Site icon Vistara News

Mamata Banerjee: ಹೆಲಿಕಾಪ್ಟರ್‌ ಏರುವಾಗ ಬಿದ್ದ ಮಮತಾ ಬ್ಯಾನರ್ಜಿ, ಗಾಯ

mamata banerjee helicopter

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal chief minister Mamata Banerjee) ಅವರು ಶನಿವಾರ ದುರ್ಗಾಪುರದಲ್ಲಿ ಹೆಲಿಕಾಪ್ಟರ್ (Helicopter) ಏರುತ್ತಿದ್ದಾಗ ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹೆಲಿಕಾಪ್ಟರ್‌ ಏರಿ ತಮ್ಮ ಆಸನದಲ್ಲಿ ಕುಳಿತುಕೊಳ್ಳಲು ಮುಂದಾದಾಗ ನಿಯಂತ್ರಣ (Imbalance) ಕಳೆದುಕೊಂಡು ಮಮತಾ ಬಿದ್ದುಬಿಟ್ಟರು. ಮುಖ್ಯಮಂತ್ರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರ ಭದ್ರತಾ ಸಿಬ್ಬಂದಿ (Security) ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ.

ನಂತರ ಮಮತಾ ತಮ್ಮ ಮುಂದಿನ ಪ್ರಯಾಣವನ್ನು ಅಸನ್ಸೋಲ್‌ಗೆ ಮುಂದುವರಿಸಿದೃು ಎಂದು ಗೊತ್ತಾಗಿದೆ. ಕಳೆದ ಆರು ವಾರಗಳಲ್ಲಿ ಮಮತಾ ಬ್ಯಾನರ್ಜಿ ಬಿದ್ದು ಗಾಯಗೊಂಡಿರುವುದು ಇದು ಎರಡನೇ ಬಾರಿ. ಮಾರ್ಚ್ 14ರಂದು, 69 ವರ್ಷದ ತೃಣಮೂಲ ಕಾಂಗ್ರೆಸ್ (Trinamool Congress) ಮುಖ್ಯಸ್ಥೆ ಮಮತಾ ಕೋಲ್ಕತ್ತಾದ ತಮ್ಮ ಕಾಲಿಘಾಟ್ ನಿವಾಸದೊಳಗೆ ಬಿದ್ದು ಹಣೆ ಮತ್ತು ಮೂಗಿನ ಮೇಲೆ ಗಂಭೀರವಾದ ಗಾಯ ಮಾಡಿಕೊಂಡಿದ್ದರು. ಮಮತಾ ಅವರನ್ನು ಹಲವು ಗಂಟೆಗಳ ಕಾಲ ಆಸ್ಪತ್ರೆಗೆ ಸೇರಿಸಬೇಕಾಗಿ ಬಂದಿತ್ತು.

ಬ್ಯಾನರ್ಜಿಯವರ ಸಹೋದರ ಕಾರ್ತಿಕ್ ಬ್ಯಾನರ್ಜಿ ಬಂಗಾಳಿ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡುತ್ತಾ, ಟಿಎಂಸಿ ನಾಯಕಿಗೆ ʼಸೆರೆಬ್ರಲ್ ಕನ್ಕ್ಯುಶನ್ʼ ಇತ್ತು ಮತ್ತು ಆಕೆಯ ಹಣೆ ಮತ್ತು ಮೂಗಿನ ಮೇಲೆ ತೀಕ್ಷ್ಣವಾದ ಗಾಯವಾಗಿದೆ, ತೀವ್ರವಾಗಿ ರಕ್ತಸ್ರಾವವಾಗಿದೆ ಎಂದು ತಿಳಿಸಿದ್ದರು.

ಆಸ್ಪತ್ರೆಯ ನಿರ್ದೇಶಕ ಮಣಿಮೋಯ್ ಬಂಡೋಪಾಧ್ಯಾಯ ಅವರು, ಆರಂಭದಲ್ಲಿ “ಹಿಂದಿನಿಂದ ತಳ್ಳಿದಂಥ ಅನುಭವದಿಂದಾಗಿ ಅವರ ಮನೆಯಲ್ಲಿ ಬಿದ್ದಿದ್ದಾರೆ” ಎಂದು ಹೇಳಿದರೆಂದು ವರದಿಯಾಗಿತ್ತು. ಇದು ಂಮತಾ ಅವರ ಬೀಳುವಿಕೆಯ ಬಗ್ಗೆ ದೊಡ್ಡ ಪ್ರಮಾಣದ ಗೊಂದಲ ಮತ್ತು ಊಹಾಪೋಹಗಳನ್ನು ಹುಟ್ಟುಹಾಕಿತ್ತು.

ಬಂದೋಪಾಧ್ಯಾಯ ಅವರು ನಂತರ ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದರು. “ಸಿಎಂ ಮಮತಾ ಅವರ ದೇಹವು ಹಿಂದಿನಿಂದ ತಳ್ಳುವ ಸಂವೇದನೆಯನ್ನು ಅನುಭವಿಸಿದೆ. ಇದು ತಲೆ ತಿರುಗುವುದಕ್ಕೆ ಸಮನಾದುದು. ಚಿಕಿತ್ಸೆ ನೀಡುವುದು ನಮ್ಮ ಕೆಲಸ ಮತ್ತು ನಾವು ಅದನ್ನು ಮಾಡಿದ್ದೇವೆ. ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಬಂಡೋಪಾಧ್ಯಾಯ ಹೇಳಿದ್ದರು.

ಕಳೆದ ಬಾರಿ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಅಪಘಾತವೊಂದರಲ್ಲಿ ಕಾಲು ಫ್ರಾಕ್ಚರ್‌ ಆಗಿತ್ತು. ಆದರೆ ಮಮತಾ ಬ್ಯಾಂಡೇಜ್‌ ಧರಿಸಿದ ಕಾಲುಗಳ ಮೂಲಕವೇ ರಾಜ್ಯಾದ್ಯಂತ ಬಿರುಗಾಳಿಯಂತೆ ಓಡಾಡಿ ಪ್ರಚಾರ ನಡೆಸಿ ಅಧಿಕಾರಕ್ಕೆ ಮರಳಿದ್ದರು.

ಇದನ್ನೂ ಓದಿ: Trinamool Congress: ಮಮತಾ ಬ್ಯಾನರ್ಜಿಯನ್ನು ಅರೆಸ್ಟ್‌ ಮಾಡಿ; ಟಿಎಂಸಿ ಉಗ್ರ ಸಂಘಟನೆ ಎಂದು ಘೋಷಿಸಿ-ಬಿಜೆಪಿ ಆಗ್ರಹ

Exit mobile version