Site icon Vistara News

Mahua Moitra : ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಮಹುವಾಗೆ ಲೋಕ್​ಪಾಲ್​ ಬಲೆ

Mahua Moitra

ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮಹುವಾ ಮೊಯಿತ್ರಾ (Mahua Moitra) ವಿರುದ್ಧದ “ಪ್ರಶ್ನೆಗಾಗಿ ನಗದು ಆರೋಪಗಳ ಬಗ್ಗೆ ತನಿಖೆ ನಡೆಸಿ ಆರು ತಿಂಗಳೊಳಗೆ ತನ್ನ ಮುಂದೆ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ವಿರೋಧಿ ಒಂಬುಡ್ಸ್ ಮನ್ ಲೋಕಪಾಲ್ ಮಂಗಳವಾರ ಸಿಬಿಐಗೆ ನಿರ್ದೇಶನ ನೀಡಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಮೊಯಿತ್ರಾ ಅವರನ್ನು ಅನೈತಿಕ ನಡವಳಿಕೆಗಾಗಿ ಲೋಕಸಭೆಯಿಂದ ಹೊರಹಾಕಲಾಗಿತ್ತು. ಅವರನ್ನು ಉಚ್ಚಾಟಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಪಕ್ಷದ ಅಭ್ಯರ್ಥಿಯಾಗಿ ಅವರನ್ನು ಮತ್ತೊಂದು ಬಾರಿ ಆಯ್ಕೆ ಮಾಡಲಾಗಿದೆ.

ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ನಗದು ಮತ್ತು ಉಡುಗೊರೆಗಳಿಗೆ ಬದಲಾಗಿ ಮೊಯಿತ್ರಾ ಅವರು ಸಂಸತ್ತಿನ ಕೆಳಮನೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಲೋಕಪಾಲ್ ಈ ನಿರ್ದೇಶನ ನೀಡಿದೆ.

ದಾಖಲೆಯಲ್ಲಿರುವ ಸಂಪೂರ್ಣ ವಿಷಯವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ನಂತರ ಮತ್ತು ಪರಿಗಣಿಸಿದ ನಂತರ, ಆರ್​​ಪಿಎಸ್​ (ಪ್ರತಿವಾದಿ ಸಾರ್ವಜನಿಕ ಸೇವಕ) ವಿರುದ್ಧ ಮಾಡಲಾಗಿರುವ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ/ ಅವುಗಳಲ್ಲಿ ಹೆಚ್ಚಿನವು ಬಲವಾದ ಪುರಾವೆಗಳನ್ನು ಹೊಂದಿವೆ. ಎಂದು ಲೋಕಪಾಲ್ ಆದೇಶದಲ್ಲಿ ತಿಳಿಸಲಾಗಿದೆ.

ಆದೇಶದಲ್ಲಿ ಪ್ರತಿವಾದಿ ಎಂದ ಲೋಕ್​ಪಾಲ್​

ನಮ್ಮ ಅಭಿಪ್ರಾಯದಲ್ಲಿ, ಸತ್ಯವನ್ನು ಕಂಡುಕೊಳ್ಳಲು ಆಳವಾದ ತನಿಖೆಯ ಅಗತ್ಯವಿದೆ. ಸಂಬಂಧಿತ ಸಮಯದಲ್ಲಿ ಪ್ರತಿವಾದಿ ಹೊಂದಿರುವ ಸ್ಥಾನ ಮತ್ತು ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು ತನಿಖೆ ಅಗತ್ಯ ” ಎಂದು ನ್ಯಾಯಮೂರ್ತಿ ಅಭಿಲಾಷಾ ಕುಮಾರಿ (ನ್ಯಾಯಾಂಗ ಸದಸ್ಯೆ) ಮತ್ತು ಸದಸ್ಯರಾದ ಅರ್ಚನಾ ರಾಮಸುಂದರಂ ಮತ್ತು ಮಹೇಂದರ್ ಸಿಂಗ್ ಅವರನ್ನೊಳಗೊಂಡ ಲೋಕಪಾಲ್ ಪೀಠದ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : NIA : ಆರ್​​ಎಸ್​​ಎಸ್​ ಮುಖಂಡನನ್ನು ಹತ್ಯೆ ಮಾಡಿದ ಪಿಎಫ್​ಐ ಕಾರ್ಯಕರ್ತ ಎನ್​ಐಎ ವಶಕ್ಕೆ

ಯಾವುದೇ ಹುದ್ದೆ ಇರಲಿ, ಸಾರ್ವಜನಿಕ ವ್ಯ್ಕತಿಯು ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಪ್ರಾಮಾಣಿಕತೆಯನ್ನು ಪ್ರದರ್ಶಿಸಲು ಬದ್ಧನಾಗಿರಬೇಕು ಎಂದು ಅದು ಹೇಳಿದೆ.

ಜವಾಬ್ದಾರಿ ಜನ ಪ್ರತಿನಿಧಿಯ ಹೆಗಲ ಮೇಲಿರುತ್ತದೆ. ಭ್ರಷ್ಟಾಚಾರವು ಈ ಪ್ರಜಾಪ್ರಭುತ್ವ ದೇಶದ ಶಾಸಕಾಂಗ, ಆಡಳಿತಾತ್ಮಕ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

“ಅನಗತ್ಯ ಅನುಕೂಲ, ಅಕ್ರಮ ಲಾಭ ಅಥವಾ ಲಾಭ ಮತ್ತು ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಪ್ರತಿಫಲದಂತಹ ಅಂಶಗಳನ್ನು ತಮ್ಮ ವ್ಯಾಪ್ತಿಗೆ ತರುವ ಭ್ರಷ್ಟಾಚಾರ ಮತ್ತು ಭ್ರಷ್ಟ ಅಭ್ಯಾಸಗಳನ್ನು ಬೇರುಸಹಿತ ಕಿತ್ತೊಗೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು ನಮ್ಮ ಮೇಲೆ ಮತ್ತು ವಾಸ್ತವವಾಗಿ ಲೋಕಪಾಲ್ ಕಾಯ್ದೆಯ ಆದೇಶದ ಮೇಲೆ ಹಾಕಲಾದ ಕರ್ತವ್ಯವಾಗಿದೆ” ಎಂದು ಅದು ಹೇಳಿದೆ.

Exit mobile version