ಹೈದರಾಬಾದ್: ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್ ಅವರ ಮಗಳು ಗ್ರೇಸ್ ಹೈದರಾಬಾದ್ನಲ್ಲಿ ಸ್ಥಳೀಯ ಭಕ್ಷ್ಯಗಳನ್ನು ಸವಿಯುತ್ತಾ ಮೋಜಿನ ದಿನವನ್ನು ಕಳೆಯುತ್ತಿದ್ದಾರೆ. ವೃತ್ತಿಯಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಗ್ರೇಸ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. 21 ವರ್ಷದ ಅವರು ಪ್ರಸಿದ್ಧ ‘ಪ್ಯಾರಡೈಸ್ ಬಿರಿಯಾನಿ’ ಜಾಯಿಂಟ್ಗೆ ಭೇಟಿ ನೀಡಿ ಮತ್ತು ಬಿರಿಯಾನಿ (Hyderabadi Biryani) ಮತ್ತು ಖುಬಾನಿ-ಕಾ-ಮೀಠಾ (ಒಣಗಿದ ಏಪ್ರಿಕಾಟ್ಳನ್ನು ಬಳಸಿ ಮಾಡಿರುವ ಸಿಹಿತಿಂಡಿ) ತಿಂದರು. ಅವರು ಕೆಲವು ಎಸ್ಆರ್ಎಚ್ ತಂಡದ ಅಭಿಮಾನಿಗಳ ಜತೆಗೆ ಬಿರಿಯಾನಿ ಸವಿದರು. ಅವರೆಲ್ಲರೂ ವಹೈದರಾಬಾದ್ನಲ್ಲಿ ತಿನ್ನಲೇಬೇಕಾದ ಭಕ್ಷ್ಯಗಳನ್ನು ಗ್ರೇಸ್ಗೆ ಪರಿಚಯಿಸಿದರು.
Biryani in Hyderabad is an emotion! 🤌🏻
— Star Sports (@StarSportsIndia) May 16, 2024
Experience the essence of Hyderabad with #GraceHayden as she indulges in the iconic Hyderabadi Biryani alongside passionate @SunRisers fans! 🍲✨
📺 | #LSGvMI | TODAY, 6:30 PM | #IPLOnStar pic.twitter.com/l75BhuvmQT
“ಹೈದರಾಬಾದ್ನಲ್ಲಿ ಬಿರಿಯಾನಿ ಒಂದು ಭಾವನೆ! @SunRisers ಅಭಿಮಾನಿಗಳೊಂದಿಗೆ ಅಪ್ರತಿಮ ಹೈದರಾಬಾದಿ ಬಿರಿಯಾನಿ ತಿನ್ನುವಾಗ ಐತಿಹಾಸಿಕ ಹೈದರಾಬಾದ್ ನಗರದ ಸಾರವನ್ನು #GraceHayden ಅನುಭವಿಸಿದ್ದಾರೆ” ಎಂದು ಸ್ಟಾರ್ ಸ್ಪೋರ್ಟ್ಸ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ವೈರಲ್ ಆಗಿರುವ ವೀಡಿಯೊಗೆ ಶೀರ್ಷಿಕೆ ನೀಡಿದೆ.
ಕೆಲವು ವಾರಗಳ ಹಿಂದೆ, ಎಸ್ಆರ್ಎಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಕುಟುಂಬದೊಂದಿಗೆ ಹೈದರಾಬಾದ್ ಬಿರಿಯಾನಿ ಸವಿದಿದ್ದರು. ಕಮಿನ್ಸ್ ಮತ್ತು ಅವರ ಕುಟುಂಬ ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿರುವ ಸದರ್ನ್ ಮಿರ್ಚಿ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದರು.
ಗುರುವಾರ, ಕಮಿನ್ಸ್ ನೇತೃತ್ವದ ಎಸ್ಆರ್ಎಚ್ಗು ಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವು ರದ್ದಾದ ನಂತರ ಐಪಿಎಲ್ 2024ರ ಪ್ಲೇಆಫ್ನಲ್ಲಿ ಸ್ಥಾನ ಪಡೆದ ಮೂರನೇ ತಂಡ ಎನಿಸಿಕೊಂಡಿತು.
ಇದನ್ನೂ ಓದಿ: Virat kohli : ತಮ್ಮ ಜೀವನದ ಎರಡು ಆಘಾತಕಾರಿ ಸಂದರ್ಭಗಳನ್ನು ವಿವರಿಸಿದ ವಿರಾಟ್ ಕೊಹ್ಲಿ
ಎಸ್ಆರ್ಎಚ್ ಈಗಾಗಲೇ ಅರ್ಹತೆ ಪಡೆದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಜತೆ ಪ್ಲೇಆಫ್ ಪಟ್ಟಿಯಲ್ಲಿ ಸೇರಿಕೊಂಡಿದೆ. ನಾಲ್ಕನೇ ಮತ್ತು ಅಂತಿಮ ಪ್ಲೇಆಫ್ ಸ್ಥಾನ ಶನಿವಾರ ಸಂಜೆ ನಿರ್ಧಾರಗೊಳ್ಳಲಿದೆ. ಸಿಎಸ್ಕೆ, ಆರ್ಸಿಬಿ ತಂಡಗಳು ಪ್ರಸ್ತುತ ಸ್ಪರ್ಧೆಯಲ್ಲಿವೆ.