Site icon Vistara News

Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ

Priyanka Goswami

ಪ್ಯಾರಿಸ್: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ರೇಸ್​ ವಾಕ್​ನಲ್ಲಿ ಭಾರತದ ಪ್ರಿಯಾಂಕ ಗೋಸ್ವಾಮಿ (Priyanka Goswami) ಕಳಪೆ ಪ್ರದರ್ಶನ ನೀಡಿದ್ದರು. ಅವರು 20 ಕಿ.ಮೀ ಓಟದ ನಡಿಗೆಯಲ್ಲಿ 45 ಮಂದಿಯಲ್ಲಿ 41 ನೇ ಸ್ಥಾನ ಪಡೆದರು. ಹೀಗಾಗಿ ಕ್ರೀಡಾಭಿಮಾನಿಗಳಿಗೆ ಬೇಸರ ಮೂಡಿರುವುದು ಸಹಜ. ಆದಾಗ್ಯೂ ಅವರು ಹೆಚ್ಚು ಟೀಕೆಗೆ ಒಳಗಾಗಿದ್ದು ರೀಲ್ಸ್​ನಿಂದಾಗಿ. ಅವರು ತಮ್ಮ ರೂಮ್​ನೊಳಗೆ ಎಸಿ ಮುಂದೆ ನಿಂತು ಮಾಡಿದ ವಿಡಿಯೊದ ಕಾರಣಕ್ಕೆ ಎಲ್ಲರೂ ಟೀಕಿಸಲು ಆರಂಭಿಸಿದ್ದಾರೆ. ರೀಲ್ಸ್ ಮಾಡೋದು ಬಿಟ್ಟು ದೇಶಕ್ಕಾಗಿ ಆಡು ಎಂಬುದಾಗಿ ಹೇಳಿದ್ದಾರೆ.

ಪ್ಯಾರಿಸ್​ನಲ್ಲಿ ಸಿಕ್ಕಾಪಟ್ಟೆ ಸೆಖೆಯಿದೆ. ಬಿಸಿಲಿನ ತಾಪ ಹಾಗೂ ಆರ್ದ್ರ ಪರಿಸ್ಥಿತಿಗಳಿಂದಾಗಿ ಆಟಗಾರರು ಬಳಲಿ ಬೆಂಡಾಗಿದ್ದಾರೆ. ಹೀಗಾಗಿ ಕ್ರೀಡಾ ಸಚಿವಾಲಯವು ಅವರಿಗೆ ಕಾಂಪಾಕ್ಟ್​ ಎಸಿಗಳನ್ನು ಕಳುಹಿಸಿಕೊಟ್ಟಿದ್ದರು. ಅದನ್ನು ಮುಂದಿಟ್ಟುಕೊಂಡು 28 ವರ್ಷದ ಅಥ್ಲೀಟ್ ರೀಲ್ಸ್ ಮಾಡಿದ್ದರು. ಹೀಗಾಗಿ ಕ್ರೀಡಾಭಿಮಾನಿಗಳು ರೀಲ್ಸ್ ಮಾಡೋದು ಬಿಟ್ಟು ಆಡು ಎಂಬುದಾಗಿ ಟೀಕೆ ಮಾಡಿದ್ದಾರೆ.

ಫೆಬ್ರವರಿ 2023 ರಲ್ಲಿ ನಡೆದ ಇಂಡಿಯನ್ ಓಪನ್ ನ್ಯಾಷನಲ್ ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ಅಗತ್ಯ ಅಂಕಗಳನ್ನು ಪಡೆದ ಗೋಸ್ವಾಮಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು. ಅವರು 2021 ರಲ್ಲಿ ಭಾರತೀಯ ರೇಸ್​ವಾಕಿಂಗ್​ ಚಾಂಪಿಯನ್​ಶಿಪ್​ ಗೆದ್ದ ನಂತರ ಭರವಸೆ ಮೂಡಿಸಿದ್ದರು. ಆ ಮೂಲಕ ಆ ವರ್ಷ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು.

ಇದನ್ನೂ ಓದಿ: Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

ಗೋಸ್ವಾಮಿ ಅವರ ರೀಲ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ಅವರಂತಹ ಕ್ರೀಡಾಪಟುಗಳು ಮೈದಾನದಲ್ಲಿ ಅಭ್ಯಾಸ ಮಾಡುವುದಕ್ಕಿಂತ ರೀಲ್ಸ್​ಗಳನ್ನು ತಯಾರಿಸಲು ಸಮಯ ವ್ಯರ್ಥ ಕಳೆಯುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಜನರು ತೆರಿಗೆದಾರರ ಹಣವನ್ನು ಹೇಗೆ ವ್ಯರ್ಥ ಮಾಡುತ್ತಿದ್ದಾರೆ ಎಂದು ಕೆಲವರು ಗಮನಸೆಳೆದರು.

Exit mobile version