Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ - Vistara News

ಪ್ರಮುಖ ಸುದ್ದಿ

Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ

Priyanka Goswami : ಫೆಬ್ರವರಿ 2023 ರಲ್ಲಿ ನಡೆದ ಇಂಡಿಯನ್ ಓಪನ್ ನ್ಯಾಷನಲ್ ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ಅಗತ್ಯ ಅಂಕಗಳನ್ನು ಪಡೆದ ಗೋಸ್ವಾಮಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು. ಅವರು 2021 ರಲ್ಲಿ ಭಾರತೀಯ ರೇಸ್​ವಾಕಿಂಗ್​ ಚಾಂಪಿಯನ್​ಶಿಪ್​ ಗೆದ್ದ ನಂತರ ಭರವಸೆ ಮೂಡಿಸಿದ್ದರು. ಆ ಮೂಲಕ ಆ ವರ್ಷ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು.

VISTARANEWS.COM


on

Priyanka Goswami
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ಯಾರಿಸ್: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ರೇಸ್​ ವಾಕ್​ನಲ್ಲಿ ಭಾರತದ ಪ್ರಿಯಾಂಕ ಗೋಸ್ವಾಮಿ (Priyanka Goswami) ಕಳಪೆ ಪ್ರದರ್ಶನ ನೀಡಿದ್ದರು. ಅವರು 20 ಕಿ.ಮೀ ಓಟದ ನಡಿಗೆಯಲ್ಲಿ 45 ಮಂದಿಯಲ್ಲಿ 41 ನೇ ಸ್ಥಾನ ಪಡೆದರು. ಹೀಗಾಗಿ ಕ್ರೀಡಾಭಿಮಾನಿಗಳಿಗೆ ಬೇಸರ ಮೂಡಿರುವುದು ಸಹಜ. ಆದಾಗ್ಯೂ ಅವರು ಹೆಚ್ಚು ಟೀಕೆಗೆ ಒಳಗಾಗಿದ್ದು ರೀಲ್ಸ್​ನಿಂದಾಗಿ. ಅವರು ತಮ್ಮ ರೂಮ್​ನೊಳಗೆ ಎಸಿ ಮುಂದೆ ನಿಂತು ಮಾಡಿದ ವಿಡಿಯೊದ ಕಾರಣಕ್ಕೆ ಎಲ್ಲರೂ ಟೀಕಿಸಲು ಆರಂಭಿಸಿದ್ದಾರೆ. ರೀಲ್ಸ್ ಮಾಡೋದು ಬಿಟ್ಟು ದೇಶಕ್ಕಾಗಿ ಆಡು ಎಂಬುದಾಗಿ ಹೇಳಿದ್ದಾರೆ.

ಪ್ಯಾರಿಸ್​ನಲ್ಲಿ ಸಿಕ್ಕಾಪಟ್ಟೆ ಸೆಖೆಯಿದೆ. ಬಿಸಿಲಿನ ತಾಪ ಹಾಗೂ ಆರ್ದ್ರ ಪರಿಸ್ಥಿತಿಗಳಿಂದಾಗಿ ಆಟಗಾರರು ಬಳಲಿ ಬೆಂಡಾಗಿದ್ದಾರೆ. ಹೀಗಾಗಿ ಕ್ರೀಡಾ ಸಚಿವಾಲಯವು ಅವರಿಗೆ ಕಾಂಪಾಕ್ಟ್​ ಎಸಿಗಳನ್ನು ಕಳುಹಿಸಿಕೊಟ್ಟಿದ್ದರು. ಅದನ್ನು ಮುಂದಿಟ್ಟುಕೊಂಡು 28 ವರ್ಷದ ಅಥ್ಲೀಟ್ ರೀಲ್ಸ್ ಮಾಡಿದ್ದರು. ಹೀಗಾಗಿ ಕ್ರೀಡಾಭಿಮಾನಿಗಳು ರೀಲ್ಸ್ ಮಾಡೋದು ಬಿಟ್ಟು ಆಡು ಎಂಬುದಾಗಿ ಟೀಕೆ ಮಾಡಿದ್ದಾರೆ.

ಫೆಬ್ರವರಿ 2023 ರಲ್ಲಿ ನಡೆದ ಇಂಡಿಯನ್ ಓಪನ್ ನ್ಯಾಷನಲ್ ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ಅಗತ್ಯ ಅಂಕಗಳನ್ನು ಪಡೆದ ಗೋಸ್ವಾಮಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು. ಅವರು 2021 ರಲ್ಲಿ ಭಾರತೀಯ ರೇಸ್​ವಾಕಿಂಗ್​ ಚಾಂಪಿಯನ್​ಶಿಪ್​ ಗೆದ್ದ ನಂತರ ಭರವಸೆ ಮೂಡಿಸಿದ್ದರು. ಆ ಮೂಲಕ ಆ ವರ್ಷ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು.

ಇದನ್ನೂ ಓದಿ: Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

ಗೋಸ್ವಾಮಿ ಅವರ ರೀಲ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ಅವರಂತಹ ಕ್ರೀಡಾಪಟುಗಳು ಮೈದಾನದಲ್ಲಿ ಅಭ್ಯಾಸ ಮಾಡುವುದಕ್ಕಿಂತ ರೀಲ್ಸ್​ಗಳನ್ನು ತಯಾರಿಸಲು ಸಮಯ ವ್ಯರ್ಥ ಕಳೆಯುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಜನರು ತೆರಿಗೆದಾರರ ಹಣವನ್ನು ಹೇಗೆ ವ್ಯರ್ಥ ಮಾಡುತ್ತಿದ್ದಾರೆ ಎಂದು ಕೆಲವರು ಗಮನಸೆಳೆದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Jaskaran Singh: ಕನ್ನಡತಿಯ್ನನೇ ಮದುವೆ ಆಗುವೆ ಎಂದ ‘ದ್ವಾಪರ’ ಹಾಡಿನ ಗಾಯಕ ಜಸ್‌ಕರಣ್‌ ಸಿಂಗ್!

Jaskaran Singh: ಬೆಂಗಳೂರಿನಲ್ಲಿ ಭಾನುವಾರ (ಆಗಸ್ಟ್‌ 4) ಕೃಷ್ಣಂ ಪ್ರಣಯ ಸಖಿ ಸಿನಿಮಾದ ನಾಲ್ಕನೇ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಜಸ್‌ಕರಣ್‌ ಸಿಂಗ್‌ ಅವರು ಕನ್ನಡತಿಯನ್ನೇ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗೆಯೆ, ಕನ್ನಡಿಗರು ನೀಡಿದ ಪ್ರೀತಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

VISTARANEWS.COM


on

Jaskaran Singh
Koo

ಬೆಂಗಳೂರು: ಗೋಲ್ಡನ್‌ ಸ್ಟಾರ್‌ ಗಣೇಶ್‌ (Golden Star Ganesh) ನಟಿಸಿರುವ, ಆಗಸ್ಟ್‌ 15ರಂದು ತೆರೆಗೆ ಬರಲು ಸಿದ್ಧವಾಗಿರುವ ಕೃಷ್ಣಂ ಪ್ರಣಯ ಸಖಿ (Krishnam Pranaya Sakhi) ಸಿನಿಮಾದ ‘ದ್ವಾಪರ ದಾಟುತ’ (Dwapara Kannada Song) ಹಾಡು ಕನ್ನಡಿಗರ ಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಡು ವೈರಲ್‌ ಆಗಿದ್ದು, ಜನರು ಕೂಡ ಡಾನ್ಸ್‌ ಮಾಡಿದ ರೀಲ್ಸ್‌ ಹಂಚಿಕೊಳ್ಳುತ್ತಿದ್ದಾರೆ. ಇನ್ನು ದ್ವಾಪರ ದಾಟುತ ಹಾಡು ಹಾಡಿದ ಜಸ್‌ಕರಣ್‌ ಸಿಂಗ್‌ (Jaskaran Singh) ಅವರು ಪಂಜಾಬ್‌ನವರಾದರೂ ಕನ್ನಡಿಗರು ಅವರನ್ನು ಮೆಚ್ಚಿದ್ದಾರೆ. ಅಷ್ಟೇ ಅಲ್ಲ, ಮುಂದೊಂದು ದಿನ ಸಾಧ್ಯವಾದರೆ ಕನ್ನಡತಿಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ (ಆಗಸ್ಟ್‌ 4) ಕೃಷ್ಣಂ ಪ್ರಣಯ ಸಖಿ ಸಿನಿಮಾದ ನಾಲ್ಕನೇ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಜಸ್‌ಕರಣ್‌ ಸಿಂಗ್‌ ಅವರು ಕನ್ನಡತಿಯನ್ನೇ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. “ನಾನು ಗಣೇಶ್‌ ಅವರ ಅಭಿಮಾನಿಯಾಗಿದ್ದೇನೆ. ಅನಿಸುತಿದೆ ಯಾಕೋ ಇಂದು ಹಾಡು ನನಗೆ ಫೇವರಿಟ್ ಆಗಿದೆ. ಈಗ ಕನ್ನಡ ಸಿನಿಮಾದ ಹಾಡು ಹಾಡಿರುವುದು ಖುಷಿ ತಂದಿದೆ. ಕನ್ನಡಿಗರು ನೀಡಿದ ಪ್ರೀತಿಯನ್ನು ನಾನು ಮರೆಯಲು ಸಾಧ್ಯವಿಲ್ಲ. ಮುಂದೊಂದು ದಿನ ಸಾಧ್ಯವಾದರೆ ನಾನು ಕನ್ನಡತಿಯನ್ನೇ ಮದುವೆಯಾಗುವೆ” ಎಂದಿದ್ದಾರೆ.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ನಟಿ ಮಾಳವಿಕಾ ನಾಯರ್‌ ಅವರು ಹೆಜ್ಜೆ ಹಾಕಿರುವ ದ್ವಾಪರ ದಾಟುತ ಹಾಡು ಯುಟ್ಯೂಬ್‌ನಲ್ಲಿ 1.3 ಕೋಟಿ (13 ದಶಲಕ್ಷ) ವ್ಯೂಸ್‌ ಪಡೆದುಕೊಂಡಿದೆ. ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿಯೂ ಹಾಡು ದಾಖಲೆ ಬರೆದಿದೆ. ‌

ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು‌ ಯಶಸ್ವಿಯಾಗಿರುವುದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಆಡಿಯೋ ಹಕ್ಕು ಪಡಿದಿರುವ ಆನಂದ್ ಆಡಿಯೋದವರು ಆನಂದ ಪಟ್ಟಿದ್ದಾರೆ‌. ಈ ಸಂಭ್ರಮದ ಸಮಯದಲ್ಲಿ ನಿರ್ಮಾಪಕರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ವೀಕ್ಷಿಸಲು ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್‌ಟೇನ್‌ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಬೆಂಗಳೂರು, ವಿಯೆಟ್ನಾಂ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಇದನ್ನೂ ಓದಿ: Golden Star Ganesh: ಸೋಷಿಯಲ್‌ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ `ಕೃಷ್ಣಂ ಪ್ರಣಯ ಸಖಿ’ ಹಾಡುಗಳು!

Continue Reading

ದೇಶ

BSF DG Row: ಬಿಎಸ್‌ಎಫ್‌ ಮುಖ್ಯಸ್ಥ ನಿತಿನ್‌ ಅಗರ್ವಾಲ್‌ ತಲೆದಂಡಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

BSF DG Row: ನಿತಿನ್ ಅಗರ್ವಾಲ್ ಅವರು ಕಳೆದ ವರ್ಷದ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಕ್ಯಾಬಿನೆಟ್​ನಲ್ಲಿ ನೇಮಕಾತಿ ಸಮಿತಿ ಹೊರಡಿಸಿದ ಪ್ರತ್ಯೇಕ ಆದೇಶಗಳಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ “ಅಕಾಲಿಕವಾಗಿ” ವಾಪಸ್ ಕಳುಹಿಸಲಾಗಿದೆ. ಅದಕ್ಕೆ ಕಾರಣ ಈಗ ಸಿಕ್ಕಿದೆ.

VISTARANEWS.COM


on

BSF DG Row
Koo

ನವದೆಹಲಿ: ಗಡಿ ಭದ್ರತಾ ಪಡೆ (Border Security Force) ಮಹಾ ನಿರ್ದೇಶಕ (BSF DG Row)​ ನಿತಿನ್ ಅಗರ್ವಾಲ್ ಮತ್ತು ಸ್ಪೆಷಲ್ ಡೆಪ್ಯುಟಿ ಡೈರೆಕ್ಟರ್​ (ಪಶ್ಚಿಮ) ವೈ.ಬಿ. ಖುರಾನಿಯಾ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ರಾಜ್ಯ ಕೇಡರ್​ಗಳಿಗೆ ವಾಪಸ್ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಐಪಿಎಸ್‌ (IPS) ಅಧಿಕಾರಿ ದಲ್ಜಿತ್‌ ಸಿಂಗ್‌ ಚೌಧರಿ (Daljit Singh Chawdhary) ಅವರನ್ನು ಬಿಎಸ್‌ಎಫ್‌ ಡಿಜಿಯನ್ನಾಗಿ ನೇಮಿಸಲಾಗಿದೆ. ಇದರ ಬೆನ್ನಲ್ಲೇ, ನಿತಿನ್‌ ಅಗರ್ವಾಲ್‌ ಅವರನ್ನು ಹುದ್ದೆಯಿಂದ ತೆರವುಗೊಳಿಸಲು ಅವರು ಮಾಡಿಕೊಂಡ ಎಡವಟ್ಟುಗಳೇ ಕಾರಣ ಎಂದು ಮೂಲಗಳು ತಿಳಿಸಿವೆ.

“ಬಿಎಸ್‌ಎಫ್‌ ಡಿಜಿ ಅವರನ್ನು ಕಾರ್ಯಾಚರಣೆ ಅಥವಾ ವೃತ್ತಿಪರತೆಯಲ್ಲಿ ಲೋಪದೋಷದಿಂದಾಗಿ ಹುದ್ದೆಯಿಂದ ತೆರವುಗೊಳಿಸಿಲ್ಲ. ಆದರೆ, ಡಿಜಿ ಹಾಗೂ ಅವರ ಅಧೀನದಲ್ಲಿರುವ ಅಧಿಕಾರಿಗಳ ಜತೆಗಿನ ಮುಸುಕಿನ ಗುದ್ದಾಟ, ಒಳಜಗಳಗಳಿಂದಾಗಿ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ನಿತಿನ್‌ ಅಗರ್ವಾಲ್‌ ಹಾಗೂ ಕಿರಿಯ ಅಧಿಕಾರಿಗಳ ನಡುವಿನ ಬಿಕ್ಕಟ್ಟು ಶಮನವಾಗಬೇಕು, ಗಡಿಯಲ್ಲಿ ದಕ್ಷತೆ ಹೆಚ್ಚಾಗಬೇಕು ಎಂಬ ಕಾರಣಕ್ಕಾಗಿ ನಿತಿನ್‌ ಅಗರ್ವಾಲ್‌ ಹಾಗೂ ವೈ.ಬಿ.ಖುನರಿಯಾ ಅವರನ್ನು ಹುದ್ದೆಯಿಂದ ಕೇಂದ್ರ ಗೃಹ ಸಚಿವಾಲಯವು ಕೆಳಗಿಳಿಸಿದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.

“ಬಿಎಸ್‌ಎಫ್‌ ಡಿಜಿ ಅವರ ಅಧೀನದಲ್ಲಿರುವ ಆಪ್ತ ಅಧಿಕಾರಿಗಳು ಹಾಗೂ ಮತ್ತೊಂದಿಷ್ಟು ಕಿರಿಯ ಅಧಿಕಾರಿಗಳ ತಂಡದ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇವರ ಗುಂಪು, ಅವರ ಗುಂಪು ಎಂಬ ಭೇದ-ಭಾವ ಸೃಷ್ಟಿಯಾಗಿತ್ತು. ಇದು ಹಲವು ಸಂದರ್ಭಗಳಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವಾಗ ಪರಿಣಾಮ ಬೀರುತ್ತಿತ್ತು. ಅದರಲ್ಲೂ, ಉಗ್ರರ ಚಟುವಟಿಕೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸುವ ವಿಷಯದಲ್ಲೂ ಗುಂಪುಗಾರಿಕೆ ನಡೆಯುತ್ತಿತ್ತು, ಯಾವುದೇ ರೀತಿಯ ಅಶಿಸ್ತನ್ನು ಸಹಿಸದ ಸಚಿವಾಲಯವು ಕಠಿಣ ಕ್ರಮ ತೆಗೆದುಕೊಂಡಿದೆ” ಎಂದು ತಿಳಿದುಬಂದಿದೆ.

ಅಗರ್ವಾಲ್ ಅವರು ಕಳೆದ ವರ್ಷ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಅಂತಾರಾಷ್ಟ್ರೀಯ ಗಡಿಯಿಂದ ನಿರಂತರ ಒಳನುಸುಳುವಿಕೆ ಹಿನ್ನೆಲೆಯಲ್ಲಿ ಈ ಕ್ರಮ ಎಂದು ಹೇಳಲಾಗಿತ್ತು. ಸಮನ್ವಯದ ಕೊರತೆ ಸೇರಿ ನಿರ್ಣಾಯಕ ವಿಷಯಗಳ ಬಗ್ಗೆ ಬಿಎಸ್ಎಫ್ ಮುಖ್ಯಸ್ಥರ ವಿರುದ್ಧ ದೂರುಗಳು ಬಂದಿದ್ದವು ಎಂದು ಮೂಲಗಳು ತಿಳಿಸಿವೆ. ಬಿಎಸ್ಎಫ್ ಸುಮಾರು 2.65 ಲಕ್ಷ ಸಿಬ್ಬಂದಿಯನ್ನು ಹೊಂದಿದೆ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶದ ಗಡಿಗಳನ್ನು ಕಾಯುತ್ತಿದೆ.

ಇದನ್ನೂ ಓದಿ: BSF Chief: ಬಿಎಸ್‌ಎಫ್‌ ನೂತನ ಮುಖ್ಯಸ್ಥರಾಗಿ ದಲ್ಜಿತ್‌ ಸಿಂಗ್‌ ಚೌಧರಿ ನೇಮಕ

Continue Reading

ಕ್ರೀಡೆ

Parul Chaudhary : ಸ್ಟೀಪಲ್​ ಚೇಸ್​​ ಫೈನಲ್​ಗೆ ಅರ್ಹತೆ ಪಡೆಯಲು ಪಾರುಲ್ ಚೌಧರಿ ವಿಫಲ

Parul Chaudhary : ಹಾಲಿ ಒಲಿಂಪಿಕ್ ಚಾಂಪಿಯನ್ ಉಗಾಂಡಾದ ಪೆರುತ್ ಚೆಮುಟೈ (9:10.51) ಹೀಟ್ ನಂಬರ್ ಒನ್ ಸ್ಥಾನ ಪಡೆದರೆ, ಕೀನ್ಯಾದ ಫೇತ್ ಚೆರೊಟಿಚ್ (9:10.57) ಮತ್ತು ಜರ್ಮನಿಯ ಗೆಸಾ ಫೆಲಿಸಿಟಿಸ್ ಕ್ರೌಸ್ (9:10.68) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಅಂಕಿತಾ ಧ್ಯಾನಿ ಅವರೊಂದಿಗೆ ಮಹಿಳೆಯರ 5000 ಮೀಟರ್ ಓಟಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದ ಪಾರುಲ್ ಅವರ ಅಭಿಯಾನವನ್ನು ಇದು ಕೊನೆಗೊಂಡಿತು.

VISTARANEWS.COM


on

Parul Chaudhary
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​​ನ (Paris Olympics 2024) ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್​ ಸ್ಪರ್ಧೆಯಲ್ಲಿ ಪಾರುಲ್ ಚೌಧರಿ (Parul Chaudhary) ವಿಫಲರಾಗಿದ್ದು ಫೈನಲ್​ಗೆ ಅರ್ಹತೆ ಪಡೆಯಲಿಲ್ಲ. ರಾಷ್ಟ್ರೀಯ ದಾಖಲೆ ಹೊಂದಿರುವ aವರು ಭಾನುವಾರ ಹೀಟ್ ರೇಸ್ ನಲ್ಲಿ ಎಂಟನೇ ಸ್ಥಾನ ಪಡೆದ ನಂತರ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು. ಕ್ರೀಡಾಕೂಟಕ್ಕೆ ಮುಂಚಿತವಾಗಿ ಕೆಲವು ತಿಂಗಳುಗಳ ಕಾಲ ಯುಎಸ್ಎಯಲ್ಲಿ ತರಬೇತಿ ಪಡೆದ 29 ವರ್ಷದ ಪಾರುಲ್ ಒಟ್ಟು ದೂರವನ್ನು 9 ನಿಮಿಷ 23.39 ಸೆಕೆಂಡುಗಳಲ್ಲಿ ಓಡಿದರು. ಇದು ಅವರ ಋತುವಿನ ಅತ್ಯುತ್ತಮ ಆದರೆ 2023 ರ ಬುಡಾಪೆಸ್ಟ್ ವಿಶ್ವ ಚಾಂಪಿಯನ್​​ಶಿಪ್​ನ ಸಾಧನೆಯಾಗಿರುವ 9: 15.31 ಕ್ಕಿಂತ ಕಡಿಮೆಯಾಗಿದೆ. ಮೂರು ಹೀಟ್ ರೇಸ್ ಗಳಲ್ಲಿ ಅಗ್ರ ಐದು ಸ್ಥಾನ ಪಡೆಯುವ ತಂಡಗಳು ಫೈನಲ್ ಗೆ ಅರ್ಹತೆ ಪಡೆಯುತ್ತವೆ.

ಹಾಲಿ ಒಲಿಂಪಿಕ್ ಚಾಂಪಿಯನ್ ಉಗಾಂಡಾದ ಪೆರುತ್ ಚೆಮುಟೈ (9:10.51) ಹೀಟ್ ನಂಬರ್ ಒನ್ ಸ್ಥಾನ ಪಡೆದರೆ, ಕೀನ್ಯಾದ ಫೇತ್ ಚೆರೊಟಿಚ್ (9:10.57) ಮತ್ತು ಜರ್ಮನಿಯ ಗೆಸಾ ಫೆಲಿಸಿಟಿಸ್ ಕ್ರೌಸ್ (9:10.68) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಅಂಕಿತಾ ಧ್ಯಾನಿ ಅವರೊಂದಿಗೆ ಮಹಿಳೆಯರ 5000 ಮೀಟರ್ ಓಟಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದ ಪಾರುಲ್ ಅವರ ಅಭಿಯಾನವನ್ನು ಇದು ಕೊನೆಗೊಂಡಿತು. ಪಾರುಲ್ 3000 ಮೀಟರ್ ಸ್ಟೀಪಲ್​ಚೇಸ್​ 9:23.00 ಪ್ರವೇಶ ಮಾನದಂಡ ಮೀದಿದ್ದ ನಂತರ ನೇರ ಅರ್ಹತೆ ಪಡೆದಿದ್ದರು.

ಲಲಿತಾ ಬಾಬರ್ 2016 ರ ರಿಯೋ ಒಲಿಂಪಿಕ್ಸ್​​ನಲ್ಲಿ ಅಂತಿಮ ಸುತ್ತಿಗೆ ಅರ್ಹತೆ ಪಡೆದ ಏಕೈಕ ಭಾರತೀಯ ಮಹಿಳೆ ಹಾಗಿದ್ದಾರೆ 3000 ಮೀಟರ್ ಸ್ಟೀಪಲ್​ಚೇಸ್​ನಲ್ಲಿ ಅವರು ಅಂತಿಮವಾಗಿ 10 ನೇ ಸ್ಥಾನ ಪಡೆದಿದ್ದರು.

ಲಕ್ಷ್ಯ ಸೇನ್​ಗೆ ಸೋಲು

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics) ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಲಕ್ಷ್ಯ ಸೇನ್‌(Lakshya Sen) ಭಾನುವಾರ ನಡೆದ ಹೈವೋಲ್ಟೇಜ್​ ಸೆಮಿಫೈನಲ್‌ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ವಿಶ್ವದ ಖ್ಯಾತ ಶಟ್ಲರ್​ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌(Viktor Axelsen) ವಿರುದ್ಧ 20-22 21-14 ನೇರ ಗೇಮ್​ಗಳ ಅಂತರದಿಂದ ಸೋಲು ಕಂಡು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರೂ ಕೂಡ ಕಂಚಿನ ಪದಕ ಸ್ಪರ್ಧೆಯಲ್ಲಿ ಆಡಲಿದ್ದಾರೆ.​

ಇದನ್ನೂ ಓದಿ: Priyanka Goswami : ರೀಲ್ಸ್​ ಮಾಡೋದಲ್ಲ, ಸ್ಪರ್ಧೆಯಲ್ಲಿ ಓಡಿ ಪದಕ ಗೆಲ್ಲು; ಪ್ರಿಯಾಂಕ ಗೋಸ್ವಾಮಿಗೆ ನೆಟ್ಟಿಗರ ತಪರಾಕಿ

ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದ ಮೊದಲ ಗೇಮ್​ನಲ್ಲಿ ಎದುರಾಳಿ ವಿಕ್ಟರ್‌ ಅಕ್ಸೆಲ್ಸೆನ್‌ 2 ಅಂಕಗಳಿಸಿದರೂ ಖಾತೆ ತೆರೆಯದ ಲಕ್ಷ್ಯ ಸೇನ್‌ ಆ ಬಳಿಕ ಫಿನಿಕ್ಸ್​ನಂತೆ ಎದ್ದು ಬಂದು ಮುನ್ನಡೆ ಸಾಧಿಸಿದರು. 8 ಅಂಕ ಗಳಿಸುವ ತನಕ ಉಭಯ ಆಟಗಾರರು ಸಮಾನವಾಗಿ ಸಾಗಿದರು. ಈ ವೇಳೆ ಸೇನ್​ ಸತತವಾಗಿ ಅಂಕಗಳಿಸಿ ಇನ್ನೇನು ಒಂದು ಗೆಲುವು ಸಾಧಿಸುತ್ತಾರೆ ಎನುವಷ್ಟರಲ್ಲಿ 3 ಅಂಕ ಹಿನ್ನಡೆಯಲ್ಲಿದ್ದ ಅಕ್ಸೆಲ್ಸೆನ್‌ ಆಕ್ರಮಣಕಾರಿ ಆಟದ ಮೂಲಕ ಗೆಲುವು ಸಾಧಿಸಿದರು. ಗೆಲುವಿನ ಅಂತರ 22-20.

Continue Reading

ವೈರಲ್ ನ್ಯೂಸ್

ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್‌ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ!

ಚಂದನ್‌ ಹಾಗೂ ಖುಷ್ಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಸ್ನೇಹಿತರಾದ ಕೆಲವೇ ವರ್ಷಗಳಲ್ಲಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪರಿಸ್ಥಿತಿಯ ಒತ್ತಡಕ್ಕೋ, ಮನೆಯವರ ಒತ್ತಾಯಕ್ಕೋ ಮಣಿದಿದ್ದ ಖುಷ್ಬೂ, ರಾಜೇಶ್‌ ಕುಮಾರ್‌ನನ್ನು ಮದುವೆಯಾಗಿದ್ದಳು. ಆದರೂ, ಮಾಜಿ ಪ್ರೇಮಿಯನ್ನು ಖುಷ್ಬೂ ಮರೆತಿರಲಿಲ್ಲ.

VISTARANEWS.COM


on

Marriage
Koo

ಪಟನಾ: ಮದುವೆಯಾದ ಮೇಲೆ ಹೆಂಡತಿ ಮೇಲೆ ಸುಖಾಸುಮ್ಮನೆ ಅನುಮಾನ ಪಡುವವರಿದ್ದಾರೆ. ಹಾಗೊಂದು, ವೇಳೆ ಹೆಂಡತಿಗೆ ಮದುವೆಯಾದ ಮೇಲೂ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡರೆ ಆಕೆಯ ಮೇಲೆ ಹಲ್ಲೆ ನಡೆಸುವ, ಕೆಲವೊಮ್ಮೆ ಕೊಲೆಯನ್ನೂ ಮಾಡುವ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಆದರೆ, ಬಿಹಾರದಲ್ಲೊಬ್ಬ (Bihar) 26 ವರ್ಷದ ವ್ಯಕ್ತಿಯು ಮದುವೆಯಾದ ಬಳಿಕ ಹೆಂಡತಿಯನ್ನು ಆಕೆಯ ಮಾಜಿ ಪ್ರಿಯತಮನೊಂದಿಗೆ ಮದುವೆ ಮಾಡಿಸಿದ್ದಾನೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ.

ಬಿಹಾರದ ರಾಮನಗರ ಗ್ರಾಮದ ನಿವಾಸಿಯಾದ ರಾಜೇಶ್‌ ಕುಮಾರ್‌ ಎಂಬಾತನೇ ಹೆಂಡತಿಯನ್ನು ಆಕೆಯ ಮಾಜಿ ಪ್ರಿಯತನಮ ಜತೆ ಜೀವನ ಸಾಗಿಸಿಲು ಅವಕಾಶ ಮಾಡಿಕೊಟ್ಟಿದ್ದಾನೆ. ಕೆಲ ದಿನಗಳ ಹಿಂದಷ್ಟೇ ರಾಜೇಶ್‌ ಕುಮಾರ್‌ ಮನೆಯಲ್ಲಿ ಇಲ್ಲದಿದ್ದಾಗ ಆತನ ಪತ್ನಿ ಖುಷ್ಬೂ (22) ಮಾಜಿ ಪ್ರಿಯತಮ ಚಂದನ್‌ನನ್ನು (24) ಮನೆಗೆ ಕರೆಸಿದ್ದಳು. ಇಬ್ಬರೂ ಮನೆಯಲ್ಲಿ ಸರಸವಾಡುತ್ತಿದ್ದಾಗಲೇ ರಾಜೇಶ್‌ ಕುಮಾರ್‌ ಮನೆಗೆ ಬಂದಿದ್ದಾನೆ. ಆಗ ಇಬ್ಬರ ಪ್ರೇಮಪುರಾಣ ಬಯಲಾಗಿದೆ.

ಪತ್ನಿಯು ತನಗೆ ಮೋಸ ಮಾಡಿದಳು, ಅಕ್ರಮ ಸಂಬಂಧ ಹೊಂದಿದಳು ಎಂದು ಗಲಾಟೆ ಮಾಡದ, ಚಂದನ್‌ ಮೇಲೆ ಹಲ್ಲೆ ನಡೆಸದ, ಕೋಪದ ಕೈಗೆ ಬುದ್ಧಿ ಕೊಡದ ರಾಜೇಶ್‌ ಕುಮಾರ್‌, ಖುಷ್ಬೂ ಹಾಗೂ ಚಂದನ್‌ರ ಮದುವೆ ಮಾಡಿಸಿದ್ದಾರೆ. ಇಡೀ ಗ್ರಾಮದ ಜನರನ್ನು ಕರೆಸಿ, ಅವರನ್ನು ಸ್ಥಳೀಯ ದೇವಾಲಯಕ್ಕೆ ಕರೆದುಕೊಂಡು ಹೋಗಿ, ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಮದುವೆ ಮಾಡಿಸಿದ ಬಳಿಕ ಅವರಿಗೆ ಶುಭ ಹಾರೈಸಿ, ಬೀಳ್ಕೊಟ್ಟಿದ್ದಾರೆ.

ಚಂದನ್‌ ಹಾಗೂ ಖುಷ್ಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಸ್ನೇಹಿತರಾದ ಕೆಲವೇ ವರ್ಷಗಳಲ್ಲಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪರಿಸ್ಥಿತಿಯ ಒತ್ತಡಕ್ಕೋ, ಮನೆಯವರ ಒತ್ತಾಯಕ್ಕೋ ಮಣಿದಿದ್ದ ಖುಷ್ಬೂ, ರಾಜೇಶ್‌ ಕುಮಾರ್‌ನನ್ನು ಮದುವೆಯಾಗಿದ್ದರು. ಆದರೆ, ಮದುವೆಯಾದ ಬಳಿಕವೂ ಚಂದನ್‌ ಜತೆ ಖುಷ್ಬೂ ಸಂಪರ್ಕದಲ್ಲಿದ್ದಳು. ರಾಜೇಶ್‌ ಕುಮಾರ್‌ ಇಲ್ಲದಿದ್ದಾಗ ಚಂದನ್‌ ಮನೆಗೆ ಬರುತ್ತಿದ್ದ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಪತ್ನಿಯ ಸಂಬಂಧದ ಬಳಿಕವೂ ಗಲಾಟೆ, ಜಗಳ ಮಾಡಿಕೊಳ್ಳದ ರಾಜೇಶ್‌, ಆಕೆಯನ್ನು ಬೀಳ್ಕೊಟ್ಟಿರುವ ಸಮಾಧಾನದ ಗುಣಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಇದ್ದರೂ ಮಹಿಳಾ ಇನ್ಸ್‌ಪೆಕ್ಟರ್‌ ಜತೆ ವ್ಯಕ್ತಿ ಸರಸ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ ಮಾಡಿದ್ದೇನು? Video ಇದೆ

Continue Reading
Advertisement
Jaskaran Singh
ಸ್ಯಾಂಡಲ್ ವುಡ್5 mins ago

Jaskaran Singh: ಕನ್ನಡತಿಯ್ನನೇ ಮದುವೆ ಆಗುವೆ ಎಂದ ‘ದ್ವಾಪರ’ ಹಾಡಿನ ಗಾಯಕ ಜಸ್‌ಕರಣ್‌ ಸಿಂಗ್!

Viral Video
ವೈರಲ್ ನ್ಯೂಸ್10 mins ago

Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

Western Ghats
ಕರ್ನಾಟಕ18 mins ago

Western Ghats: ನಾಳೆಯಿಂದ ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ

Viral Video
ವೈರಲ್ ನ್ಯೂಸ್25 mins ago

Viral Video: ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮೂರ್ಛೆ ಹೋದ ವರ! ವಿಡಿಯೊ ನೋಡಿ

Chennai Super Kings
ಕ್ರಿಕೆಟ್42 mins ago

Chennai Super Kings : ಮಹಿಳೆಯರ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಪಡೆಯಲಿದೆ ಚೆನ್ನೈ ಸೂಪರ್ ಕಿಂಗ್ಸ್​

BSF DG Row
ದೇಶ45 mins ago

BSF DG Row: ಬಿಎಸ್‌ಎಫ್‌ ಮುಖ್ಯಸ್ಥ ನಿತಿನ್‌ ಅಗರ್ವಾಲ್‌ ತಲೆದಂಡಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

Lovlina Borgohain
ಕ್ರೀಡೆ56 mins ago

Lovlina Borgohain : ಲವ್ಲಿನಾ ಬೊರ್ಗೊಹೈನ್​​ಗೆ ಸೋಲು; ಒಲಿಂಪಿಕ್ಸ್​​ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಅಂತ್ಯ

ಕರ್ನಾಟಕ1 hour ago

‌MB Patil: ಕುಮಾರಸ್ವಾಮಿಯದು ಅವಕಾಶವಾದಿ ಮೈತ್ರಿ ಎಂದ ಎಂ.ಬಿ. ಪಾಟೀಲ್

Bangladesh
ವಿದೇಶ2 hours ago

Bangladesh: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ; 32 ಜನ ಸಾವು

Road Accident
ವಿಜಯಪುರ2 hours ago

Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ6 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌