Site icon Vistara News

Vote for bribe : ಲಂಚ ಪಡೆಯುವ ಶಾಸಕರು, ಸಂಸದರಿಗೆ ಕಾನೂನು ವಿನಾಯಿತಿ ಇಲ್ಲ ಎಂದ ಸುಪ್ರೀಂ ಕೋರ್ಟ್​​

Supreme Court

'There has to be sanctity': Supreme Court to poll body on EVM-VVPAT case

ನವ ದೆಹಲಿ: ಪಿ.ವಿ.ನರಸಿಂಹ ರಾವ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ 1998ರಲ್ಲಿ ಸುಪ್ರೀಂ ಕೋರ್ಟ್ (Supreme Court) ನೀಡಿದ್ದ ತೀರ್ಪನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್​​​ನ ಏಳು ನ್ಯಾಯಾಧೀಶರ ಪೀಠವು, ಸಂಸದರು ಮತ್ತು ಶಾಸಕರು ಸಂಸತ್ತು ಅಥವಾ ವಿಧಾನಸಭೆಯಲ್ಲಿ ತಮ್ಮ ಮತಗಳು ಮತ್ತು ಭಾಷಣಕ್ಕಾಗಿ ಲಂಚ ಪಡೆದರೆ (Vote for bribe) ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನು ಕ್ರಮಕ್ಕೆ ಗುರಿಯಾಗುತ್ತಾರೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು 1998ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಐದು ನ್ಯಾಯಾಧೀಶರ ಪೀಠವು ನೀಡಿದ ತೀರ್ಪನ್ನು ಸರ್ವಾನುಮತದಿಂದ ರದ್ದುಗೊಳಿಸಿತು. ಇದರಲ್ಲಿ ಸಂಸದರು ಮತ್ತು ಶಾಸಕರಿಗೆ ಶಾಸಕಾಂಗದಲ್ಲಿ ಭಾಷಣ ಮಾಡಲು ಅಥವಾ ಮತ ಚಲಾಯಿಸಲು ಲಂಚ ತೆಗೆದುಕೊಂಡಿದ್ದಕ್ಕಾಗಿ ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗಿತ್ತು.

ತೀರ್ಪು ಪ್ರಕಟಿಸಿದ ಸಿಜೆಐ ಚಂದ್ರಚೂಡ್, ಲಂಚ ಪಡೆಯುವುದನ್ನು ಸಂಸದೀಯ ಹುದ್ದೆಯ ಮೂಲಕ ರಕ್ಷಿಸಲಾಗುವುದಿಲ್ಲ ಮತ್ತು 1998ರ ತೀರ್ಪಿನ ವ್ಯಾಖ್ಯಾನವು ಸಂವಿಧಾನದ 105 ಮತ್ತು 194 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಕೊನೆಗೂ ಇ.ಡಿ ವಿಚಾರಣೆಗೆ ಒಪ್ಪಿದ ದೆಹಲಿ ಸಿಎಂ ಕೇಜ್ರಿವಾಲ್; ಕಂಡೀಷನ್ಸ್‌ ಅಪ್ಲೈ!

ವಿಧಾನಸಭೆಯಲ್ಲಿ ಮತ ಅಥವಾ ಭಾಷಣಕ್ಕೆ ಸಂಬಂಧಿಸಿದಂತೆ ಲಂಚದ ಆರೋಪದ ಮೇಲೆ ಸಂಸದರು, ಶಾಸಕರು ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಏಳು ನ್ಯಾಯಾಧೀಶರ ನ್ಯಾಯಪೀಠ ತೀರ್ಪು ನೀಡಿತು. ಜನಪ್ರತಿನಿಧಿಗಳ ಭ್ರಷ್ಟಾಚಾರ ಅಥವಾ ಲಂಚವು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯನ್ನು ಹಾಳುಮಾಡುತ್ತದೆ. ಲಂಚ ಸ್ವೀಕರಿಸುವುದು ಅಪರಾಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Exit mobile version