Site icon Vistara News

Hage Geingob : ಕ್ಯಾನ್ಸರ್​ ದಿನದಂದು ಅದೇ ರೋಗದಿಂದ ಮೃತಪಟ್ಟ ನಮೀಬಿಯಾ ಅಧ್ಯಕ್ಷ

Hage Geingob

ಬೆಂಗಳೂರು : ನಮೀಬಿಯಾದ ಅಧ್ಯಕ್ಷ ಹ್ಯಾಗೆ ಗೀಂಗೋಬ್ (Hage Geingob) ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಕ್ಯಾನ್ಸರ್ ಪತ್ತೆಯಾದ ಕೆಲವು ವಾರಗಳ ನಂತರ 82 ವರ್ಷದ ಅಧ್ಯಕ್ಷ ಭಾನುವಾರ ಮುಂಜಾನೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅಂದ ಹಾಗೆ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನ. ಅದೇ ದಿನ ನಮೀಬಿಯಾ ಅಧ್ಯಕ್ಷರು ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ. ಗೀಂಗೋಬ್ ಅವರು ಪ್ರಾಸ್ಟೇಟ್ (ವೃಷಣ) ಕ್ಯಾನ್ಸರ್​ನಿಂದ ಬಳಸುತ್ತಿದ್ದರು. ಅವರು 2015 ರಿಂದ ಕಡಿಮೆ ಜನಸಂಖ್ಯೆ ಮತ್ತು ಹೆಚ್ಚಾಗಿ ಒಣ ಹವೆಯಿಂದ ಕೂಡಿರುವ ದಕ್ಷಿಣ ಆಫ್ರಿಕಾದ ದೇಶದ ಅಧ್ಯಕ್ಷ ಸ್ಥಾನ ವಹಿಸಿದ್ದರು.

ವಜ್ರಗಳು ಮತ್ತು ಎಲೆಕ್ಟ್ರಿಕ್ ಕಾರುಗಳ ತಯಾರಿಗೆ ಬೇಕಾಗಿರುವ ಬ್ಯಾಟರಿಯ ಕಚ್ಚಾವಸ್ತುವಾಗಿರುವ ಲಿಥಿಯಂನ ಗಮನಾರ್ಹ ನಿಕ್ಷೇಪಗಳನ್ನು ಹೊಂದಿರುವ ಈ ರಾಷ್ಟ್ರಕ್ಕೆ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೆ ಉಪಾಧ್ಯಕ್ಷ ನಂಗೊಲೊ ಮುಂಬಾ ಅಧಿಕಾರ ವಹಿಸಲಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್​​ನಲ್ಲಿ ಅಧ್ಯಕ್ಷರ ಸಾವಿನ ಕುರಿತ ಪೋಸ್ಟ್ ಸಾವಿಗೆ ಕಾರಣವನ್ನು ನೀಡಿಲ್ಲ, ಆದರೆ ಕಳೆದ ತಿಂಗಳ ಕೊನೆಯಲ್ಲಿ ವೈದ್ಯಕೀಯ ತಪಾಸಣೆಯ ಬಳಿಕ ಅಧ್ಯಕ್ಷರಿಗೆ ಕ್ಯಾನ್ಸರ್​ ಇರುವುದು ಗೊತ್ತಾಗಿತ್ತು. ಅದರ ಚಿಕಿತ್ಸೆಗಾಗಿ ಅಮೆರಿಕಕ್ಕೆ ಪ್ರಯಾಣ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ :Joe Biden : ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​​ಗೆ ಗೆಲುವು

1941 ರಲ್ಲಿ ಜನಿಸಿದ ಗೀಂಗೋಬ್ 1990 ರಲ್ಲಿ ಅಲ್ಪಸಂಖ್ಯಾತ ಬಿಳಿಯರ ಆಡಳಿತದ ನಮೀಬಿಯಾಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕಿಂತ ಮೊಲದೇ ಅವರು ರಾಜಕಾರಣಿಯಾಗಿದ್ದರು. ಅವರು ನಮೀಬಿಯಾದ ಸಂವಿಧಾನವನ್ನು ರಚಿಸಿದ ಸಂಸ್ಥೆಯ ಅಧ್ಯಕ್ಷತೆ ವಹಿಸಿದ್ದರು. ಅದೇ ವರ್ಷದ ಮಾರ್ಚ್ 21 ರಂದು ಸ್ವಾತಂತ್ರ್ಯದ ಸಮಯದಲ್ಲಿ ಅದರ ಮೊದಲ ಪ್ರಧಾನಿಯಾಗಿದ್ದರು. ಅವರು 2002 ರವರೆಗೆ ಈ ಸ್ಥಾನವನ್ನು ಉಳಿಸಿಕೊಂಡಿದ್ದರು.

2007 ರಲ್ಲಿ, ಗೀಂಗೋಬ್ ಆಡಳಿತಾರೂಢ ನೈಋತ್ಯ ಆಫ್ರಿಕಾ ಪೀಪಲ್ಸ್ ಆರ್ಗನೈಸೇಶನ್ (ಸ್ವಾಪೊ) ನ ಉಪಾಧ್ಯಕ್ಷರಾದರು. ನಮೀಬಿಯಾವನ್ನು ಇನ್ನೂ ನೈಋತ್ಯ ಆಫ್ರಿಕಾ ಎಂದು ಕರೆಯಲಾಗುತ್ತಿದ್ದಾಗ ಸ್ವಾತಂತ್ರ್ಯ ಹೋರಾಟಗಾರರಾಗಿ ಸೇರಿಕೊಂಡರು. ಸ್ವಾತಂತ್ರ್ಯದ ನಂತರ ನಮೀಬಿಯಾದಲ್ಲಿ ಸ್ವಾಪೋ ಅಧಿಕಾರದಲ್ಲಿದೆ. ಆದರೆ ಸಂಪತ್ತಿನಲ್ಲಿ ಭಾರಿ ಅಸಮಾನತೆಯನ್ನು ಹೊಂದಿದೆ.

2012 ರಲ್ಲಿ ಮತ್ತೆ ಪ್ರಧಾನಿಯಾಗುವ ಮೊದಲು ಗೀಂಗೋಬ್ ವ್ಯಾಪಾರ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 2014 ರ ಚುನಾವಣೆಯಲ್ಲಿ 87% ಮತಗಳೊಂದಿಗೆ ಗೆದ್ದಿದ್ದರು.

Exit mobile version