Site icon Vistara News

Milk Price Hike: ಹಾಲಿನ ದರ 4 ರೂ. ಹೆಚ್ಚಳ? ಶುಭಂ ಗೋಲ್ಡ್‌ ದರ ಏರಿಕೆ

shubham milk price hike

ಬಳ್ಳಾರಿ: ಶುಭಂ ಗೋಲ್ಡ್‌ ಹಾಲಿನ ದರವನ್ನು (Shubham Gold Milk) ಅರ್ಧ ಲೀಟರ್‌ಗೆ ಏಕಾಏಕಿ 4 ರೂ. ಹೆಚ್ಚಳ ಮಾಡಲಾಗಿದೆ. ಘೋಷಿತ ದರ ಏರಿಕೆಗಿಂತ (Milk Price Hike) ಹೆಚ್ಚು ದರ ಏರಿಸಲಾಗಿದೆ ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಕೆಎಂಎಫ್‌ ನಂದಿನ ಹಾಲಿನ (KMF Nandini Milk) ದರ ಹೆಚ್ಚಿಸಿ ಪರಿಷ್ಕೃತ ದರದ ಪಟ್ಟಿ ಬಿಡುಗಡೆ ಮಾಡಿತ್ತು. ಪ್ರತಿ ಲೀಟರ್‌ ಹಾಗೂ ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ನಲ್ಲಿ 50 ಎಂಎಲ್‌ ಹಾಲಿನ ಪ್ರಮಾಣ ಹೆಚ್ಚಿಸಿ 2 ರೂ. ಹೆಚ್ಚಳ ಮಾಡಿರುವುದಾಗಿ ಘೋಷಣೆ ಮಾಡಿತ್ತು. ಆದ್ರೆ ಶುಭಂ ಗೋಲ್ಡ್ ಹಾಲಿನ ದರವನ್ನು ತಾನೇ ಘೋಷಿಸಿದಂತೆ 2 ರೂ. ಹೆಚ್ಚಳ ಮಾಡುವ ಬದಲು ಅರ್ಧ ಲೀಟರ್‌ಗೆ 3 ರೂ. ಹಾಗೂ 1 ಲೀಟರ್‌ಗೆ 4 ರೂ. ಹೆಚ್ಚಳ ಮಾಡಿದೆ. ಈಗ ಬಂದಿರುವ ಹೊಸ ಪ್ಯಾಕೆಟ್‌ನಲ್ಲಿ ದುಬಾರಿ ಬೆಲೆ ಮುದ್ರಿತವಾಗಿದೆ. ಈ ಮೊದಲು ಅರ್ಧ ಲೀಟರ್‌ಗೆ 26 ರೂ. ಇದ್ದ ಶುಭಂ ಗೋಲ್ಡ್ ಹಾಲು 28 ರೂ. ಬದಲು 29 ರೂ. ಆಗಿದೆ. 1 ಲೀಟರ್‌ಗೆ 49 ರೂ. ಇದ್ದ ಹಾಲು 51 ರೂ. ಬದಲು 53 ರೂಪಾಯಿ ಆಗಿದೆ.

ಹೀಗಾಗಿ, ಹಾಲಿನ ದರ ಏರಿಕೆ ವಿಚಾರದಲ್ಲಿ ಕೆಎಂಏಫ್‌ ಹಾಗೂ ಸರ್ಕಾರ ಸುಳ್ಳು ಹೇಳಿದೆ ಎಂದು ಬಳಕೆದಾರರು ಆಕ್ರೋಶಿಸಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಹಾಲು ಒಕ್ಕೂಟದಿಂದ ದರ ಹೆಚ್ಚಳದ ಹಾಲು ಮಾರಾಟವಾಗುತ್ತಿದೆ. ಈ ಬಗ್ಗೆ ಬಳ್ಳಾರಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಗೃಹಿಣಿಯರು, ಏಕಾಏಕಿ ದರ ಹೆಚ್ಚಳ ಮಾಡಿ ನಮ್ಮ ಜೇಬಿಗೆ ಸರಕಾರ ಕತ್ತರಿ ಹಾಕ್ತಿದೆ ಎಂದು ಆಕ್ರೋಶಿಸಿದ್ದಾರೆ.

ಕೆಎಂಎಫ್‌ ದರ ಹೆಚ್ಚಳ ಹೀಗಿತ್ತು:

ಟೋನ್ಡ್‌ ಹಾಲು
550 ಎಂಎಲ್‌ – 24 ರೂ.
1050 ಎಂಎಲ್‌ – 44 ರೂ.

ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು
550 ಎಂಎಲ್‌ – 24 ರೂ.
1050 ಎಂಎಲ್‌ – 45 ರೂ.

ಹೋಮೋಜಿನೈಸ್ಡ್‌ ಹಸುವಿನ ಹಾಲು
550 ಎಂಎಲ್‌ – 26 ರೂ.
1050 ಎಂಎಲ್‌ – 48 ರೂ.

ಸ್ಪೆಷಲ್‌ ಹಾಲು
550 ಎಂಎಲ್‌ – 27 ರೂ.
1050 ಎಂಎಲ್‌ – 50 ರೂ.

ಶುಭಂ ಹಾಲು
550 ಎಂಎಲ್‌ – 27 ರೂ.
1050 ಎಂಎಲ್‌ – 50 ರೂ.

ಸಮೃದ್ಧಿ ಹಾಲು
550 ಎಂಎಲ್‌ – 28 ರೂ.
1050 ಎಂಎಲ್‌ – 53 ರೂ.

ಹೋಮೋಜಿನೈಸ್ಡ್‌ ಶುಭಂ ಹಾಲು
550 ಎಂಎಲ್‌ – 27 ರೂ.
1050 ಎಂಎಲ್‌ – 51 ರೂ.

ಸಂತೃಪ್ತಿ ಹಾಲು
550 ಎಂಎಲ್‌ – 30 ರೂ.
1050 ಎಂಎಲ್‌ – 57 ರೂ.

ಶುಭಂ ಗೋಲ್ಡ್‌ ಹಾಲು
550 ಎಂಎಲ್‌ – 28 ರೂ.
1050 ಎಂಎಲ್‌ – 51 ರೂ.

ಡಬಲ್‌ ಟೋನ್ಡ್‌ ಹಾಲು
550 ಎಂಎಲ್‌ – 23 ರೂ.
1050 ಎಂಎಲ್‌ – 43 ರೂ.

ಇದನ್ನೂ ಓದಿ: Nandini Milk Price Hike : ಕೈಗೆ ಸಿಗದ ನಂದಿನಿ ಹಾಲು; ಪರಿಷ್ಕೃತ ದರ ಎಷ್ಟು?

Exit mobile version