Site icon Vistara News

Lok Sabha Election : ಇನ್ನಿಬ್ಬರು ಸದಸ್ಯರು ಕಡಿಮೆಯಾದರೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಗೆ ಪ್ರತಿಪಕ್ಷ ಹುದ್ದೆಯೂ ನಷ್ಟ!

Lok Sabha Election

ಬೆಂಗಳೂರು: ಲೋಕಸಭೆಯಲ್ಲಿ (Lok Sabha Election ) ಕಾಂಗ್ರೆಸ್​ ಪಡೆದಿರುವ ಯಶಸ್ಸು ಆ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸ್ಥಾನಕ್ಕೆ ಕುತ್ತು ತರುವ ಅಪಾಯನ್ನು ಒಡ್ಡಿದೆ. ಕಾಂಗ್ರೆಸ್ ತನ್ನ ಇಬ್ಬರು ರಾಜ್ಯಸಭೆ ಸದಸ್ಯರಾದ ಕೆ.ಸಿ.ವೇಣುಗೋಪಾಲ್ ಮತ್ತು ದೀಪೇಂದರ್ ಹೂಡಾ ಲೋಕಸಭೆಗೆ ಆಯ್ಕೆಯಾದ ಬಳಿಕ ಆ ಪಕ್ಷದ ರಾಜ್ಯಸಭಾ ಸದಸ್ಯರ ಸಂಖ್ಯೆ 26 ಸದಸ್ಯರಿಗೆ ಇಳಿದಿದೆ. ಯಾವುದೇ ಪಕ್ಷವು ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಲು ಕನಿಷ್ಠ 25 ಸದಸ್ಯರನ್ನು ಹೊಂದಿರಬೇಕು. ಹೀಗಾಗಿ ಇನ್ನಿಬ್ಬರು ಸದಸ್ಯರು ಸ್ಥಾನ ಕಳೆದುಕೊಂಡರೆ ಕಾಂಗ್ರೆಸ್ ಪ್ರಮುಖ ಸ್ಥಾನವನ್ನು ನಷ್ಟ ಮಾಡಿಕೊಳ್ಳಲಿದೆ.

ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಿಂದ ತಲಾ ಎರಡು, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ತ್ರಿಪುರಾದಿಂದ ತಲಾ ಒಂದು ಸೇರಿದಂತೆ ರಾಜ್ಯಸಭೆಯಲ್ಲಿ ಒಟ್ಟು 10 ಸ್ಥಾನಗಳು ಖಾಲಿ ಇವೆ. ಈ ಪೈಕಿ ಏಳು ಸಂಸದರು ಬಿಜೆಪಿಗೆ ಸೇರಿದವರು. ಇಬ್ಬರು ಕಾಂಗ್ರೆಸ್ ಮತ್ತು ಒಬ್ಬರು ರಾಷ್ಟ್ರೀಯ ಜನತಾ ದಳದವರಾಗಿದ್ದಾರೆ. ಬಿಜೆಪಿ ಎಲ್ಲಾ ಏಳು ಸ್ಥಾನಗಳನ್ನು ಉಳಿಸಿಕೊಳ್ಳಲಿದೆ. ಕಾಂಗ್ರೆಸ್ ಮತ್ತು ಆರ್​ಜೆಡಿಯಿಂದ ಮೂರು ಹೆಚ್ಚುವರಿ ಸ್ಥಾನಗಳನ್ನೂ ಪಡೆದುಕೊಳ್ಳಲಿದೆ.

ಏಕೈಕ ಅತಿದೊಡ್ಡ ಪಕ್ಷ

ಪ್ರಸ್ತುತ ಲೆಕ್ಕಾಚಾರದ ಪ್ರಕಾರ 90 ಸದಸ್ಯರನ್ನು ಹೊಂದಿರುವ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ 26, ತೃಣಮೂಲ ಕಾಂಗ್ರೆಸ್ 13 ಮತ್ತು ವೈಎಸ್ಆರ್ ಕಾಂಗ್ರೆಸ್ 11 ಸದಸ್ಯರನ್ನು ಹೊಂದಿದೆ. ಯಾವುದೇ ಪಕ್ಷವು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಲು ಕನಿಷ್ಠ 25 ಸದಸ್ಯರನ್ನು ಹೊಂದಿರಬೇಕು. ಪ್ರಸ್ತುತ ಈ ಹುದ್ದೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ok Sabha Election : ಬಿಜೆಪಿ-ಜೆಡಿಎಸ್ ಜತೆಯಾಗಿ ಸ್ಪರ್ಧಿಸಿದರೆ ವಿಧಾನಸಭೆ ಚುನಾವಣೆಯಲ್ಲಿ 142 ಸ್ಥಾನ!

ವೇಣುಗೋಪಾಲ್ ಮತ್ತು ಹೂಡಾ ಅವರಲ್ಲದೆ, ಬಿಜೆಪಿಯ ಪಿಯೂಷ್ ಗೋಯಲ್, ಬಿಪ್ಲಬ್ ಕುಮಾರ್ ದೇಬ್, ಜ್ಯೋತಿರಾದಿತ್ಯ ಎಂ ಸಿಂಧಿಯಾ, ವಿವೇಕ್ ಠಾಕೂರ್, ಸರ್ಬಾನಂದ ಸೋನೊವಾಲ್, ಕಾಮಾಕ್ಯ ಪ್ರಸಾದ್ ತಾಸಾ ಮತ್ತು ಉದಯನ್ ರಾಜೆ ಭೋಂಸ್ಲೆ ಸದಸ್ಯರು. ಗೋಯಲ್ ಅವರ ನಿರ್ಗಮನದೊಂದಿಗೆ, ಬಿಜೆಪಿ ಕೂಡ ಸದನದ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ಪಾಟಲೀಪುತ್ರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಆರ್​ಜೆಡಿ ನಾಯಕಿ ಮಿಸಾ ಭಾರತಿ ಕೂಡ ಮೇಲ್ಮನೆಯ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.

Exit mobile version