Site icon Vistara News

NIA Raid | ದೇಶಾದ್ಯಂತ ಎನ್‌ಐಎ ದಾಳಿಗೆ ಕಾರಣವಾಗಿದ್ದು ಪಿಎಫ್‌ಐ ಸದಸ್ಯರ ಕರಾಟೆ ಕ್ಲಾಸ್!

Terrorist Arrested

ಬೆಂಗಳೂರು: ಕರಾಟೆ ಕ್ಲಾಸ್ ನೆಪದಲ್ಲಿ ಪಿಎಫ್ಐ ಸದಸ್ಯರಿಗೆ ಭಯೋತ್ಪಾದನೆಯ ಕೃತ್ಯಗಳಿಗೆ ತರಬೇತಿ ನೀಡುತ್ತಿದ್ದ ಆಘಾತಕಾರಿ ಅಂಶ ಬಯಲಾಗಿದೆ. ಇದರ ಸುಳಿವನ್ನು ಆಧರಿಸಿ ತನಿಖೆ ನಡೆಸಿದ ಎನ್‌ಐಎ, ದೇಶಾದ್ಯಂತ ನಾನಾ ಕಡೆಗಳಲ್ಲಿ ಪಿಎಫ್‌ಐ ಜಾಲದ ಮೇಲೆ ದಾಳಿ (NIA Raid) ನಡೆಸಿತ್ತು.

ತೆಲಂಗಾಣದ ಆಟೋನಗರ್‌ನಲ್ಲಿ ಅಬ್ದುಲ್ ಖಾದರ್ ಎಂಬಾತ ವಿವಾದಾತ್ಮಕ ಕರಾಟೆ ಕ್ಲಾಸ್‌ಗಳನ್ನು ನಡೆಸುತ್ತಿದ್ದ. ಇಲ್ಲಿ ಪಿಎಫ್‌ಐ ಸದಸ್ಯರಿಗೆ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ತರಬೇತಿ ನೀಡಲಾಗುತ್ತಿತ್ತು. ಈ ಬಗ್ಗೆ ಹೈದರಾಬಾದ್ ಎನ್‌ಐಎನಲ್ಲಿ (National Investigation Agency) ಪ್ರಕರಣ ಹಾಗೂ, ಅಬ್ದುಲ್ ಖಾದರ್ ಸೇರಿ 27 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇವರಲ್ಲಿ ಹಲವರನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದರು.

ಕರಾಟೆ ಕ್ಲಾಸ್ ನಲ್ಲಿದ್ದವರ ವಿಚಾರಣೆ ವೇಳೆ ಆಘಾತಕಾರಿ ಅಂಶಗಳು ಬಯಲಾಗಿತ್ತು. ದೇಶಾದ್ಯಂತ ಇದೇ ರೀತಿಯ ಸಂಚನ್ನು ಮಾಡುತ್ತಿರುವ ಬಗ್ಗೆ ಆರೋಪಿಗಳು ತಿಳಿಸಿದ್ದರು. ಹೀಗಾಗಿಯೇ ಒಂದು ತಿಂಗಳಿನಿಂದ ಸಂಪೂರ್ಣ ಮಾಹಿತಿಯನ್ನು ಎನ್ಐಎ ಕಲೆ ಹಾಕಿತ್ತು. ಬಳಿಕ ಏಕಕಾಲಕ್ಕೆ ದೇಶದ 11 ರಾಜ್ಯಗಳಲ್ಲಿ 93 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು.

ಕೆಜಿ ಹಳ್ಳಿ ಪೊಲೀಸರ ತನಿಖೆ ವೇಳೆ ಸ್ಫೋಟಕ ಮಾಹಿತಿ : ಕೆಜಿ ಹಳ್ಳಿ ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಡೈರಿಯಲ್ಲಿ ಹಲವು ಮಹತ್ವದ ವಿವರಗಳು ಲಭಿಸಿವೆ ಎನ್ನಲಾಗಿದೆ. ಇಡೀ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಆರೋಪಿಗಳು ಫ್ಲ್ಯಾನ್ ನಡೆಸಿರುವುದು ಡೈರಿಯಲ್ಲಿ ಪತ್ತೆಯಾಗಿದೆ. ಡೈರಿಯಲ್ಲಿ Training to be organized ಅಂತ ಬರೆಯಲಾಗಿದೆ. ಆದರೆ ಸ್ಥಳ ಹಾಗೂ ದಿನಾಂಕ ಬರೆದಿಲ್ಲ. ಹೀಗಾಗಿ ಎಲ್ಲಿ ಟ್ರೈನಿಂಗ್ ಫ್ಲ್ಯಾನ್ ಮಾಡಿದ್ರು..? ಯಾರೆಲ್ಲ ಭಾಗವಹಿಸಲಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಆರೋಪಿಗಳಾದ ನಾಸಿರ್ ಪಾಷ ಹಾಗೂ ಮೊಹಮದ್ ಅಶ್ರಪ್ ನ ತೀವ್ರ ವಿಚಾರಣೆ ನಡೆಯುತ್ತಿದೆ. ದಾಳಿಯ ಹಿಂದಿನ ದಿನವೂ ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ಆಗಿರುವ ಮಾಹಿತಿ ಲಭಿಸಿದೆ. ಕಳೆದ ಒಂದು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ವರ್ಗಾವಣೆಯಾಗಿರುವುದು ಗೊತ್ತಾಗಿದೆ.

Exit mobile version