ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತಕ್ಕೆ ಕೇವಲ ಹದಿನೈದು ದಿನಗಳು ಬಾಕಿಯಿದ್ದು, ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಡುವಿನ ತುರುಸಿನ ಸ್ಪರ್ಧೆಯಲ್ಲಿ ಬುಡಕಟ್ಟು ಮತಗಳು (Scheduled Tribes) ನಿರ್ಣಾಯಕ ಪಾತ್ರವನ್ನು ವಹಿಸುವ ಕೆಲವು ಪ್ರಮುಖ ಹಿಂದಿ ಹೃದಯಭಾಗದ (Hindi heartland states) ರಾಜ್ಯಗಳತ್ತ ಎಲ್ಲರ ಕಣ್ಣು ನೆಟ್ಟಿದೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ನಂತರ ಬಿಜೆಪಿ ಲವಲವಿಕೆ ಪಡೆದುಕೊಂಡಿದ್ದು, ಅಲ್ಲಿನ ಬುಡಕಟ್ಟು ಮತಗಳ (Votes) ಕ್ರೋಡೀಕರಣ ಈ ರಾಜ್ಯಗಳನ್ನು ಪಡೆಯಲು ಬಿಜೆಪಿಗೆ ಸಹಾಯ ಮಾಡಿದೆ. ಇಲ್ಲಿ ಈಗ ಕಾಂಗ್ರೆಸ್ ತನ್ನ ಅದೃಷ್ಟವನ್ನು ಪರೀಕ್ಷಿಸಲು ಮತ್ತೆ ಮುಂದಾಗಿದೆ.
ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾದ 47 ಲೋಕಸಭಾ ಕ್ಷೇತ್ರಗಳ ಕದನವು ನಿರ್ಣಾಯಕವಾಗಲಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ. ಇಲ್ಲಿ ಪಕ್ಷಗಳು ತಮ್ಮ ಪೈಪೋಟಿ ನಡೆಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯು ಬುಡಕಟ್ಟು ಮತಬ್ಯಾಂಕ್‌ಗಳಲ್ಲಿ ಯಶಸ್ವಿಯಾಗಿ ಪ್ರವೇಶಿಸಿದೆ. ಈ ಮತಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನೊಂದಿಗೆ ದೀರ್ಘಕಾಲ ಇದ್ದವು. ST ಮೀಸಲು ಸ್ಥಾನಗಳಲ್ಲಿ ಬಿಜೆಪಿಯ ಗಳಿಕೆ 2009ರಲ್ಲಿದ್ದ 13 ಸ್ಥಾನಗಳಿಂದ 2014ರಲ್ಲಿ 27ಕ್ಕೆ, 2019ರಲ್ಲಿ 31ಕ್ಕೆ ಏರಿತು. ಹೋಲಿಸಿದರೆ, ಮೀಸಲು ಸ್ಥಾನಗಳಲ್ಲಿ 2009ರಲ್ಲಿ 20 ಸ್ಥಾನಗಳಿದ್ದ ಕಾಂಗ್ರೆಸ್ 2014ರಲ್ಲಿ ಐದು ಸ್ಥಾನಗಳಿಗೆ ಇಳಿದಿದೆ. 2019ರಲ್ಲಿ ಕಾಂಗ್ರೆಸ್ 47 ಮೀಸಲು ಸ್ಥಾನಗಳಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ.
ಇತ್ತೀಚಿನ ಅಸೆಂಬ್ಲಿ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿಯ ಅದ್ಭುತ ಗೆಲುವಿಗೆ ಮೋದಿ ಸರ್ಕಾರದ ದೀರ್ಘಾವಧಿಯ ಕಾರ್ಯತಂತ್ರದ ಮೂಲಕ ಸಮುದಾಯವನ್ನು ಓಲೈಸುವ ಪ್ರಯತ್ನಗಳು, ಕಲ್ಯಾಣ ಕ್ರಮಗಳು ಕಾರಣವೆಂದು ಹೇಳಲಾಗಿದೆ. ದೇಶದ ಬುಡಕಟ್ಟು ಜನಸಂಖ್ಯೆಯಲ್ಲಿ ಸುಮಾರು 31%ರಷ್ಟನ್ನು ಮಧ್ಯಪ್ರದೇಶ ಎಂಪಿ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳು ಹೊಂದಿದ್ದು, ಇಲ್ಲಿನ ಗೆಲುವು ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ನಿರ್ಣಾಯಕವಾಗಿದೆ. ಇದರಲ್ಲಿ ಎಂಪಿ 21.1%ರಷ್ಟು ಎಸ್‌ಟಿ ಜನಸಂಖ್ಯೆಯನ್ನು ಹೊಂದಿದ್ದರೆ, ಛತ್ತೀಸ್‌ಗಢ ಸುಮಾರು 30.6% ಮತ್ತು ರಾಜಸ್ಥಾನ 13.49% ಜನಸಂಖ್ಯೆ ಹೊಂದಿವೆ.
ಇತ್ತೀಚಿನ ತಿಂಗಳುಗಳಲ್ಲಿ ಮೋದಿ ಸರ್ಕಾರವು ಘೋಷಿಸಿದ ವಿವಿಧ ಕ್ರಮಗಳಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಮಿಷನ್ ಅಡಿಯಲ್ಲಿನ 24,000 ಕೋಟಿ ರೂ. ಈ ಯೋಜನೆಯು ಅಂಚಿನಲ್ಲಿ ವಾಸಿಸುವ ಸಮುದಾಯಕ್ಕೆ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಬುಡಕಟ್ಟು ಸಮುದಾಯದಿಂದ ಮೊದಲ ರಾಷ್ಟ್ರಪತಿಯನ್ನು ನೇಮಿಸಿರುವ ಬಿಜೆಪಿಯ ನಡೆ, ಈ ಸಮುದಾಯದ ನಡುವೆ ತನ್ನ ಬೆಂಬಲವನ್ನು ಬಲಪಡಿಸಲು ಪಕ್ಷಕ್ಕೆ ಸಹಾಯ ಮಾಡಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಎಸ್‌ಟಿ ಸಮುದಾಯಕ್ಕೆ 2013-14ರಲ್ಲಿ 4,295.94 ಕೋಟಿ ರೂ.ಗಳಿದ್ದ ಬಜೆಟ್ ಹಂಚಿಕೆಯನ್ನು 2023-24ರಲ್ಲಿ 12,461.88 ಕೋಟಿ ರೂ.ಗೆ ಹೆಚ್ಚಿಸಿರುವುದು, ಎಸ್‌ಟಿ ವಿದ್ಯಾರ್ಥಿಗಳಿಗೆ ಏಕಲವ್ಯ ಶಾಲೆಗಳ ಸ್ಥಾಪನೆಯಂತಹ ಇತರ ಕ್ರಮಗಳು ಬಿಜೆಪಿಗೆ ಬಲವನ್ನು ನೀಡಿವೆ. ಕೇಂದ್ರದ ಕಲ್ಯಾಣ ಕ್ರಮಗಳು ಇತ್ತೀಚಿನ ಎಂಪಿ ಅಸೆಂಬ್ಲಿ ಚುನಾವಣೆಯಲ್ಲಿ ಆಡಳಿತ ವಿರೋಧಿಗಳನ್ನು ಸೋಲಿಸಲು ಬಿಜೆಪಿಗೆ ಬಲ ನೀಡಿದ ಒಂದು ಕಾರಣ ಎಂದು ವಿಶ್ಲೇಷಕರು ಹೇಳುತ್ತಾರೆ. 47 ಮೀಸಲು ಎಸ್‌ಟಿ ಕ್ಷೇತ್ರಗಳ ಪೈಕಿ 26ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಛತ್ತೀಸ್‌ಗಢದಲ್ಲಿ 29 ಎಸ್‌ಟಿ ಮೀಸಲು ಸ್ಥಾನಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 11 ಗೆದ್ದಿವೆ. ಆದರೆ 2018ರಲ್ಲಿ ಕಾಂಗ್ರೆಸ್ 25 ಎಸ್‌ಟಿ ಮತ್ತು ಬಿಜೆಪಿ ಕೇವಲ 3 ಹೊಂದಿದ್ದವು. ರಾಜಸ್ಥಾನದಲ್ಲಿ 25 ಎಸ್‌ಟಿಗಳಲ್ಲಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 2018ರಲ್ಲಿ ಮೂರು ರಾಜ್ಯಗಳನ್ನು ಮುಖ್ಯವಾಗಿ ಬುಡಕಟ್ಟು ಮತಗಳ ಸಹಾಯದಿಂದ ಕಾಂಗ್ರೆಸ್ ಗೆದ್ದಿದೆ.
ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಕೂಡ ಅರಣ್ಯ ಮತ್ತು ಬುಡಕಟ್ಟು ಜನಾಂಗದವರ ಭೂಮಿಯನ್ನು ರಕ್ಷಿಸುವ ಐದು ಭರವಸೆಗಳೊಂದಿಗೆ ಬುಡಕಟ್ಟು ಮತಬ್ಯಾಂಕ್ ಅನ್ನು ತನ್ನತ್ತ ಸೆಳೆಯಲು ಹೊರಟಿದೆ. ಮೀಸಲಾದ ಅರಣ್ಯ ಹಕ್ಕುಗಳ ವಿಭಾಗ, ಪ್ರತ್ಯೇಕ ಬಜೆಟ್ ಮತ್ತು ಬಾಕಿ ಉಳಿದಿರುವ ಎಫ್‌ಆರ್‌ಎ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವ ಮೂಲಕ ಅರಣ್ಯ ಹಕ್ಕುಗಳ ಕಾಯ್ದೆಯ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಮಿಷನ್ ಅನ್ನು ಸ್ಥಾಪಿಸುವುದು ಇದರ ಖಾತರಿಗಳಲ್ಲಿ ಸೇರಿದೆ. ಆದಿವಾಸಿಗಳಿಗೆ ದೊಡ್ಡ ಸಂಕಷ್ಟ ತಂದಿರುವ ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ಭೂಸ್ವಾಧೀನ ಕಾಯ್ದೆಗೆ ಮೋದಿ ಸರ್ಕಾರ ಮಾಡಿರುವ ಎಲ್ಲಾ ತಿದ್ದುಪಡಿಗಳನ್ನು ಹಿಂಪಡೆಯಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ.
ಬಿಜೆಪಿ ಯೋಜನೆಗಳು
- ಪ್ರಧಾನ ಮಂತ್ರಿ ಸ್ಪೆಶಲ್ ದುರ್ಬಲ ಬುಡಕಟ್ಟು ಗುಂಪುಗಳ (PM PVTG) ಮಿಷನ್ ಅಡಿಯಲ್ಲಿ 24,000 ಕೋಟಿ ರೂ.
- ಮೊದಲ ಬುಡಕಟ್ಟು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕದ ನೆನಪು
- ST ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸಲು ಏಕಲವ್ಯ ಮಾದರಿ ವಸತಿ ಶಾಲೆಗಳು (EMRS)
- ಬುಡಕಟ್ಟು ಜನಾಂಗದವರ ಆರ್ಥಿಕ ಸಬಲೀಕರಣಕ್ಕಾಗಿ ಬಜೆಟ್ನಲ್ಲಿ ಮೀಸಲಿಡಲಾಗಿದೆ
- 2013-14ರಲ್ಲಿ 4,295.94 ಕೋಟಿ ರೂ.ನಿಂದ 2023-24 ರಲ್ಲಿ 12,461.88 ಕೋಟಿ ರೂ.
ಕಾಂಗ್ರೆಸ್ ಭರವಸೆಗಳು
- ನೀರು, ಅರಣ್ಯ ಮತ್ತು ಭೂಮಿಯನ್ನು ರಕ್ಷಿಸಲು ʼಆದಿವಾಸಿ ನ್ಯಾಯʼ ಅಡಿಯಲ್ಲಿ ಐದು ಖಾತರಿಗಳು
- ಮೀಸಲಾದ ಅರಣ್ಯ ಹಕ್ಕುಗಳ ವಿಭಾಗ, ಪ್ರತ್ಯೇಕ ಬಜೆಟ್ ಮತ್ತು ಕ್ರಿಯಾ ಯೋಜನೆಗಳ ಮೂಲಕ ಅರಣ್ಯ ಹಕ್ಕುಗಳ ಕಾಯಿದೆಯ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಮಿಷನ್, ಬಾಕಿ ಉಳಿದಿರುವ FRA ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವುದು.
- ಅರಣ್ಯ ಸಂರಕ್ಷಣೆ ಮತ್ತು ಭೂಸ್ವಾಧೀನ ಕಾಯಿದೆಗಳಿಗೆ ಬಿಜೆಪಿ ಸರ್ಕಾರ ಮಾಡಿರುವ ಎಲ್ಲಾ ತಿದ್ದುಪಡಿಗಳನ್ನು ಹಿಂಪಡೆಯುವುದು.
- ಪಂಚಾಯತ್ ವಿಸ್ತರಣೆಗೆ ಅನುಸೂಚಿತ ಪ್ರದೇಶಗಳ ಕಾಯಿದೆ (PESA) ಗೆ ಅನುಗುಣವಾಗಿ ರಾಜ್ಯ ಕಾನೂನುಗಳ ಜಾರಿ.
- ಪರಿಶಿಷ್ಟ ಜಾತಿ ಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯ ಜಾರಿ
ಇದನ್ನೂ ಓದಿ: Lok Sabha Election 2024: ಚುನಾವಣೆ ಅಕ್ರಮ ತಡೆಯಲು ವೆಬ್ ಕಾಸ್ಟಿಂಗ್, ಡಿಸಿಯಿಂದಲೇ ನೇರ ವೀಕ್ಷಣೆ