Site icon Vistara News

MLCs Health Expenditure: ಆರೋಗ್ಯಕ್ಕಾಗಿ ಲಕ್ಷ ಲಕ್ಷ ಕ್ಲೇಮ್; ಅತಿ ಹೆಚ್ಚು ಸರ್ಕಾರದ ಹಣ ಪಡೆದ ಎಂಎಲ್‌ಸಿಗಳು ಇವರೇ ನೋಡಿ!

Health Expenditure

ಬೆಂಗಳೂರು: ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ರಾಜ್ಯದ ವಿಧಾನ ಪರಿಷತ್ ಸದಸ್ಯರು ಲಕ್ಷ ಲಕ್ಷ ಹಣ ಕ್ಲೇಮ್ ಮಾಡಿರುವುದು ಕಂಡುಬಂದಿದೆ. ಕೇವಲ ಒಂದು ವರ್ಷದಲ್ಲಿ ಲಕ್ಷಾಂತರ ರೂ.ಗಳನ್ನು ಸರ್ಕಾರದಿಂದ ಎಂಎಲ್‌ಸಿಗಳು ಪಡೆದಿರುವ ಮಾಹಿತಿ ಬಹಿರಂಗವಾಗಿದೆ. ಸಾಮಾಜಿಕ ಹೋರಾಟಗಾರ ಎಚ್‌.ಎಂ.ವೆಂಕಟೇಶ್‌ ಅವರು ಮಾಹಿತಿ ಹಕ್ಕು ಕಾಯ್ದೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎಂಎಲ್‌ಸಿಗಳು ಆರೋಗ್ಯಕ್ಕಾಗಿ (MLCs Health Expenditure) ಪಡೆದಿರುವ ಹಣದ ಕುರಿತ ಮಾಹಿತಿಯನ್ನು ಸಚಿವಾಲಯವು ನೀಡಿದೆ.

ಆರೋಗ್ಯಕ್ಕಾಗಿ ಸರ್ಕಾರದಿಂದ ಹಣ ಕ್ಲೇಮ್ ಮಾಡಲು ಎಂಎಲ್‌ಸಿಗಳಿಗೆ ಅವಕಾಶವಿದೆ. ಹೀಗಾಗಿ 2023ರ ಮೇ 1 ರಿಂದ 2024ರ ಜುಲೈ ತಿಂಗಳವರೆಗೆ ಯಾರು ಎಷ್ಟು ಹಣ ಪಡೆದಿದ್ದಾರೆ ಎಂಬ ಮಾಹಿತಿಯನ್ನು ವಿಧಾನ ಪರಿಷತ್‌ ಸಚಿವಾಲಯ ಮಾಹಿತಿ ನೀಡಿದೆ.

ಎಂಎಲ್‌ಸಿಗಳ ಪೈಕಿ ಯಾರು ಎಷ್ಟು ಪಡೆದಿದ್ದಾರೆ ಎಂದು ನೋಡುವುದಾದರೆ, ಎಂಎಲ್‌ಸಿ ಭಾರತಿ ಶೆಟ್ಟಿ ಅವರು ಒಂದು ವರ್ಷದಲ್ಲಿ 48.70 ಲಕ್ಷ ರೂಪಾಯಿ ಕ್ಲೇಮ್ ಮಾಡುವ ಮೂಲಕ ಅತಿ ಹೆಚ್ಚು ಹಣ ಕ್ಲೇಮ್ ಮಾಡಿರುವ ವಿಧಾನ ಪರಿಷತ್ ಸದಸ್ಯೆಯಾಗಿದ್ದಾರೆ. ಎರಡನೇ ಸ್ಥಾನದಲ್ಲಿದ್ದಾರೆ ಕೊಟ್ಯಧೀಶ್ವರ ಸಿ.ಪಿ.ಯೋಗೇಶ್ವರ್ ಇದ್ದಾರೆ. ಇವರು 39.64 ಲಕ್ಷ ರೂ.ಗಳನ್ನು ಸರ್ಕಾರದಿಂದ ಆರೋಗ್ಯಕ್ಕಾಗಿ ಖರ್ಚು ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಇದ್ದು, ಅಕ್ಕ ಸಚಿವರಾಗಿದ್ದರೂ ಕೂಡ ಆರೋಗ್ಯಕ್ಕಾಗಿ 17.03 ಲಕ್ಷ ರೂ.ಗಳನ್ನು ಪಡೆದಿದ್ದಾರೆ.

ಎಂಎಲ್‌ಸಿ ಭಾರತಿ ಶೆಟ್ಟಿ ಮತ್ತು ಸಿ.ಪಿ.ಯೋಗೇಶ್ವರ್

ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಕೂಡ ಅತಿ ಹೆಚ್ಚು ಸರ್ಕಾರದ ಹಣ ಖರ್ಚು ಮಾಡಿರುವುದು ಕಂಡುಬಂದಿದೆ. ಒಂದೇ ವರ್ಷದಲ್ಲಿ ಇವರು ಆರೋಗ್ಯಕ್ಕಾಗಿ 7.26 ಲಕ್ಷ ರೂಪಾಯಿ ಸರ್ಕಾರದ ಹಣ ಖರ್ಚು ಮಾಡಿದ್ದಾರೆ. ಹಿರಿಯ ಶಾಸಕ ಲಕ್ಷ್ಮಣ್ ಸವದಿಯಿಂದ ಕೂಡ ಸರ್ಕಾರದ ಹಣ ಖರ್ಚಾಗಿದೆ. ಇವರು 2,41,574 ರೂ.ಗಳನ್ನು ಪಡೆದಿದ್ದು, ಟಿ.ಎ. ಶರವಣ ಅವರು 2,14,770 ರೂಪಾಯಿ ಖರ್ಚು ಮಾಡಿದ್ದಾರೆ.

ಸರ್ಕಾರದ ಹಣ ಪಡೆದ ಎಂಎಲ್‌ಸಿಗಳ ಪಟ್ಟಿ

ಇದನ್ನೂ ಓದಿ | Industrial City: ಹೊಸೂರಿನಲ್ಲಿ ಟಾಟಾ ಗ್ರೂಪ್‌ನಿಂದ ಇಂಡಸ್ಟ್ರಿಯಲ್‌ ಸಿಟಿ ನಿರ್ಮಾಣಕ್ಕೆ ಸಿದ್ಧತೆ; ಬೆಂಗಳೂರಿನ ಐಟಿ ಸಿಟಿ ಪಟ್ಟಕ್ಕೆ ಕುತ್ತು?

Exit mobile version