Site icon Vistara News

Lok Sabha Election : ಮಂಡ್ಯದಲ್ಲಿ ಕಾಂಗ್ರೆಸ್​​ನ ಭರ್ಜರಿ ಆಪರೇಷನ್; ಜೆಡಿಎಸ್​​ನ 3 ಮಾಜಿ ಶಾಸಕರು ‘ಕೈ’ ವಶ

Lok Sabha Election 2024 Three ex CMs who are unstable in Congress and BJP

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮಂಡ್ಯ ಕ್ಷೇತ್ರವನ್ನು (Mandya) ಕೈವಶ ಮಾಡಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್​. ಜೆಡಿಎಸ್​ನ (JDS) ಮೂವರು ಮಾಜಿ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದೆ. ಈ ಮೂಲಕ ದಳಪತಿಗಳಿಗೆ ಹೊಡೆತ ನೀಡಲು ಕೈ ಪಕ್ಷ ಮುಂದಾಗಿದೆ. ಬಿಜೆಪಿ- ಜೆಡಿಎಸ್​ ಮೈತ್ರಿಯಂತೆ ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದೆ. ಪಕ್ಷದ ವರಿಷ್ಠ ಕುಮಾರಸ್ವಾಮಿ ಅವರೇ ಅಲ್ಲಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿದೆ. ಏತನ್ಮಧ್ಯೆ, ಜೆಡಿಎಸ್​ ಮುಖಂಡರನ್ನು ತನ್ನತ್ತ ಸೆಳೆಯುತ್ತಿರುವ ಕಾಂಗ್ರೆಸ್, ಜೆಡಿಎಸ್​ನ ಮೂವರು ಮಾಜಿ ಶಾಸಕರ ಮನವೊಲಿಸುವಲ್ಲಿ ಸಫಲವಾಗಿದೆ.

ಮಾಜಿ ಶಾಸಕರಾದ ಎಂ ಶ್ರೀನಿವಾಸ, ಅಪ್ಪಾಜಿಗೌಡ, ಮರಿತಿಬ್ಬೆ ಗೌಡ ಅವರು ಕಾಂಗ್ರೆಸ್​ ಸೇರ್ಪಡೆಗೆ ಮುಂದಾಗಿದ್ದು ಅವರು ಶುಕ್ರವಾರ (ಮಾರ್ಚ್​ 21ರಂದು) ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್​ ಧ್ವಜ ಹಿಡಿಯಲಿದ್ದಾರೆ.

ಜೆಡಿಎಸ್​ ಮುಖಂಡ ಕುಮಾರಸ್ವಾಮಿ ಅವರು ಹೃದಯದ ಶಸ್ತ್ರ ಚಿಕಿತ್ಸೆ ಕಾರಣಕ್ಕೆ ಆಸ್ಪತ್ರೆ ಸೇರಿಕೊಂಡಿದ್ದಾರೆ. ಏತನ್ಮಧ್ಯೆ ಆಪರೇಷನ್ ಹಸ್ತ ನಡೆದಿದೆ. ಆಸ್ಪತ್ರೆಗೆ ಹೋಗುವ ಮೊದಲು ಅವರು ಡಿ.ಕೆ ಶಿವಕುಮಾರ್ ಅವರಿಗೆ ಸವಾಲೊಡ್ಡಿ ಹೋಗಿದ್ದರು. ಇದೀಗ ಕುಮಾರ ಸ್ವಾಮಿ ಅವರ ವಿರುದ್ಧ ತೊಡೆ ತಟ್ಟಿರುವ ಡಿಕೆಶಿ ಅವರು ಜೆಡಿಎಸ್​ ಮುಖಂಡರಿಗೆ ಗಾಳ ಹಾಕುತ್ತಿದ್ದಾರೆ.

ಆಯನೂರು ಮಂಜುನಾಥ್​​ಗೆ ನೈರುತ್ಯ ಪದವೀಧರರ ಕ್ಷೇತ್ರದ ಟಿಕೆಟ್​

ವಿಧಾನ ಪರಿಷತ್​ನ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯನ್ನು ಗುರುವಾರ ರಾತ್ರಿ ಘೋಷಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದಿದ್ದ ಹಿರಿಯ ಮುಖಂಡ ಆಯನೂರು ಮಂಜುನಾಥ್ (Ayanuru Manjunath)​ ಅವರಿಗೆ ಹೈಕಮಾಂಡ್​ ಮಣೆ ಹಾಕಿದೆ. ಈ ಮೂಲಕ ಕಾಂಗ್ರೆಸ್​ನ ಇನ್ನೊಬ್ಬರ ಆಕಾಂಕ್ಷಿ ಎಸ್​. ಪಿ ದಿನೇಶ್ ಅವರಿಗೆ ಹಿನ್ನಡೆಯಾಗಿದೆ. ದಿನೇಶ್ ಅವರು ಹಿಂದಿನ ಎರಡು ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಆ ವೇಳೆ ಬಿಜೆಪಿಯಲ್ಲಿದ್ದ ಆಯನೂರು ವಿರುದ್ಧ ಸೋತಿದ್ದರು. ಇದೀಗ ಕಾಂಗ್ರೆಸ್​ನಿಂದ ಆಯನೂರು ಕಣಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ : Vistara news polling booth : ಬೀದರ್‌ನಲ್ಲಿ ಹೆಚ್ಚಿದ ಕಾಂಗ್ರೆಸ್‌ ಖದರ್‌; ಹಾಲಿ ಸಂಸದ ಖೂಬಾಗೆ ಹಿನ್ನಡೆ?

ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಡುವೆ ಪ್ರಕಟಿಸಿ ಸಿದ್ಧತೆ ಆರಂಭಿಸಿದೆ ಕಾಂಗ್ರೆಸ್​.

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಕೊಡಗಿನ ಕೆ.ಕೆ.ಮಂಜುನಾಥ್‌ಗೆ ಕೆಪಿಸಿಸಿ ಅವಕಾಶ ಕೊಟ್ಟಿತ್ತು. ಆದರೆ, ಪದವೀಧರ ಕ್ಷೇತ್ರಕ್ಕೆ ಉಳಿಸಿಕೊಂಡಿತ್ತು. ಲೋಕಸಭೆ ಚುನಾವಣೆ ಅಬ್ಬರ ಆರಂಭಗೊಂಡ ನಂತರ ಪರಿಷತ್ ಚುನಾವಣೆಗೆ ಗೌಣವಾಗುತ್ತದೆ ಎಂಬ ಕಾರಣಕ್ಕೆ ತಕ್ಷಣವೇ ಅಭ್ಯರ್ಥಿಗಳನ್ನು ಘೋಷಿಸಿ ಎಂಬುದು ಆಕಾಂಕ್ಷಿಗಳ ಬೇಡಿಕೆಯಾಗಿತ್ತು. ಆದರೆ, ತೀವ್ರ ಪೈಪೋಟಿ ಇದ್ದ ಕಾರಣ ಅಂತಿಮ ಲೆಕ್ಕಾಚಾರ ಹಾಕಿ ಆಯನೂರು ಅವರಿಗೆ ಟಿಕೆಟ್ ಕೊಟ್ಟಿದೆ.

ಎಸ್.ಪಿ.ದಿನೇಶ್ ಹಿಂದಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್​ನಿಂದ ಅವಕಾಶ ಪಡೆದುಕೊಂಡು ಪರಾಭವಗೊಂಡಿದ್ದರೂ, ಈ ಬಾರಿ ಉತ್ತಮ ವಾತಾವರಣವಿರುವುದರಿಂದ ಮತ್ತೊಂದು ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಆಯನೂರು

Exit mobile version