Site icon Vistara News

Menstrual Leave: ಋತುಸ್ರಾವದ ರಜೆ ಬಗ್ಗೆ ಮಾದರಿ ನೀತಿ ರೂಪಿಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್​​​ ನಿರ್ದೇಶನ

ನವದೆಹಲಿ: ರಾಜ್ಯ ಸರ್ಕಾರ ಮತ್ತು ಇತರ ಪಾಲುದಾರರ ಜತೆ ಮಾಲೋಚನೆ ನಡೆಸಿ ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ (Menstrual Leave) ಕುರಿತು ಮಾದರಿ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಈ ನಿರ್ದೇಶನ ಕೊಟ್ಟಿದೆ. ಇದು ಸರ್ಕಾರದ ನೀತಿಗೆ ಸಂಬಂಧಿಸಿದ್ದು ಹಾಗೂ ನ್ಯಾಯಾಲಯಗಳು ಪರಿಶೀಲಿಸಬೇಕಾದ ವಿಷಯವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವೇತನ ಸಹಿ ಋತುಸ್ರಾವದ ರಜೆ ನೀಡಲು ನಿರ್ದೇಶಿಸುವಂತೆ ಕೋರ್ಟ್​ಗೆ ಮನವಿ ಸಲ್ಲಿಸಿದ ಅರ್ಜಿದಾರರು ಮತ್ತು ವಕೀಲ ಶೈಲೇಂದ್ರ ತ್ರಿಪಾಠಿ ಅವರ ಪರವಾಗಿ ಹಾಜರಾದ ವಕೀಲ ರಾಕೇಶ್ ಖನ್ನಾ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಸಂಪರ್ಕಿಸಲು ನ್ಯಾಯಪೀಠ ಸಲಹೆ ನೀಡಿತು.

ಇದನ್ನೂ ಓದಿ: Rain Affected areas: ಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ: ಡಿಸಿಗಳಿಗೆ ಸಿಎಂ ಸೂಚನೆ

ನೀತಿ ನಿರೂಪಣೆ ಮಟ್ಟದಲ್ಲಿ ಈ ವಿಷಯವನ್ನು ಪರಿಶೀಲಿಸಬೇಕಾಗಿದೆ. ಸಂಬಂಧಪಟ್ಟ ಎಲ್ಲರ ಜತೆ ಸಮಾಲೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಮಾದರಿ ನೀತಿಯನ್ನು ರೂಪಿಸಬಹುದೇ ಎಂದು ಪರಿಶೀಲಿಸಲು ಕೇಂದ್ರ ಸರ್ಕಾರದ ಕಾರ್ಯದರ್ಶಿಯನ್ನು ವಿನಂತಿಸುತ್ತೇವೆ ಎಂದು ಕೋರ್ಟ್​ ಹೇಳಿದೆ. ಇದೇ ವೇಳೆ ಕೋರ್ಟ್​​ ಈ ನಿಟ್ಟಿನಲ್ಲಿ ರಾಜ್ಯಗಳು ಯಾವುದೇ ಕ್ರಮಗಳನ್ನು ತೆಗೆದುಕೊಂಡರೆ ಕೇಂದ್ರದ ಸಮಾಲೋಚನಾ ಪ್ರಕ್ರಿಯೆಯು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈಗಾಗಲೇ ಮುಟ್ಟಿನ ರಜೆ ನೀಡುವ ಕಂಪನಿಗಳ ಪಟ್ಟಿ ಇಲ್ಲಿದೆ

ಭಾರತದಲ್ಲಿ ಹಲವಾರು ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳನ್ನು ಬೆಂಬಲಿಸಲು ಮುಟ್ಟಿನ ರಜೆ ನೀತಿಗಳನ್ನು ಜಾರಿಗೆ ತಂದಿವೆ. ಕೆಲವು ಜನಪ್ರಿಯ ಕಂಪನಿಗಳ ಹೆಸರನ್ನು ಇಲ್ಲಿ ನೀಡಲಾಗಿದೆ.

ಜೊಮ್ಯಾಟೊ: ಋತುಚಕ್ರದ ಸಮಸ್ಯೆಯನ್ನು ಕಡಿಮೆ ಮಹಿಳಾ ಮತ್ತು ತೃತೀಯ ಲಿಂಗಿ ಉದ್ಯೋಗಿಗಳಿಗೆ ವಾರ್ಷಿಕವಾಗಿ 10 ದಿನಗಳವರೆಗೆ ವೇತನ ಸಹಿತ ಅವಧಿಯ ರಜೆಯನ್ನು ನೀಡುತ್ತದೆ.

ಬೈಜೂಸ್: ಮಹಿಳಾ ಉದ್ಯೋಗಿಗಳನ್ನು ಬೆಂಬಲಿಸಲು ಮುಟ್ಟಿನ ರಜೆಯನ್ನು ಒದಗಿಸುತ್ತದೆ.

ಸ್ವಿಗ್ಗಿ: ಉತ್ತಮ ಕೆಲಸದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಇತ್ತೀಚೆಗೆ ಇದೇ ರೀತಿಯ ನೀತಿಯನ್ನು ಪರಿಚಯಿಸಿತ್ತು.

ಮ್ಯಾ್ಗ್​ಸ್ಟರ್​:ಈ ಡಿಜಿಟಲ್ ನಿಯತಕಾಲಿಕ ವೇದಿಕೆ ವೇತನ ಸಹಿತ ರಜೆ ನೀಡುತ್ತದೆ.

ಓರಿಯಂಟ್ ಎಲೆಕ್ಟ್ರಿಕ್: ಈ ಕಂಪನಿಯೂ ಇತ್ತೀಚೆಗೆ ಸಂಬಳ ಸಮೇತ ಮುಟ್ಟಿನ ರಜೆ ಕೊಟ್ಟಿದೆ.

ಕಲ್ಚರ್ ಮೆಷಿನ್: ಮಹಿಳಾ ಉದ್ಯೋಗಿಗಳಿಗೆ ತಮ್ಮ ಋತುಚಕ್ರದ ಮೊದಲ ದಿನದಂದು ಒಂದು ದಿನ ರಜೆ ತೆಗೆದುಕೊಳ್ಳಲು ಅನುವು ಮಾಡಿದೆ.

ಗೋಜೂಪ್ ಆನ್ಲೈನ್ ಪ್ರೈವೇಟ್ ಲಿಮಿಟೆಡ್: ಮುಟ್ಟಿನ ಮೊದಲ ದಿನದಂದು ವೇತನ ಸಹಿತ ರಜೆ ಮತ್ತು ಮನೆಯಿಂದ ಕೆಲಸ ಮಾಡುವ ಆಯ್ಕೆ ಡಿಜಿಟಲ್ ಮಾಧ್ಯಮ ಕಂಪನಿ ನೀಡಿದೆ.

ಐವಿಪನನ್: ವರ್ಷಕ್ಕೆ 12 ದಿನಗಳ ಅವಧಿಯ ಮುಟ್ಟಿನ ರಜೆಯನ್ನು ಒದಗಿಸುವ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಇದಾಗಿದೆ.

ಇಂಡಸ್ಟ್ರಿಎಆರ್ ಸಿ: ಮಹಿಳೆಯರಿಗೆ ಒಂದು ಅಥವಾ ಎರಡು ದಿನ ರಜೆ ತೆಗೆದುಕೊಳ್ಳಲು ಅನುಮತಿ ನೀಡುತ್ತದೆ. ಆದರೆ ನಂತರ ರಜೆಯನ್ನು ಸರಿದೂಗಿಸಬೇಕು.

Exit mobile version