Site icon Vistara News

Electoral Bond : ಎನ್​ಡಿಎ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್​ ವ್ಯವಸ್ಥೆ ಮರುಜಾರಿ; ನಿರ್ಮಲಾ ಸೀತಾರಾಮನ್​

electoral Bond

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಈ ಎಲ್ಲ ಪಾಲುದಾರರ ಜತೆ ಸಮಾಲೋಚನೆಯ ಮಾಡಿ ಚುನಾವಣಾ ಬಾಂಡ್ (Electoral Bond) ಯೋಜನೆಯನ್ನು ಮರಳಿ ತರುವ ಸಾಧ್ಯತೆಯ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಳಿವು ನೀಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಅವರು “ನಾವು ಇನ್ನೂ ಮಧ್ಯಸ್ಥಗಾರರೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸಬೇಕಾಗಿದೆ ಮತ್ತು ಎಲ್ಲರಿಗೂ ಸ್ವೀಕಾರಾರ್ಹವಾದ ಚೌಕಟ್ಟನ್ನು ರಚಿಸಲು ಅಥವಾ ತರಲು ನಾವು ಏನು ಮಾಡಬೇಕು ಎಂಬುದನ್ನು ಪರಿಶೀಲಿಸಬೇಕಾಗಿದೆ. ಮುಖ್ಯವಾಗಿ ಪಾರದರ್ಶಕತೆಯ ಮಟ್ಟವನ್ನು ಉಳಿಸಿಕೊಳ್ಳಬೇಕು. ಕಪ್ಪು ಹಣ ಇಲ್ಲಿಗೆ ಪ್ರವೇಶಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ನಿವಾಳಿಸಬೇಕು ಎಂದು ಹೇಳಿದರು. ಆದಾಗ್ಯೂ, ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕೆ ಎಂದು ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಸುಪ್ರೀಂ ಕೋರ್ಟ್​​ ಈಗಷ್ಟೇ ಈ ಯೋಜನೆಯಲ್ಲಿ ಪಾರದರ್ಶಕತೆ ತಂದಿದೆ. ಈ ಮೊದಲು ಎಲ್ಲವೂ ಮೋಸದ ಜಾಲವಾಗಿತ್ತು ಎಂದು ಅವರು ಹೇಳಿದ್ದಾರೆ. ಯೋಜನೆಯ ಕೆಲವು ಅಂಶಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ಒಪ್ಪಿಕೊಂಡ ಹಣಕಾಸು ಸಚಿವೆ ಸೀತಾರಾಮನ್ ಸಮಾಲೋಚನೆ ಯ ನಂತರ ಅವುಗಳನ್ನು ಮರಳಿ ತರುವ ಸಾಧ್ಯತೆಗಳಿವೆ ಎಂದು ಹೇಳಿದರು.

ಹಿಂದೆಯೂ ಸಮರ್ಥಿಸಿಕೊಂಡಿದ್ದರು

ಚುನಾವಣಾ ಬಾಂಡ್ ಯೋಜನೆಯನ್ನು ಹಣಕಾಸು ಸಚಿವರು ಸಮರ್ಥಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಈ ಯೋಜನೆಯು “ಹಿಂದಿನ ಕಪ್ಪು ಹಣಕ್ಕಿಂತ ಒಂದು ಹೆಜ್ಜೆ ಉತ್ತಮ” ಎಂದು ಹೇಳಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​​ಗೆ ನೀಡಿದ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಬಿಜೆಪಿ ಆಡಳಿತವು ಚುನಾವಣಾ ಹಣಕಾಸು ಶುದ್ಧೀಕರಣಕ್ಕಾಗಿ ಕಾನೂನನ್ನು ತಂದಿದೆ ಎಂದು ಹೇಳಿದ್ದರು. ಚುನಾವಣಾ ನಿಧಿಯು ಹೆಚ್ಚು ಪಾರದರ್ಶಕತೆಯನ್ನು ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

ರಾಜಕೀಯ ನಿಧಿಯಲ್ಲಿ ಪಾರದರ್ಶಕತೆ ತರಲು ರಾಜಕೀಯ ಪಕ್ಷಗಳಿಗೆ ನೀಡಿದ ನಗದು ದೇಣಿಗೆಗಳಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರವು ಜನವರಿ 2, 2018 ರಂದು ಚುನಾವಣಾ ಬಾಂಡ್ ಯೋಜನೆಯನ್ನು ಪರಿಚಯಿಸಿತ್ತು. ಫೆಬ್ರವರಿ 2024 ರಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿತು.

Exit mobile version