Site icon Vistara News

New Food Rules: ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಪಾಕ್‌ ಹೈರಾಣ-ಹೊಸ ಭಕ್ಷ್ಯ ನೀತಿ ಜಾರಿ

New Food Rules

New Food Rules

ಪಾಕಿಸ್ತಾನ: ಮದುವೆ ಎಂದ ತಕ್ಷಣ ತಲೆಯಲ್ಲಿ ಒಳ್ಳೆಯ ಊಟದ ಕಲ್ಪನೆ ಬರುವುದು ಸಹಜ. ವಿವಿಧ ರೀತಿಯ ಭಕ್ಷ್ಯ ಭೋಜನಗಳನ್ನು ತಯಾರಿಸುತ್ತಾರೆ. ಆ ವೇಳೆ ಜನರು ತಮಗೆ ಬೇಕಾದಷ್ಟು ಆಹಾರವನ್ನು ಬಡಿಸಿಕೊಂಡು ನಂತರ ಅದನ್ನು ತಿನ್ನದೇ ವ್ಯರ್ಥ ಮಾಡುತ್ತಿರುವುದು ನಾವು ಹಲವು ಮದುವೆ, ಸಮಾರಂಭಗಳಲ್ಲಿ ನೋಡುತ್ತಿರುತ್ತೇವೆ. ಇನ್ನು ಪಾಕಿಸ್ತಾನ(Pakistan)ದಲ್ಲಂತೂ ಹಣದುಬ್ಬರ(Bankruptcy) ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ 1 ಕೆಜಿ ಗೋಧಿ ಹಿಟ್ಟಿನ ಬೆಲೆ 800 PKR ಆಗಿದೆ. ಹೀಗಾಗಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಪಾಕಿಸ್ತಾನದ ಸರ್ಕಾರ ಹೊಸ ನಿಯಮವನ್ನು ಜಾರಿಗೆ(New Food Rules)ತಂದಿದೆ.

ಪಾಕಿಸ್ತಾನ ಭಾರತದ ನೆರೆಯ ರಾಷ್ಟ್ರ. ಆಗಾಗ ಇತರ ದೇಶಗಳ ಮೇಲೆ ದಂಡೆತ್ತಿ ಬರುವ
ಈ ದೇಶ ಈಗ ಆಹಾರದ ಮುಗ್ಗಟ್ಟು ಮತ್ತು ಹಣದುಬ್ಬರ ಸಮಸ್ಯೆಯಿಂದ ಒದ್ದಾಡುತ್ತಿದೆ. ಹಾಗಾಗಿ ತಮ್ಮ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಹುಡುಕುತ್ತಿದೆ. ಅದರಂತೆ ಇದೀಗ ಆಹಾರ ಮುಗ್ಗಟ್ಟನ್ನು ನಿವಾರಿಸಲು ಮದುವೆ ಮತ್ತು ಸಮಾರಂಭಗಳಲ್ಲಿ ನೀಡುವ ಊಟದ ಮೇಲೆ ತನ್ನ ಕಣ್ಣಿಟ್ಟಿದೆ. ಆಹಾರ ವ್ಯರ್ಥವಾಗುವುದನ್ನು ತಡೆಯಲು ಹೊಸ ಮಾರ್ಗವನ್ನು ಕಂಡುಕೊಂಡಿದೆಯಂತೆ.

ಪಂಜಾಬ್ ಪ್ರಾಂತ್ಯದ ಸಿಎಂ ಮರ್ಯಮ್ ನವಾಜ್ ಅವರು ‘ಒಂದು ಭಕ್ಷ್ಯ’ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದ್ದಾರೆ. ಈ ನೀತಿಯ ಪ್ರಕಾರ ಮದುವೆಯ ಪಾರ್ಟಿಗಳಲ್ಲಿ ಒಂದಕ್ಕಿಂತ ಹೆಚ್ಚು ಭಕ್ಷ್ಯಗಳನ್ನು ಅನುಮತಿಸಲಾಗುವುದಿಲ್ಲ. ಅಂದರೆ ಊಟದ ಮೆನುವಿನಲ್ಲಿ ಕೇವಲ ಒಂದು ತರಕಾರಿ, ಅನ್ನ, ರೊಟ್ಟಿ, ದಾಲ್, ಸಲಾಡ್, ತಂಪು ಪಾನೀಯ ಮತ್ತು ಒಂದು ಸಿಹಿತಿಂಡಿ ನೀಡಲು ಅನುಮತಿಸಲಾಗಿದೆ.

ಬಹು ಖಾದ್ಯಗಳನ್ನು ತಯಾರಿಸುವುದರಿಂದ ಅದು ಅನಗತ್ಯ ವೆಚ್ಚಕ್ಕೆ ಕಾರಣವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಅಲ್ಲದೇ ಈ ನೀತಿಯನ್ನು 2016ರಲ್ಲಿ ಮೊದಲು ಜಾರಿಗೆ ತರಲಾಯಿತು. ಆದರೆ ಜನರು ಅದನ್ನು ಅನುಸರಿಸಲಿಲ್ಲ. ಇದೀಗ ಈ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈ ಕ್ರಮವನ್ನು ಪಾಲಿಸದಿರುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಡಯಬಿಟಿಕ್‌ ಚಟ್ನಿ ನಿಮಗೆ ಗೊತ್ತೆ? ಇದು ಮಧುಮೇಹಿಗಳಿಗೆ ಉಪಯುಕ್ತ

ಪಾಕಿಸ್ತಾನವು ಪ್ರಸ್ತುತ ದಿನಗಳಲ್ಲಿ ಹಣಕಾಸಿನ ಸಮಸ್ಯೆಯನ್ನು ಹೆಚ್ಚಿನ ಮಟ್ಟದಲ್ಲಿ ಅನುಭವಿಸುತ್ತಿದೆ. ಹಾಗಾಗಿ ಇತ್ತೀಚೆಗೆ ಪ್ರಧಾನಿ ಮಂತ್ರಿ ಶೆಹಬಾಜ್ ಷರೀಫ್ ವಿತ್ತೀಯ ಸಹಾಯವನ್ನು ಪಡೆಯಲು ಸೌದಿ ಅರೇಬಿಯಾಕ್ಕೆ ಹೋದರು. ಆದರೆ ಆ ಕಾರ್ಯ ಯಶಸ್ವಿಯಾಗಲಿಲ್ಲ. ಪಾಕಿಸ್ತಾನದಲ್ಲಿ ಹಣದುಬ್ಬರ ಎಷ್ಟಿದೆಯೆಂದರೆ ಸಾಮಾನ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಉದಾಹರಣೆಗೆ ಒಂದು ಕಿಲೋ ಗೋಧಿ ಹಿಟ್ಟಿನ ಬೆಲೆ ಈಗ 800 PKR (ಪಾಕಿಸ್ತಾನ ಕರೆನ್ಸಿ)ಆಗಿದೆ. ಒಂದು ರೊಟ್ಟಿ ಬೆಲೆ 25 PKRಆಗಿದೆ. ಬಾಳೆಹಣ್ಣಿನ ಬೆಲೆ 150-200 PKR ಆಗಿದೆಯಂತೆ.

Exit mobile version