Site icon Vistara News

Nitish Kumar | 2024ರಲ್ಲಿ ಬಿಜೆಪಿಯ ಸೋಲಿಸಲು ‘ಪ್ರಮುಖ ರಂಗ’ದ ಅಗತ್ಯ, ನಿತೀಶ್‌ ಮಾತಿನ ತಾತ್ಪರ್ಯವೇನು?

Nitish Kumar on Bihar Hooch Tragedy

ಪಟನಾ: ಬಿಹಾರದಲ್ಲಿ ಎನ್‌ಡಿಎ ಜತೆಗಿನ ಮೈತ್ರಿ ಮುರಿದುಕೊಂಡು, ಆರ್‌ಜೆಡಿ ಜತೆ ಕೈಜೋಡಿಸಿ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರು, ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಸೋಲಿಸುವ ಪಣತೊಟ್ಟಿದ್ದಾರೆ. ಇದಕ್ಕಾಗಿ ಹಲವು ತಿಂಗಳಿಂದ ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿರುವ ಅವರು, ಕಮಲ ಪಾಳಯವನ್ನು ಸೋಲಿಸಲು ‘ಪ್ರಮುಖ ರಂಗ’ದ ಅಗತ್ಯವಿದೆ ಎಂದು ಹೇಳಿದ್ದಾರೆ.

ಬಿಹಾರದ ಪಟನಾದಲ್ಲಿ ನಡೆದ ಜೆಡಿಯು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ತೃತೀಯ ರಂಗ ರಚಿಸುವ ಅಗತ್ಯವಿಲ್ಲ. ಅದರ ಬದಲಾಗಿ, ಪ್ರತಿಪಕ್ಷಗಳೆಲ್ಲ ಒಗ್ಗೂಡಿ ‘ಪ್ರಮುಖ ರಂಗ’ ರಚಿಸಿದರೆ ಸುಲಭವಾಗಿ ಬಿಜೆಪಿ ವಿರುದ್ಧ ಭಾರಿ ಅಂತರದಲ್ಲಿ ಗೆಲುವು ಸಾಧಿಸಬಹುದಾಗಿದೆ” ಎಂದು ತಿಳಿಸಿದ್ದಾರೆ.

ಬಿಜೆಪಿ ವಿರುದ್ಧದ ಪ್ರತಿಪಕ್ಷಗಳಲ್ಲೇ ಎರಡು ಭಾಗಗಳಾಗಿ ವಿಂಗಡಣೆಯಾಗದೆ, ತೃತೀಯ ರಂಗ ಎಂಬ ಮತ್ತೊಂದು ರಾಜಕೀಯ ಗುಂಪು ರಚನೆಯಾಗುವ ಬದಲು, ಎಲ್ಲ ಪ್ರತಿಪಕ್ಷಗಳೂ ಒಗ್ಗೂಡಿ ಬಿಜೆಪಿ ವಿರುದ್ಧ ಹೋರಾಡಬೇಕು ಎಂಬುದು ನಿತೀಶ್‌ ಕುಮಾರ್‌ ಅವರ ಮಾತಿನ ತಾತ್ಪರ್ಯವಾಗಿದೆ. ಈಗಾಗಲೇ, ಕರ್ನಾಟಕದ ಜೆಡಿಎಸ್‌ ಸೇರಿ ಹಲವು ಪಕ್ಷಗಳ ನಾಯಕರ ಜತೆ ನಿತೀಶ್‌ ಮಾತುಕತೆಯನ್ನೂ ನಡೆಸಿದ್ದಾರೆ.

೨೦೨೦ರಲ್ಲಿ ಜೆಡಿಯು ಸೋಲಿಸಲು ಕುತಂತ್ರ

“ಬಿಹಾರದಲ್ಲಿ ೨೦೨೨ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಗಳನ್ನು ಸೋಲಿಸಲು ಅವರು ಹುನ್ನಾರ ಮಾಡಿದ್ದರು” ಎಂದು ಬಿಜೆಪಿ ವಿರುದ್ಧ ನಿತೀಶ್‌ ಕುಮಾರ್‌ ಬಿಜೆಪಿಯ ಹೆಸರು ಹೇಳದೆ ಆರೋಪಿಸಿದ್ದಾರೆ. “೨೦೦೫ರಲ್ಲಾಗಲಿ, ೨೦೧೦ರಲ್ಲಾಗಲಿ ನಮ್ಮ ಪಕ್ಷವು ಕಡಿಮೆ ಸೀಟುಗಳನ್ನು ಗೆದ್ದಿರಲಿಲ್ಲ. ಆದರೆ, ೨೦೨೦ರಲ್ಲಿ ಅವರು ನಮ್ಮನ್ನು ಸೋಲಿಸಲು ಯತ್ನಿಸಿದರು” ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

ಇದನ್ನೂ ಓದಿ | Grand Alliance | ಸೋನಿಯಾ – ಲಾಲು – ನಿತೀಶ್ ಭೇಟಿ, ರಾಷ್ಟ್ರ ರಾಜಕಾರಣದಲ್ಲೂ ಮತ್ತೆ ಮಹಾಮೈತ್ರಿ?

Exit mobile version