಎನ್‌ಡಿಎ (NDA) 370ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಗೆಲುವು ಸಾಧಿಸಲಿದೆ ಎಂದು ಕಂಡುಬಂದಿದೆ.
ಟೈಮ್ಸ್ ನೌ- ಇಟಿಜಿ ಸರ್ವೇಯು ಸಂಭಾವ್ಯ ಸೀಟ್ ಗಳಿಕೆಯ ಕುರಿತು ಕೆಲವು ಮಹತ್ವದ ಒಳನೋಟಗಳನ್ನು ಅನಾವರಣಗೊಳಿಸಿದೆ. ಈ ಹಿಂದೆ ಫೆಬ್ರವರಿಯಲ್ಲಿ ಟೈಮ್ಸ್ ನೌ – ಇಟಿಜಿ ರಿಸರ್ಚ್ ನಡೆಸಿದ್ದ ಸಮೀಕ್ಷೆಯಲ್ಲಿ ಕೂಡ ಇದೇ ಬಗೆಯ ಭವಿಷ್ಯ ನುಡಿದಿತ್ತು. ಆದರೆ ಎನ್‌ಡಿಎ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ ಎನ್ನಲಾಗಿತ್ತು.
TIMES NOW- @ETG_Research Survey
— TIMES NOW (@TimesNow) April 4, 2024
Overall (Total Seats: 543) || Here are seat share projections-
– BJP: 329-359
– Congress: 27-47
– YSRCP: 21-22
– DMK: 24-28
– TMC: 17-21
– BJD: 10-12
– AAP: 5-7
– Others: 72-92@TheNewshour | @navikakumar pic.twitter.com/kD3uWbjHyo
ಸಮೀಕ್ಷೆಯ ಪ್ರಕಾರ ವಿವಿಧ ರಾಜಕೀಯ ಪಕ್ಷಗಳಿಗೆ ಈ ಕೆಳಗಿನಂತೆ ಸೀಟು ಹಂಚಿಕೆ ಆಗಲಿದೆಯಂತೆ:
ಒಟ್ಟು ಸ್ಥಾನಗಳು: 543
ಬಿಜೆಪಿ: 329-359 ಸ್ಥಾನಗಳು
ಕಾಂಗ್ರೆಸ್: 27-47 ಸ್ಥಾನಗಳು
ವೈಎಸ್‌ಆರ್‌ಸಿಪಿ: 21 – 22 ಸ್ಥಾನಗಳು
ಡಿಎಂಕೆ: 24-28 ಸ್ಥಾನಗಳು
ಟಿಎಂಸಿ: 17 – 21 ಸ್ಥಾನಗಳು
ಬಿಜೆಡಿ: 10-12 ಸ್ಥಾನಗಳು
ಎಎಪಿ: 5-7 ಸ್ಥಾನಗಳು
ಇತರೆ: 72 – 92 ಸ್ಥಾನಗಳು
ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಾಯಕತ್ವವನ್ನು ಶೇ.91ರಷ್ಟು ಜನರು ನಂಬಿದ್ದಾರೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಹುಮತ ಗಳಿಸಲಿದೆ ಎಂದು ಇವರು ಭರವಸೆ ಹೊಂದಿದ್ದಾರಂತೆ. ಶೇ.45ರಷ್ಟು ಜನರು ಬಿಜೆಪಿ ನೇತೃತ್ವದ ಎನ್‌ಡಿಎ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.14ಕ್ಕೂ ಹೆಚ್ಚು ಮಂದಿ ಮಾತ್ರ ಆಡಳಿತಾರೂಢ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದಿದ್ದಾರೆ.
ಪ್ರಧಾನಿ ಹುದ್ದೆಗೆ ಯಾರು?
ಪ್ರಧಾನಿ ನರೇಂದ್ರ ಮೋದಿ ಅವರೇ ಹೆಚ್ಚಿನವರ ನೆಚ್ಚಿನ ಪ್ರಧಾನ ಮಂತ್ರಿ ಆಯ್ಕೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಟೈಮ್ಸ್ ನೌ-ಇಟಿಜಿ ಸಮೀಕ್ಷೆಯ ಪ್ರಕಾರ ಶೇ.64ರಷ್ಟು ಜನರು ನರೇಂದ್ರ ಮೋದಿ ಪ್ರಧಾನಿ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, 17 ಪ್ರತಿಶತ ಮತದಾರರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಭಾವಿಸಿದ್ದಾರೆ. ಬೇರೆ ಯಾರಾದರೂ ಪ್ರಧಾನಿಯಾಗಬಹುದು ಎಂದು ಭಾವಿಸಿರುವವರು ಶೇಕಡಾ ಹತ್ತೊಂಬತ್ತು ಮಂದಿ.
ಲೋಕಸಭೆ ಚುನಾವಣೆ 2024 ಏಪ್ರಿಲ್ 19ರಿಂದ 7 ಹಂತಗಳಲ್ಲಿ ನಡೆಯಲಿದೆ. ಜೂನ್ 1ರಂದು ಕೊನೆಗೊಳ್ಳಲಿದೆ. ಮತಗಳ ಎಣಿಕೆ ಜೂನ್ 4ರಂದು ನಡೆಯಲಿದೆ.
ಇದನ್ನೂ ಓದಿ: Narendra Modi: ಸಂದೇಶಖಾಲಿಯ ಅಪರಾಧಿಗಳಿಗೆ ಕಠಿಣ ಶಿಕ್ಷೆ ಒದಗಿಸುವುದೇ ಬಿಜೆಪಿಯ ಗುರಿ ಎಂದ ಮೋದಿ