Site icon Vistara News

Maruti Brezza Urbano : ಬ್ರೆಜಾ ಎಸ್​​ಯುವಿಯಲ್ಲಿ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

Maruti Brezza Urbano

ಬೆಂಗಳೂರು: ಮಾರುತಿ ಸುಜುಕಿ ಕಂಪನಿಯು ಬ್ರೆಜಾ ಕಾಂಪ್ಯಾಕ್ಟ್ ಎಸ್​​ಯುವಿಯ ಅರ್ಬನೊ ಎಡಿಷನ್ (Maruti Brezza Urbano) ಎಂಬ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಹೊಸ ಮಾದರಿಯ ಬೆಲೆಯು .8.49 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿದ್ದು ರಿಯಾಯಿತಿ ಬೆಲೆಯಲ್ಲಿ ಹಲವಾರು ಆಕ್ಷೆಸರಿಗಳನ್ನು ಹೊಂದಿದೆ.

ಅರ್ಬಾನೊ ಎಡಿಷನ್ ಅನ್ನು ಎಂಟ್ರಿ ಲೆವೆಲ್ ಎಲ್ಎಕ್ಸ್ಐ ಮತ್ತು ಮಿಡ್-ಲೆವೆಲ್ ವಿಎಕ್ಸ್ಐ ವೇರಿಯೆಂಟ್​ಗಳಲ್ಲಿ ತಮ್ಮ ಆಕ್ಸೆಸರಿಗಳನ್ನು ಪಟ್ಟಿಯನ್ನು ಸುಧಾರಿಸಲೆಂದೇ ಪರಿಚಯಿಸಲಾಗಿದೆ. ಬ್ರೆಝಾ ಎಲ್ ಎಕ್ಸ್ ಐ ಅರ್ಬನೊ ಎಡಿಷನ್ ಕಾರಿನಲ್ಲಿ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಟಚ್ ಸ್ಕ್ರೀನ್, ಸ್ಪೀಕರ್ ಗಳು, ಫ್ರಂಟ್ ಫಾಗ್ ಲ್ಯಾಂಪ್ ಕಿಟ್, ಫಾಗ್ ಲ್ಯಾಂಪ್ ಗಾರ್ನಿಷ್, ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್ ಗಳು, ಫ್ರಂಟ್ ಗ್ರಿಲ್ ಕ್ರೋಮ್ ಗಾರ್ನಿಷ್, ಬಾಡಿ ಸೈಡ್ ಮೌಲ್ಡಿಂಗ್ ಮತ್ತು ವ್ಹೀಲ್ ಆರ್ಚ್ ಕಿಟ್ ಅನ್ನು ನೀಡಲಾಗಿದೆ. ಈ ಆಕ್ಸೆಸರಿಗಳನ್ನು ಸ್ವತಂತ್ರವಾಗಿ ಖರೀದಿಸಿದಾಗ 52,370 ರೂಪಾಯಿ ಬೆಲೆಯಾದರೆ ಕಿಟ್ ರೂಪದಲ್ಲಿ ಖರೀದಿಸಿದರೆ 42,000 ರೂಪಾಯಿಗೆ ದೊರೆಯುತ್ತದೆ. ಅರ್ಬಾನೊ ಎಡಿಷನ್ ಎಲ್ಎಕ್ಸ್ಐ ವೇರಿಯೆಂಟ್​ಗಳಲ್ಲಿ ಇದರ ಬೆಲೆ ಕೇವಲ 15,000 ರೂಪಾಯಿ.

ವಿಎಕ್ಸ್ಐ ವೇರಿಯೆಂಟ್​​ನ ಅರ್ಬಾನೊ ಆವೃತ್ತಿಯು ಹಿಂಭಾಗದ ಕ್ಯಾಮೆರಾ, ಫಾಗ್ ಲ್ಯಾಂಪ್​​ಗಳು ವಿಶೇಷ ಡ್ಯಾಶ್​ಬೋರ್ಡ್​​ ಟ್ರಿಮ್, ಬಾಡಿ ಸೈಡ್ ಮೌಲ್ಡಿಂಗ್, ವೀಲ್ ಆರ್ಚ್ ಕಿಟ್, ಮೆಟಲ್ ಸಿಲ್ ಗಾರ್ಡ್​ಗಳು , ನಂಬರ್​ ಪ್ಲೇಟ್ ಫ್ರೇಮ್ ಮತ್ತು 3 ಡಿ ಫ್ಲೋರ್ ಮ್ಯಾಟ್​ಗಳು ಸಿಗುತ್ತವೆ. ಈ ಎಲ್ಲಾ ಆಕ್ಸೆಸರಿಗಳನ್ನು ಪ್ರತ್ಯೇಕವಾಗಿ ಖರೀದಿಸಿದಾಗ 26,149 ರೂ ಮತ್ತು ಕಿಟ್ ಆಗಿ ಖರೀದಿಸಿದರೆ 18,500 ರೂಪಾಯಿಗೆ ದೊರೆಯುತ್ತದೆ. ಉರ್ಬಾನೊ ಆವೃತ್ತಿಯು ಬೆಲೆಯನ್ನು 3,500 ರೂಪಾಯಿ ಕಡಿಮೆಯಾಗಿದೆ.

ಇದನ್ನೂ ಓದಿ: Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

ಅರ್ಬನೊ ಕಾರು ಪೆಟ್ರೋಲ್ ಮತ್ತು ಸಿಎನ್ ಜಿ ಪವರ್ ಟ್ರೇನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್​ಬಾಕ್ಸ್​ಗಳಿವೆ. ಬ್ರೆಝಾ ಪ್ರಸ್ತುತ 8.34 ಲಕ್ಷ ರೂ.ಗಳಿಂದ 14.14 ಲಕ್ಷ ರೂ.ಗಳವರೆಗೆ ಬೆಲೆ ಹೊಂದಿದೆ. ಜುಲೈನಲ್ಲಿ 25,000 ರೂ.ಗಳವರೆಗೆ ರಿಯಾಯಿತಿಗಳಿವೆ.

ಅರ್ಬಾನೊ ಆವೃತ್ತಿಯ ಪರಿಚಯವು ಇತ್ತೀಚೆಗೆ ಬಿಡುಗಡೆಯಾದ ಡ್ರೀಮ್ ಸೀರಿಸ್ ನಂತೆಯೇ ಇದೆ. ಇದು ಮಾರಾಟವನ್ನು ಸುಧಾರಿಸುವ ಪ್ರಯತ್ನದಲ್ಲಿ ಆಲ್ಟೋ ಕೆ 10, ಎಸ್ ಪ್ರೆಸ್ಸೊ ಮತ್ತು ಸೆಲೆರಿಯೊ ರೀತಿಯೇ ಹೆಚ್ಚುವರಿ ಫೀಚರ್​ಗಳನ್ನು ನೀಡಲಾಗಿದೆ.

ಮಾರುತಿ ಬ್ರೆಝಾ ಪವರ್ ಟ್ರೇನ್

ಬ್ರೆಝಾ 103 ಬಿಹೆಚ್ ಪಿ, 137 ಎನ್ಎಂ 1.5-ಲೀಟರ್, ನಾಲ್ಕು ಸಿಲಿಂಡರ್ ಎನ್ಎ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದ್ದು, 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಯ್ಕೆ ಮಾಡಲಾಗಿದೆ. ಟಾಟಾ ನೆಕ್ಸಾನ್, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ ಎಕ್ಸ್ ಯುವಿ 3 ಎಕ್ಸ್ ಒ ಸೇರಿದಂತೆ ಇತರ ಸಮಾನ ಬೆಲೆಯ ಎಸ್ ಯುವಿಗಳು ಪ್ರತಿಸ್ಪರ್ಧಿಗಳಾಗಿವೆ.

Exit mobile version