Site icon Vistara News

Lok Sabha Election : ಶತಕ ಬಾರಿಸಿದ ಕಾಂಗ್ರೆಸ್​​; ಪಕ್ಷೇತರನ ಬೆಂಬಲದೊಂದಿಗೆ ಕಾಂಗ್ರೆಸ್​ನ ಸೀಟ್​ಗಳ ಸಂಖ್ಯೆ 100ಕ್ಕೆ ಏರಿಕೆ

Lok Sabha Election

ನವದೆಹಲಿ: ಲೋಕ ಸಭಾ ಚುನಾವಣೆಯಲ್ಲಿ (Lok Sabha Election) ಮಹಾರಾಷ್ಟ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಗೆದ್ದಿದ್ದ ಸಂಸದರೊಬ್ಬರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಹಳೆ ಪಕ್ಷದ ಒಟ್ಟು ಸದಸ್ಯರ 100ಕ್ಕೆ ಏರಿಕೆಯಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಶತಕದ ಸಂಭ್ರವನ್ನಾಚರಿಸಿದೆ. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದದ ಅಡಿಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿ ಪಾಲುದಾರ ಶಿವಸೇನೆ (ಯುಬಿಟಿ) ಗೆ ಟಿಕೆಟ್​ ನೀಡಿದ್ದಕ್ಕೆ ಬೇಸರಗೊಂಡಿದ್ದ ಕಾಂಗ್ರೆಸ್ ಮುಖಂಡ ವಿಶಾಲ್ ಪಾಟೀಲ್ ಸಾಂಗ್ಲಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಅವರು ಮಾತೃಪಕ್ಷಕ್ಕೆ ವಾಪಸಾಗಿರುವ ಕಾರಣ ಕಾಂಗ್ರೆಸ್ ಸದಸ್ಯರ ಸಂಖ್ಯೆ ಹೆಚ್ಚಿದೆ.

ಉದ್ಧವ್ ಠಾಕ್ರೆ ಈ ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲು ನಿರಾಕರಿಸಿದ್ದರು. ಹೀಗಾಗಿ ಪಾಟಿಲ್​ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರು ತಮ್ಮ ಸಮೀಪದ ಬಿಜೆಪಿಯ ಸಂಜಯ್ ಪಾಟೀಲ್ ಅವರನ್ನು 1,00,053 ಮತಗಳಿಂದ ಸೋಲಿ ಸಿದ್ದರು. ಇಲ್ಲಿ ಶಿವಸೇನೆ ಅಭ್ಯರ್ಥಿ ಚಂದ್ರಹರ್ ಪಾಟೀಲ್ ಕೇವಲ 60,860 ಮತಗಳನ್ನು ಪಡೆದಿದ್ದರು.

ಮಹಾರಾಷ್ಟ್ರದ ಜನರು ದ್ರೋಹ, ಅಹಂಕಾರ ಮತ್ತು ವಿಭಜನೆಯ ರಾಜಕೀಯವನ್ನು ಸೋಲಿಸಿದ್ದಾರೆ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರಂತಹ ನಮ್ಮ ಪ್ರೇರಣಾದಾಯಕ ನಾಯಕರಿಗೆ ಇದು ಸೂಕ್ತ ಗೌರವವಾಗಿದೆ. ಸಾಂಗ್ಲಿಯ ಚುನಾಯಿತ ಸಂಸದ ಶ್ರೀ ವಿಶಾಲ್ ಪಾಟೀಲ್ (@patilvishalvp) ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಬೆಂಬಲವನ್ನು ಸ್ವಾಗತಿಸುತ್ತೇನೆ. ಸಂವಿಧಾನ ದೀರ್ಘಕಾಲ ಸುರಕ್ಷಿತವಾಗಿರಲಿ ಎಂದು ಬರೆಯಲಾಗಿದೆ.

ಪಾಟೀಲ್ ಅವರ ಬೆಂಬಲವು ಲೋಕಸಭೆಯಲ್ಲಿ 99 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್​ಗೆ ಗಮನಾರ್ಹ ಉತ್ತೇಜನ ಸಿಕ್ಕಿದೆ. ಈ ಪಕ್ಷ ಹಿಂದಿನ ಚುನಾವಣೆಯಲ್ಲಿ ಪಡೆದಿದ್ದ 52 ರಿಂದ ತನ್ನ ಸಂಖ್ಯೆಯನ್ನು ದುಪ್ಪಟ್ಟು ಮಾಡಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದಿವೆ. ಮತ್ತೊಂದೆಡೆ, ಬಿಜೆಪಿ-ಎನ್ಸಿಪಿ-ಶಿವಸೇನೆ ಮಹಾಯುತಿ ಮೈತ್ರಿಕೂಟವು ಕೇವಲ 17 ಸ್ಥಾನಗಳನ್ನು ಗಳಿಸಿತ್ತು.

ಇದನ್ನೂ ಓದಿ: Kangana Ranaut : ಪಂಜಾಬ್​ನಲ್ಲಿ ಭಯೋತ್ಪಾದನೆ ಹೆಚ್ಚುತ್ತಿದೆ; ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ಕಂಗನಾ ಪ್ರತಿಕ್ರಿಯೆ ಹೀಗಿತ್ತು

ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸಲು ಇಂಡಿಯಾ ಬಣದ ಸದಸ್ಯರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಸಭೆ ಸೇರಿದರು. “ನಮ್ಮ ಮೈತ್ರಿಕೂಟಕ್ಕೆ ದೊರೆತ ಅಪಾರ ಬೆಂಬಲಕ್ಕಾಗಿ ಇಂಡಿಯಾ ಬಣದ ಘಟಕಗಳು ಭಾರತದ ಜನರಿಗೆ ಧನ್ಯವಾದ ಅರ್ಪಿಸುತ್ತವೆ. ಜನಾದೇಶವು ಬಿಜೆಪಿ ಮತ್ತು ಅವರ ದ್ವೇಷ ಮತ್ತು ಭ್ರಷ್ಟಾಚಾರದ ರಾಜಕೀಯಕ್ಕೆ ಸೂಕ್ತ ಉತ್ತರ ನೀಡಿದೆ” ಎಂದು ಖರ್ಗೆ ಸಭೆಯ ನಂತರ ಹೇಳಿದರು.

“ಇದು ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಬೆಲೆ ಏರಿಕೆ, ನಿರುದ್ಯೋಗ ಮತ್ತು ಕ್ರೋನಿ ಕ್ಯಾಪಿಟಲಿಸಂ ವಿರುದ್ಧ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಜನಾದೇಶವಾಗಿದೆ. ಮೋದಿ ನೇತೃತ್ವದ ಬಿಜೆಪಿಯ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಭಾರತ ಬಣವು ಹೋರಾಟವನ್ನು ಮುಂದುವರಿಸುತ್ತದೆ” ಎಂದು ಅವರು ಹೇಳಿದರು.

Exit mobile version