ಬೆಂಗಳೂರು: ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ ಮೇಲೆ ಸೇಡು ತೀರಿಸಿಕೊಳ್ಳಲು ಆಕೆ ಹಾಗೂ ಆಕೆಯ ಸಹೋದರನ ಫೋನ್ ಸಂಖ್ಯೆಯನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿ ‘ಕಾಲ್ ಗರ್ಲ್ ಬೇಕೇ’ ಎಂದು ಕಿರುಕುಳ ಕೊಟ್ಟ ಪ್ರಕರಣವೊಂದು (Cyber Crime) ನಗರದ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಮಗೆ ಬರುತ್ತಿರುವ ಕರೆಗಳಿಂದ ಬೇಸತ್ತ ಮಹಿಳೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆರೋಪಿ ಫೇಸ್ಬುಕ್ನಲ್ಲಿ ಪೇಜ್ ಕ್ರಿಯೇಟ್ ಮಾಡಿ ಅಪರಾಧ ಎಸಗಿರುವುದಲ್ಲದೆ ಭಾರತ ಬಿಟ್ಟು ಪರಾರಿಯಾಗಿದ್ದಾನೆ ಎಂಬುದಾಗಿಯೂ ನೊಂದ ಮಹಿಳೆ ದೂರು ನೀಡಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಮಹಿಳೆ ಹಾಗೂ ಆತನ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವ ವ್ಯಕ್ತಿ ಯ ಹೆಸರು ಸತ್ಯನಾರಾಯಣ ರೆಡ್ಡಿ ಎಂಬುದಾಗಿ ಎಫ್ಐಆರ್ನಲ್ಲಿ ದಾಖಲಾಗಿದೆ. ಆತ ಕಲಾಶಶಿ ಎಂಬ ಪೇಜ್ ಕ್ರಿಯೇಟ್ ಮಾಡಿ ಅದರಲ್ಲಿ ವಿಚ್ಛೇದನ ನೀಡಿರುವ ಪತ್ನಿ, ಆಕೆಯ ಸಹೋದರಿ ಹಾಗೂ ಸಹೋದರನ ನಂಬರ್ ಹಾಕಿದ್ದಾನೆ ಎಂದು ಹೇಳಲಾಗಿದೆ.
ಫೇಸ್ಬುಕ್ ಪೇಜ್ಗೆ ಬರುತ್ತಿರುವ ಕೆಲವರು ಸತತವಾಗಿ ಮಹಿಳೆ ಹಾಗೂ ಆಕೆಯ ಸಹೋದರರಿಗೆ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ನಿರಂತರ ಕಿರುಕುಳದಿಂದ ಬೇಸತ್ತಿರುವ ಅವರ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಲಾಶಶಿ ಎಂಬ ಹೆಸರಿನಲ್ಲಿ ಫೇಸ್ ಬುಕ್ ಪೆಜ್ ಕ್ರಿಯೆಟ್ ಮಾಡಿರುವ ಸತ್ಯನಾರಾಯಣ ನಂಬರ್ ಹಾಗೂ ಚಿತ್ರಗಳನ್ನು ಹಾಕಿ ವಿದೇಶಕ್ಕೆ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೈಹಿಕ ಹಿಂಸೆ
ಆರೋಪಿ ಸತ್ಯನಾರಾಯಣ ರೆಡ್ಡಿ ಹಾಗೂ ನೊಂದ ಮಹಿಳೆ 2019 ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿರುವ ದಿನದಿಂದಲೂ ಆರೋಪಿ ತನ್ನ ಪತ್ನಿ ನಿರಂತರವಾಗಿ ಕಿರುಕುಳ ಕೊಡಲು ಆರಂಭಿಸಿದ್ದ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸತತವಾಗಿ ಒಂದು ವರ್ಷದಿಂದ ತನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಮಾಡಿದ್ದ. ಹೀಗಾಗಿ ಡಿವೊರ್ಸ್ ಗೆ ಅಪ್ಲೈಮಾಡಿರುವುದಾಗಿ ಮಹಿಳೆ ಹೇಳಿದ್ದಾರೆ.
ಇದನ್ನೂ ಓದಿ: Fire Accident : ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮನೆಗೆ ಬಿತ್ತು ಬೆಂಕಿ, ಇಲ್ಲಿದೆ ವಿಡಿಯೊ
ಡಿವೋರ್ಸ್ಗೆ ಅರ್ಜಿ ಹಾಕಿದ್ದನ್ನು ಸಹಿಸದ ಸತ್ಯನಾರಾಯಣರಿಂದ ಸೋಷಿಯಲ್ ಮೀಡಿಯಾ ಬಳಕೆ ಮಾಡಿಕೊಂಡು ಇನ್ನೊಂದು ದುಷ್ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತನ್ನ ದುಷ್ಟಬುದ್ಧಿಯನ್ನು ತೋರದಂತೆ ಸತ್ಯನಾರಾಯಣ ರೆಡ್ಡಿಗೆ ಪೊಲೀಸ್ ಠಾಣೆಗೆ ಕರೆಸಿಕೊಂಡು ಬುದ್ಧಿಮಾತು ಹೇಳಲಾಗಿತ್ತು. ಆದರೂ ಆತ ಮತ್ತದೇ ರೀತಿಯ ಸಮಸ್ಯೆ ಸೃಷ್ಟಿ ಮಾಡಿದ್ದಾನೆ ಎಂಬುದಾಗಿ ನೊಂದ ಮಹಿಳೆ ಹೇಳಿದ್ದಾರೆ.
ಸೈಬರ್ ಅಪರಾಧಗಳ ತಡೆಗೆ ಏನು ಮಾಡಬೇಕು?
ನೀವು ಸೈಬರ್ ವಂಚನೆಗೆ ಬಲಿಯಾದಾಗ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಗೆ (ಎನ್ಸಿಆರ್ಪಿ) ಮಾಹಿತಿ ನೀಡುವುದು.
ಸೈಬರ್ ಕ್ರೈಮ್ ದೂರು ದಾಖಲಿಸಲು ಹತ್ತಿರದ ಪೊಲೀಸ್ ಠಾಣೆಗೆ ಹೋಗಬಹುದು.
ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಅಥವಾ ಪ್ರಕರಣವನ್ನು ಸೈಬರ್ ಸೆಲ್ ಗೆ ವರ್ಗಾಯಿಸುತ್ತಾರೆ. ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂಬುದಕ್ಕೆ ಪ್ರಮುಖ ಕಾರಣ ಇನ್ನಷ್ಟು ಅಪರಾಧಗಳ ತಡೆಗೆ.
ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಇದಕ್ಕೂ ದೂರು ನೀಡಬಹುದು. ಸ್ಥಳೀಯ ಮಹಿಳಾ ಸಹಾಯವಾಣಿಗೂ ದೂರು ಸಲ್ಲಿಕೆ ಮಾಡಬಹುದು.