ಮಂಗಳೂರು: ಬೊಂಡ ಫ್ಯಾಕ್ಟರಿಯ ಎಳನೀರು ಕುಡಿದು 137 ಜನ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಬೊಂಡ ಫ್ಯಾಕ್ಟರಿಯನ್ನು ಮುಚ್ಚಲು ಜಿಲ್ಲಾ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬೊಂಡ ಫ್ಯಾಕ್ಟರಿಯ ಎಳನೀರು ಸೇವಿಸಿದ ಬಳಿಕ ಅಸ್ವಸ್ಥಗೊಂಡು ಮಂಗಳೂರು, ಬಂಟ್ವಾಳದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಾಗಿ 84 ಮಂದಿ ಹಾಗೂ ಒಳರೋಗಿಗಳಾಗಿ 53 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಎಳನೀರು ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್ ಕಳುಹಿಸಲಾಗಿದ್ದು, ಪರೀಕ್ಷಾ ವರದಿ ಬರುವವರೆಗೆ ಬೊಂಡ ಫ್ಯಾಕ್ಟರಿಯ ಎಳನೀರು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ಮಾಹಿತಿ ನೀಡಿದ್ದಾರೆ. ಸದ್ಯ ಮಂಗಳೂರು, ಬಂಟ್ವಾಳದ ಆಸ್ಪತ್ರೆಯಲ್ಲಿ 30 ಮಂದಿಗೆ ಚಿಕಿತ್ಸೆ ಮುಂದುವರಿದಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ | Rameshwaram Cafe Blast: ಮೂರು ವರ್ಷದಲ್ಲಿ ಮೂರು ಬ್ಲಾಸ್ಟ್; ಈ ಮೂರಕ್ಕೂ ಶಿವಮೊಗ್ಗ ನಂಟು!
ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿ, ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಂ ಮಾರಾಟ ಸಂಸ್ಥೆಯಾಗಿದೆ. ಎ.8ರಂದು ಬೊಂಡ ಫ್ಯಾಕ್ಟರಿಯಿಂದ ಎಳನೀರು ಖರೀದಿ ಮಾಡಿದ್ದ ಹಲವು ಮಂದಿ, ವಾಂತಿ-ಭೇದಿ, ಜ್ವರ, ತಲೆನೋವಿನಿಂದ ಬಳಲುತ್ತಿದ್ದಾರೆ. ಘಟನೆಗೆ ಕಾರಣ ತಿಳಿಯಲು ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸದ್ಯ ಫ್ಯಾಕ್ಟರಿ ಬಂದ್ ಮಾಡಲು ಸೂಚನೆ ನೀಡಲಾಗಿದೆ.
ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಬಾಲಕ ನೀರಲ್ಲಿ ಮುಳುಗಿ ಸಾವು; ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ಕ್ಷಣ
ಉಡುಪಿ: ಎನ್ವೆಂಚರ್ಸ್ ರೆಸಾರ್ಟ್‌ನ ಸ್ವಿಮ್ಮಿಂಗ್ (Ventures Resort) ಪೂಲ್‌ನಲ್ಲಿ (Swimming pool) ಬಾಲಕನೊರ್ವ ಮುಳುಗಿ ಮೃತಪಟ್ಟಿದ್ದಾರೆ. ಉಡುಪಿಯ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್‌ನಲ್ಲಿ (Drowned in water) ಘಟನೆ ನಡೆದಿದೆ. ಹೊಡೆ ಮೂಲದ ಮುಹಮ್ಮದ್ ಅರೀಝ್ (10) ಮೃತ ದುರ್ದೈವಿ.
ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣಕ್ಕೆ ಮುಹಮ್ಮದ್ ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ.
ರೆಸಾರ್ಟ್ ಸ್ವಿಮ್ಮಿಂಗ್ ಪೂಲ್ ನೀರಿಗೆ ಇಳಿದ ಮುಹಮ್ಮದ್ ಹೊರಬರಲು ಆಗದೆ ತೀವ್ರ ಅಸ್ವಸ್ಥಗೊಂಡಿದ್ದ. ಚಿಂತಾಜನಕ ಸ್ಥಿತಿಯಲ್ಲಿದ್ದ ಮುಹಮ್ಮದ್‌ನನ್ನು ಕೂಡಲೇ ಮೇಲೆತ್ತಿ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮುಹಮ್ಮದ್ ಕೊನೆಯುಸಿರೆಳೆದಿದ್ದಾನೆ. ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.
ಮುಹಮ್ಮದ್ ಪೂಲ್ ಬಳಿ ಬಂದವನೇ ಆಳ ತಿಳಿಯದೆ ನೀರಿಗೆ ಇಳಿದಿದ್ದ. ಈ ವೇಳೆ ಮೇಲೆ ಬರಲು ಪ್ರಯತ್ನಿಸಿದ್ದಾನೆ. ಸುಮಾರು ಎರಡು ನಿಮಿಷಗಳ ಜೀವನ್ಮರಣ ಹೋರಾಡಿದ್ದಾನೆ. ಆದರೆ ವಿಧಿಯಾಟ ಅಂದರೆ ಸುತ್ತಮುತ್ತ ಮೂವತ್ತು ಹೆಚ್ಚು ಜನರು ಇದ್ದರೂ ಯಾರು ಇದನ್ನೂ ಗಮನಿಸಿಲ್ಲ. ಮುಹಮ್ಮದ್‌ನ ಕೊನೆ ಕ್ಷಣದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.