Site icon Vistara News

Ram Bhajan : ರಾಮ ಭಜನೆ ಹಾಡಿದ ಜಮ್ಮು- ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ. ವಿಡಿಯೋ ವೈರಲ್

Ram Bhajan

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ರಾಜ್ಯದ ಕತ್ರಾದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (National Conference)​ ಪಕ್ಷದ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿದ್ದ ವೇಳೆ ರಾಮ ಭಜನೆ (Ram Bhajan) ಹಾಡುವ ಮೂಲಕ ಸುದ್ದಿಯಾಗಿದ್ದಾರೆ. ಪಕ್ಷದ ನಾಯಕರು ಹಾಗೂ ಅವರ ಕುಟುಂಬಸ್ಥರು ಇದ್ದ ಸಂದರ್ಭದಲ್ಲಿ ಅವರು ರಾಮನ ಕೀರ್ತನೆಯನ್ನು ಹಾಡಿರುವ ಈ ವಿಡಿಯೊ ವೈರಲ್ ಆಗಿದೆ. ಮಸೀದಿ, ಚರ್ಚು, ಗುರುದ್ವಾರ ಸೇರಿದಂತೆ ಎಲ್ಲ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ವೇಳೆ ಅಲ್ಲಿನವರಂತೆಯೇ ಇರುವ ಫಾರೂಕ್ ಅಬ್ದುಲ್ಲಾ ಈ ಬಾರಿ ರಾಮನ ಭಕ್ತರಾಗಿದ್ದಾರೆ.

ಅವರ ರಾಮ ಭಜನೆಗೆ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಚುನಾವಣೆಯಲ್ಲಿ ಪ್ರತಿ ಮತದ ಮೌಲ್ಯವೇನು ಎಂಬುದು ಮಾಜಿ ಮುಖ್ಯಮಂತ್ರಿ ಡಾ.ಫಾರೂಕ್ ಅಬ್ದುಲ್ಲಾ ಅವರಿಗೆ ಚೆನ್ನಾಗಿ ಗೊತ್ತಿದೆ. ಮತಗಳಿಗಾಗಿ ಈ ನಾಯಕ ದೇವಾಲಯ, ಮಸೀದಿ, ಗುರುದ್ವಾರ, ಭಜನೆ, ಕೀರ್ತನೆ, ಕುಲದೇವ್ ಸೇರಿದಂತೆ ಯಾವುದೇ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಅವರ ಈ ನೈಪುಣ್ಯತೆಯಿಂದಲೇ ಹಲವು ವರ್ಷ ರಾಜಕಾರಣದಲ್ಲಿದ್ದಾರೆ ಎಂಬುದಾಗಿ ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿರುವ ಫಾರೂಕ್ ಅಬ್ದುಲ್ಲಾ ಅವರು ಇಂಡಿಯಾ ಬ್ಲಾಕ್​ನ ನಾಯಕರೂ ಹೌದು. ಚುನಾವಣೆ ಹಿನ್ನೆಲೆಯಲ್ಲಿ ಅವರು ಗುರುವಾರ ಸಂಜೆ ಕತ್ರಾದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತ ಅನಿಲ್ ಶರ್ಮಾ ಅಲಿಯಾಸ್ ಬಬ್ಬು ಅವರ ಮನೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ರಾಮ ಭಜನೆ ಹಾಡಿದ್ದಾರೆ. ಸ್ಥಳದಲ್ಲಿದ್ದ ಇನ್ನೂ ಹಲವರು ಅಬ್ದುಲ್ಲಾ ಅವರೊಂದಿಗೆ ಧ್ವನಿಗೂಡಿಸಿ ತಾವೂ ಹಾಡಿದ್ದಾರೆ. ಹೀಗಾಗಿ ಆ ಪರಿಸರವೇ ರಾಮ ಮಯವಾಗಿತ್ತು.

ಇದನ್ನೂ ಓದಿ: Madrasa: ಉತ್ತರ ಪ್ರದೇಶದಲ್ಲಿ ಮದರಸಾ ಶಿಕ್ಷಣ ರದ್ದುಪಡಿಸುವ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಫಾರೂಕ್ ಅಬ್ದುಲ್ಲಾ ಭಜನೆಗಳನ್ನು ಹಾಡುವುದನ್ನು. ಚಲನಚಿತ್ರ ಹಾಡುಗಳಿಗೆ ನೃತ್ಯ ಮಾಡುವುದು ಮಾಮೂಲಿ. ಏಕೆಂದರೆ ಡಾ. ಫಾರೂಕ್ ಅಬ್ದುಲ್ಲಾ ಸ್ಥಳೀಯ ವಾತಾವರಣವು ಹೇಗಿದೆಯೋ ಹಾಗೆ ಇರುವುದು ಹವ್ಯಾಸ. ಗಾಳಿ ಬೀಸುವ ದಿಕ್ಕಿನಲ್ಲಿ ನಡೆಯುವುದು ಉತ್ತಮ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ ಎಂಬುದಾಗಿ ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇನ್ನೂ ಕೆಲವರು ಮಾಜಿ ಸಿಎಂ ಗುಣವನ್ನು ಮೆಚ್ಚಿದ್ದಾರೆ. ಎಲ್ಲ ದೇವರ ಹಾಡುಗಳನ್ನು ಅವರು ಮನದಲ್ಲಿಟ್ಟುಕೊಂಡು ಹಾಡಿರುವುದು ದೊಡ್ಡತನ ಎಂದು ಹೇಳಿದ್ದಾರೆ.

Exit mobile version