ಮುಂಬಯಿ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಸಹೋದರಿಗೆ 12 ನೇ ತರಗತಿ ಪರೀಕ್ಷೆಯಲ್ಲಿ ಮೋಸ ಮಾಡಲು ಸಹಾಯ ಮಾಡಲು ಪೊಲೀಸ್ ವೇಷ ಹಾಕಿ ಹೋಗಿ ಸಿಕ್ಕಿ ಬಿದ್ದಿದ್ದಾನೆ. ಸಿಕ್ಕಿಬಿದ್ದಿರುವುದು ಕೂಡ ಆತ ಮಾಡಿದ ಯಡವಟ್ಟಿನಿಂದಾಗಿ. ನಿಜವಾದ ಪೊಲೀಸ್ ಬಂದಾಗ ತಪ್ಪಾಗಿ ಸೆಲ್ಯೂಟ್ ಹೊಡೆದು ಆತ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಅನುಪಮ್ ಮದನ್ ಖಂಡ್ರೆ (24) ಬಂಧಿತ ವ್ಯಕ್ತಿ. ಪೊಲೀಸ್ ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರದಲ್ಲಿ ಭದ್ರತೆ ಕಾಪಾಡುವ ಪೊಲೀಸ್ ಅಧಿಕಾರಿಯಂತೆ ನಟಿಸಿದ್ದ. ಆದರೆ, ಆತನ ಮೋಸ ಹೆಚ್ಚು ಕಾಲ ನಡೆಯದೇ ಸಿಕ್ಕಿ ಬಿದ್ದಿದ್ದಾನೆ.
ಪಾತೂರ್ ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯಲ್ಲಿ 12 ನೇ ತರಗತಿ ಮೊದಲ ಪರೀಕ್ಷೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಪಂಗ್ರಾ ಬಂಡಿ ಮೂಲದ ಖಂಡ್ರೆ ತನ್ನ ಸಹೋದರಿಯ ಮೋಸಕ್ಕೆ ಸಹಾಯ ಮಾಡಲು ಉತ್ತರ ಪ್ರತಿಗಳನ್ನು ಕಳ್ಳಸಾಗನೆ ಮಾಡಲು ‘ನಕಲಿ’ ಪೊಲೀಸ್ ಆಗಿ ಮಾರ್ಪಟ್ಟಿದ್ದ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡ ಭದ್ರಗೆಗಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿತ್ತು. ತನ್ನ ‘ಹಿರಿಯ ಅಧಿಕಾರಿಗಳನ್ನು’ ನೋಡಿದ ಖಂಡ್ರೆ ಅವರಿಗೆ ಸೆಲ್ಯೂಟ್ ಹೊಡೆದಿದ್ದ. ಆದರೆ ಪೊಲೀಸರಂತೆ ಸೆಲ್ಯೂಟ್ ಹೊಡೆಯಲು ಆತನಿಗೆ ಸಾಧ್ಯವಾಗಿರಲಿಲ್ಲ.
ಆತ ತಪ್ಪಾಗಿ ಸೆಲ್ಯೂಟ್ ಹೊಡೆದಾಗ ಹಿರಿಯ ಅಧಿಕಾರಿಗಳಿಗೆ ಅನುಮಾನ ಹುಟ್ಟು ಹಾಕಿತ್ತು. ಆತನ ಸೆಲ್ಯೂಟ್ ಪ್ರೋಟೋಕಾಲ್ಗೆ ಅನುಗುಣವಾಗಿರಲಿಲ್ಲ. ಜತೆಗೆ ಸಮವಸ್ತ್ರದ ನಾಮಫಲಕವು ತಪ್ಪಾಗಿತ್ತು. ತಕ್ಷಣವೇ ಅವರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಸಮಗ್ರ ತನಿಖೆ ನಡೆಸಿದ ಪೊಲೀಸರಿಗೆ ಆತನ ಜೇಬಿನಲ್ಲಿ ಇಂಗ್ಲಿಷ್ ಪರೀಕ್ಷಾ ಪತ್ರಿಕೆಯ ಪ್ರತಿ ಸಿಕ್ಕಿದೆ. ಈ ವೇಳೆ ಮೋಸದ ಕೃತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ : Viral News: ವ್ಯಕ್ತಿಯ ಮೂಗಿನ ಹೊಳ್ಳೆಗಳಲ್ಲಿ 68 ಬೆಂಕಿ ಕಡ್ಡಿ! ಇದು ಕೂಡ ವಿಶ್ವ ದಾಖಲೆ
ಈ ಹಿನ್ನೆಲೆಯಲ್ಲಿ ಪೊಲೀಸರು ಕಳ್ಳ ಪೊಲೀಸನನ್ನು ಬಂಧಿಸಿ ಸೆಕ್ಷನ್ 417, 419, 170, 171 ಮತ್ತು 1982 ರ ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆಯಲಾಯಿತು.
ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್ ಆದೇಶ!
ಭೋಪಾಲ್: ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯ (Indore family court)ವು ಮಹತ್ವದ ತೀರ್ಪು ನೀಡಿ, ವಿಚ್ಛೇದನದ ಬಳಿಕ ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5 ಸಾವಿರ ರೂ. ಜೀವನಾಂಶ ನೀಡುವಂತೆ ಬ್ಯೂಟಿ ಪಾರ್ಲರ್ ಹೊಂದಿರುವ ಪತ್ನಿಗೆ ಆದೇಶಿಸಿದೆ (Viral news).
ʼʼಪತ್ನಿಯ ಒತ್ತಾಯದ ಮೇರೆಗೆ ಕಾಲೇಜು ತೊರೆದು ನಿರುದ್ಯೋಗಿಯಾಗಿದ್ದೆ. ಆದರೆ ತನ್ನ ಪತ್ನಿ ನಂದಿನಿ (22) ಇಂದೋರ್‌ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆʼʼ ಎಂದು 23 ವರ್ಷದ ಅಮನ್ ಕುಮಾರ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಈ ವಿಶೇಷ ತೀರ್ಪು ಪ್ರಕಟಿಸಿದೆ.
ಅಮನ್ ಪರ ವಾದ ಮಂಡಿಸಿದ ವಕೀಲ ಮನೀಷ್ ಝರೋಲಾ ಈ ಬಗ್ಗೆ ಮಾತನಾಡಿ, ʼʼನಾವು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಜೀವನಾಂಶವಲ್ಲದೆ ವ್ಯಾಜ್ಯ ಮುಂದುವರಿಸುವುದಕ್ಕೆ ಸಂಬಂಧಿಸಿದ ವೆಚ್ಚವನ್ನೂ ನೀಡುವಂತೆ ನಂದಿನಿಗೆ ಸೂಚಿಸಿದೆʼʼ ಎಂದು ತಿಳಿಸಿದ್ದಾರೆ.
ʼʼಉಜ್ಜಯಿನಿ ಮೂಲದ ಅಮನ್‌ಗೆ ಸ್ನೇಹಿತರೊಬ್ಬರ ಮುಖಾಂತರ 2020ರಲ್ಲಿ ನಂದಿನಿಯ ಪರಿಚಯವಾಗಿತ್ತು. ಆ ಪರಿಚಯ ಬಳಿಕ ಸಲುಗೆಗೆ ತಿರುಗಿತ್ತು. ನಂತರ ನಂದಿನಿ ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ ಅಮನ್ ಇದಕ್ಕೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿರಲಿಲ್ಲ. ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕ‍್ಳಳುವುದಾಗಿ ನಂದಿನಿ ಬೆದರಿಕೆ ಒಡ್ಡಿದ್ದರು. ಹೀಗಾಗಿ ಅನಿವಾರ್ಯವಾಗಿ ಅಮನ್ 2021ರ ಜುಲೈಯಲ್ಲಿ ಆರ್ಯ ಸಮಾಜ ಮಂದಿರದಲ್ಲಿ ನಂದಿನಿಯನ್ನು ವರಿಸಿದ್ದರು. ಬಳಿಕ ಅವರು ಇಂದೋರ್‌ನಲ್ಲಿ ಜೀವನ ಸಾಗಿಸಲು ಆರಂಭಿಸಿದ್ದರುʼʼ ಎಂದು ಮನೀಷ್ ಪ್ರಕರಣದ ಹಿನ್ನೆಲೆ ವಿವರಿಸಿದ್ದಾರೆ.ವಿಚ್ಛೇದನ; ಪತ್ನಿಯೇ ಪತಿಗೆ 5 ಸಾವಿರ ರೂ. ಜೀವನಾಂಶ ಕೊಡಲು ಕೋರ್ಟ್ ಆದೇಶ!