Site icon Vistara News

Ind vs Pak : ನೆಟ್​ಫ್ಲಿಕ್ಸ್​​ನಲ್ಲಿ ಪ್ರಸಾರವಾಗಲಿದೆ ಇಂಡೊ- ಪಾಕ್​ ಕ್ರಿಕೆಟ್​ ವೈರತ್ವದ ಸೀರಿಸ್​​

india vs pakistan

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವಿನ ಕ್ರಿಕೆಟ್ ವೈರತ್ವದ ಕುರಿತ ಸೀರಿಸ್​ ಒಟಿಟಿ ಫ್ಲ್ಯಾಟ್​ಫಾರ್ಮ್​ ನೆಟ್​ಫ್ಲಿಕ್ಸ್​ ಶೀಘ್ರದಲ್ಲೇ ಪ್ರಸಾರವಾಗಲಿದೆ. “ದಿ ಗ್ರೇಟೆಸ್ಟ್ ರೈವಲರಿ ” ಎಂಬ ಶೀರ್ಷಿಕೆಯೊಂದಿಗೆ ಸರಣಿ ಪ್ರಸಾರವಾಗಲಿದೆ ಎಂದು ಒಟಿಟಿ ಸಂಸ್ಥೆ ಮಾಹಿತಿ ನೀಡಿದೆ. ಸಾಕ್ಷ್ಯಚಿತ್ರದ ಫಸ್ಟ್ ಲುಕ್ ಅನೌನ್ಸ್​ಮೆಂಟ್​​ ವೀಡಿಯೊವನ್ನು ಒಟಿಟಿ ಪ್ಲಾಟ್ಫಾರ್ಮ್ ಬಿಡುಗಡೆ ಮಾಡಿದೆ. ಈ ವೀಡಿಯೊವು ಭಾರತ ಮತ್ತು ಪಾಕಿಸ್ತಾನದ ನಡುವಿನ ವರ್ಷಗಳ ಅಪ್ರತಿಮ ಕ್ರಿಕೆಟಿಂಗ್​​ ಕ್ಷಣಗಳನ್ನು ಒಳಗೊಂಡಿರುವುದನ್ನು ತೋರಿಸುತ್ತದೆ.

ಫಸ್ಟ್​ಲುಕ್​ ವೀಡಿಯೊದಲ್ಲಿ ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ಅವರಂತ ಎರಡೂ ದೇಶಗಳ ಕ್ರಿಕೆಟ್​ ಲೆಜೆಂಡ್​ಗಳು ವಿಶ್ವಕಪ್ ಟ್ರೋಫಿಗಳನ್ನು ಹಿಡಿದಿರುವ ನೋಟಗಳಿವೆ. ಅದರ ಜತೆಗೆ 1947 ರ ದೇಶ ವಿಭಜನೆಯ ಚಿತ್ರಣವೂ ಸೇರಿದೆ. ಈ ಮೂಲಕ ಸೀರಿಸ್​ನಲ್ಲಿ ಇತಿಹಾಸವೂ ಒಳಗೊಂಡಿರುವುದನ್ನು ಖಾತರಿಪಡಿಸಿದೆ. ಏತನ್ಮಧ್ಯೆ, ಸೀರಿಸ್​ನ ಬಿಡುಗಡೆಯ ದಿನಾಂಕ ಇನ್ನೂ ಘೋಷಿಸಲಾಗಿಲ್ಲ, ಆದರೆ ನೆಟ್​ಫ್ಲಿಕ್ಸ್​ ಅಭಿಮಾನಿಗಳು ಈ ಸರಣಿಗಾಗಿ ಖುಷಿಯಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಬರಲಿ ಎಂದು ಹಾರೈಸುತ್ತಿದ್ದಾರೆ.

ಟಿ 20 ವಿಶ್ವಕಪ್​​ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ


ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯ ವಹಿಸಲಿರುವ ಮುಂಬರುವ ಟಿ 20 ವಿಶ್ವಕಪ್ 2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದೆ. ಎರಡೂ ತಂಡಗಳು ಅಪ್ರತಿಮ ಪೈಪೋಟಿಯಲ್ಲಿ ಮತ್ತೊಂದು ಅಧ್ಯಾಯವನ್ನು ಬರೆಯಲು ಸಜ್ಜಾಗುತ್ತಿವೆ. ಜೂನ್ 9ರಂದು ನ್ಯೂಯಾರ್ಕ್​​ನಲ್ಲಿ ಈ ಪಂದ್ಯ ನಡೆಯಲಿದೆ. 2007ರಲ್ಲಿ ಎರಡು ಬಾರಿ (ಫೈನಲ್ ಸೇರಿದಂತೆ), 2012, 2014, 2016, 2021 ಮತ್ತು 2022ರಲ್ಲಿ ಉಭಯ ತಂಡಗಳು ಟಿ20 ವಿಶ್ವಕಪ್​ನಲ್ಲಿ ಸ್ಪರ್ಧಿಸಿದ್ದವು.

ಇದನ್ನೂ ಓದಿ : WPL 2024 : ಲೇಡಿ ಎಬಿಡಿ; ಭಯಂಕರ ಕ್ಯಾಚ್ ಹಿಡಿದ ಆರ್​ಸಿಬಿ ಆಟಗಾರ್ತಿ

ಮೆನ್ ಇನ್ ಬ್ಲೂ ಏಳು ಪಂದ್ಯಗಳಲ್ಲಿ ಆರು ಬಾರಿ ವಿಜಯಶಾಲಿಯಾಗಿ ಹೊರಹೊಮ್ಮಿದೆ, 2021 ರಲ್ಲಿ ಪಾಕಿಸ್ತಾನವು 10 ವಿಕೆಟ್​ಗಳ ಜಯದೊಂದಿಗೆ ಭಾರತದ ಗೆಲುವಿನ ಹಾದಿಯನ್ನು ಮುರಿದಿತ್ತು. 2022 ರ ಅಕ್ಟೋಬರ್​ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಟಿ 20 ವಿಶ್ವಕಪ್ ಪಂದ್ಯವು ರೋಚಕವಾಗಿ ನಡೆಯಿತು. ಆಗ ವಿರಾಟ್ ಕೊಹ್ಲಿ ಅವರ ಅಪ್ರತಿಮ ಅರ್ಧಶತಕವು ಭಾರತಕ್ಕೆ ಸ್ಮರಣೀಯ ವಿಜಯವನ್ನು ದಾಖಲಿಸಲು ಸಹಾಯ ಮಾಡಿತು. 2024ರ ಟಿ20 ವಿಶ್ವಕಪ್ ಸಮೀಪಿಸುತ್ತಿದ್ದಂತೆ ಎರಡೂ ತಂಡಗಳು ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿವೆ.

Exit mobile version