ಥಿಂಪು: ಭಾರತ ಮತ್ತು ಭೂತಾನ್ (Bhutan) ದೇಶಗಳ ನಡುವೆ ಶುಕ್ರವಾರ ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ ಮತ್ತು ಕೃಷಿ ಕ್ಷೇತ್ರಗಳ ನಡುವಿನ ವಿನಿಯಮದ ಒಪ್ಪಂದ ನಡೆಯಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭೂತಾನ್ ಪ್ರವಾಸದಲ್ಲಿದ್ದು ಅಲ್ಲಿ ಅವರು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲೂ ಗಮನ ಸೆಳೆದಿದ್ದು ಉಭಯ ದೇಶಗಳ ನಡುವೆ ರೈಲು ಸಂಪರ್ಕ (Railway Connection) ಸ್ಥಾಪಿಸುವ ತಿಳುವಳಿಕಾ ಒಡಂಬಡಿಕೆ. ಈ ಮೂಲಕ ನೆರೆಯ ದೇಶಗಳ ನಡುವೆ ರೈಲು ಸಂಚಾರ ಆರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಗೆ ಅವರ ಉಪಸ್ಥಿತಿಯಲ್ಲಿ ಈ ತಿಳುವಳಿಕಾ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಪ್ರಧಾನಿ ಮೋದಿ ಅವರು ಭೂತಾನ್ ಪ್ರಧಾನಿ ಥಿಂಪುವಿನಲ್ಲಿ ಆಯೋಜಿಸಿದ್ದ ಭೋಜನಕೂಟದ ವೇಳೆ ಭೇಟಿಯಾದರು.
ಪಾರೋದಿಂದ ಥಿಂಪುವರೆಗಿನ ದಾರಿಯುದ್ದಕ್ಕೂ ಜನರು ತಮಗೆ ನೀಡಿದ ಸ್ವಾಗತಕ್ಕೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನವೀಕರಿಸಬಹುದಾದ ಇಂಧನ, ಕೃಷಿ, ಯುವ ವಿನಿಮಯ, ಪರಿಸರ ಮತ್ತು ಅರಣ್ಯ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ತಿಳುವಳಿಕೆ ರೂಪಿಸಿದ್ದಾರೆ.
ಮೋದಿಗೆ ಭೂತಾನ್ ಅತ್ಯುನ್ನತ ನಾಗರಿಕ ಗೌರವ
ಥಿಂಪು: ಹತ್ತಾರು ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಈಗ ಭೂತಾನ್ ಕೂಡ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಭೂತಾನ್ (Bhutan) ಅರಸ ಜಿಗ್ಮೆ ಖೇಸರ್ ನಾಮ್‌ಗ್ಯೆಲ್ ವಾಂಗ್ಚುಕ್ (Jigme Khesar Namgyel Wangchuck) ಅವರು ನರೇಂದ್ರ ಮೋದಿ ಅವರಿಗೆ ‘ಆರ್ಡರ್ ಆಫ್ ದಿ ಡ್ರಕ್ ಗ್ಯಾಲ್ಪೊ’ (Order of the Druk Gyalpo) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರೊಂದಿಗೆ, ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೊದಲ ಭೂತಾನ್ ಹೊರತಾದ ವ್ಯಕ್ತಿ ಎನಿಸಿದ್ದಾರೆ.
ಇದನ್ನೂ ಓದಿ : Arvind Kejriwal: ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಕಿಂಗ್‌ಪಿನ್; ಕೋರ್ಟ್‌ಗೆ ಇ.ಡಿ ಮಾಹಿತಿ
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, “ನಾನು ಈ ಪ್ರಶಸ್ತಿಯನ್ನು ವೈಯಕ್ತಿಕ ಎಂದು ಭಾವಿಸುವುದಿಲ್ಲ. ಇದು ಭಾರತದ 140 ಕೋಟಿ ಜನರಿಗೆ ಸಿಕ್ಕ ಗೌರವವಾಗಿದೆ. ಭೂತಾನ್‌ನಲ್ಲಿ ನಿಂತು ಭಾರತದ ಪ್ರತಿಯೊಬ್ಬ ನಾಗರಿಕರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ. ಪ್ರಶಸ್ತಿ ನೀಡಿ ಗೌರವಿಸಿದ ಭೂತಾನ್‌ನ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ನಮನ ಸಲ್ಲಿಸುತ್ತೇನೆ” ಎಂದು ಹೇಳಿದರು.
ನರೇಂದ್ರ ಮೋದಿ ಅವರಿಗೆ ಗ್ರೀಸ್, ಫ್ರಾನ್ಸ್, ಪಪುವಾ ನ್ಯೂಗಿನಿಯಾ ಸೇರಿ ಹಲವು ದೇಶಗಳು ತಮ್ಮ ರಾಷ್ಟ್ರಗಳ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿವೆ. 2020ರಲ್ಲಿ ಅಮೆರಿಕದಿಂದ ʼಲೀಜನ್ ಆಫ್ ಮೆರಿಟ್ʼ, 2019ರಲ್ಲಿ ರಷ್ಯಾದಿಂದ ʼಆರ್ಡರ್ ಆಫ್ ಸೇಂಟ್ ಆಂಡ್ರ್ಯೂʼ, 2019ರಲ್ಲಿ ಯುಎಇಯಿಂದ ʼಆರ್ಡರ್ ಆಫ್ ಜಾಯೆದ್ʼ ಮತ್ತು ʼಆರ್ಡರ್ ಆಫ್ ಅಬ್ದುಲಜೀಜ್ ಅಲ್ʼ, 2016ರಲ್ಲಿ ಸೌದಿ ಅರೇಬಿಯಾದಿಂದ ʼಸೌದ್ʼ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಭೂತಾನ್ ಭೇಟಿ ವೇಳೆ ಮೋದಿ ಅವರು ಭೂತಾನ್ ಪ್ರದಾನಿ ತ್ಶೆರಿಂಗ್ ತೊಬ್ಗೆ ಅವರ ಜತೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಭಾರತ ಹಾಗೂ ಭೂತಾನ್ ನಡುವಿನ ಸಂಬಂಧ ವೃದ್ಧಿ, ವ್ಯಾಪಾರ ಒಪ್ಪಂದಗಳ ಕುರಿತು ಮಹತ್ವದ ಚರ್ಚೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಪರಸ್ಪರ ಆರ್ಥಿಕ ಸಹಕಾರ, ಸಂಪರ್ಕ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 2019ರಲ್ಲಿ ಕೊನೆಯ ಬಾರಿ ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿದ್ದರು.