Site icon Vistara News

Opposition Meet: ಯಾವ ಪಕ್ಷ ಯಾವ ಕೂಟದಲ್ಲಿದೆ? ‘ಎನ್‌ಡಿಎ’, ‘ಇಂಡಿಯಾ’ ಪರ ಇರುವ ಪಕ್ಷಗಳೆಷ್ಟು?

Opposition Parties Meet

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ಎಲ್ಲ ರಾಜಕೀಯ ಪಕ್ಷಗಳು ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಪ್ರಮುಖ ಪಕ್ಷಗಳಾದ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಪಕ್ಷಗಳೆರಡೂ ತಮ್ಮ ಕೂಟಗಳನ್ನು ಬಲಪಡಿಸಿಕೊಳ್ಳುತ್ತಿವೆ. ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಬೆಂಗಳೂರಲ್ಲಿ (Bengaluru) ಎರಡನೇ ಸಭೆಯನ್ನು ನಡೆಸುತ್ತಿದ್ದರೆ, ಅತ್ತ ದಿಲ್ಲಿಯಲ್ಲಿ ಬಿಜೆಪಿಯ ನೇತೃತ್ವದ ಮೈತ್ರಿಕೂಟವಾದ ಎನ್‌ಡಿಎ ಸಭೆಯನ್ನು ಆಯೋಜಿಸಲಾಗಿದೆ. ಪ್ರತಿಪಕ್ಷಗಳ ಕೂಟಕ್ಕೆ ಇಂಡಿಯಾ (India) ಎಂದು ನಾಮಕರಣ ಮಾಡಲಾಗಿದೆ(Opposition Meet).

ಬಿಜೆಪಿ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟ (National Democratic Alliance – NDA) 38 ಪಕ್ಷಗಳಿದ್ದು, ಇತ್ತ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಕೂಟದಲ್ಲಿ 26 ಪಕ್ಷಗಳಿವೆ. ಎರಡೂ ಕಡೆಯಿಂದಲೇ ಲೋಕಸಭೆ ಚುನಾವಣೆಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಯಾವ ಕೂಟದಲ್ಲಿ ಯಾವ ಪಕ್ಷಗಳಿವೆ ಎಂಬುದನ್ನು ನೋಡೋಣ ಬನ್ನಿ.

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಕೂಟ(INDIA)

ಕಾಂಗ್ರೆಸ್, ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಟಿಎಂಸಿ), ದ್ರಾವಿಡ್ ಮುನ್ನೇತ್ರ ಕಳಗಂ (ಡಿಎಂಕೆ), ಆಮ್ ಆದ್ಮಿ ಪಾರ್ಟಿ (ಆಪ್), ಸಂಯುಕ್ತ ಜನತಾ ದಳ, ರಾಷ್ಟ್ರೀಯ ಜನತಾ ದಳ(ಆರ್ಜೆಡಿ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ( ಎನ್‌ಸಿಪಿ- ಶರದ್ ಪವಾರ್ ಬಣ), ಶಿವಸೇನಾ (ಉದ್ಧವ್ ಠಾಕ್ರೆ ಬಣ), ಸಮಜಾವಾದಿ ಪಾರ್ಟಿ (ಎಸ್‌ಪಿ), ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ಅಪ್ನಾ ದಳ್, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಕಮ್ಯುನಿಷ್ಟ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಲಿಬರೇಷನ್ (ಎಂಎಲ್), ರೆವಲೂಷನರೀ ಸೋಷಿಯಲಿಸ್ಟ್ ಪಾರ್ಟಿ (ಆರ್‌ಎಸ್‌ಪಿ), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ(ಎಂಡಿಎಂಕೆ), ವಿಡುತಲೈ ಚಿರುತಾಯಿಗಲ್ ಕಚ್ಚಿ(ವಿಸಿಕೆ), ಕೊಂಗುನಾಡು ಮಕ್ಕಳ್ ದೇಸಾಯಿ ಕಚ್ಚಿ(ಕೆಎಂಡಿಕೆ), ಎಂಎಂಕೆ, ಇಂಡಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್), ಕೇರಳ ಕಾಂಗ್ರೆಸ್(ಎಂ), ಕೇರಳ ಕಾಂಗ್ರೆಸ್(ಜೋಸೆಫ್).

ಈ ಸುದ್ದಿಯನ್ನೂ ಓದಿ: Opposition Meet: ಲೋಕಸಭೆಗೆ NDA vs INDIA: ಮೋದಿ ವಿರೋಧಿ ಪ್ರತಿಪಕ್ಷಕ್ಕೆ ಹೊಸ ಹೆಸರು

ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷಗಳು

ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಶಿವಸೇನಾ(ಏಕನಾಥ ಶಿಂಧೆ ಬಣ), ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್ ಬಣ), ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ (ಪುಷ್ಪಪತಿ ಕುಮಾರ್ ಪರಾಸ ನೇತೃತ್ವ), ಆಲ್ ಇಂಡಿಯಾ ಅಣ್ಣಾ ದ್ರಾವಿಡ್ ಮುನ್ನೇತ್ರ ಕಳಗಂ(ಎಐಎಡಿಎಂಕೆ), ಅಪ್ನಾದಳ್(ಸೋನೇಲಾಲ್), ನ್ಯಾಷಲನ್ ಪೀಪಲ್ಸ್ ಪಾರ್ಟಿ, ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ(ಎನ್‌ಡಿಪಿಪಿ), ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯುನಿಯನ್, ಸಿಕ್ಕಿಮ್ ಕ್ರಾಂತಿಕಾರಿ ಮೋರ್ಚಾ, ಮಿಜೋ ನ್ಯಾಷನಲ್ ಫ್ರಂಟ್, ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ, ನಾಗಾ ಪೀಪಲ್ಸ್ ಫ್ರಂಟ್(ನಾಗಾಲ್ಯಾಂಡ್), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಾಳೆ), ಅಸ್ಸೋಮ್ ಗಣ ಪರಿಷತ್, ಪಟ್ಟಳಿ ಮಕ್ಕಳ ಕಚ್ಚಿ, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ, ಶಿರೋಮಣಿ ಅಕಾಲಿ ದಳ(ಸಂಯುಕ್ತ), ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಜನನಾಯಕ ಜನತಾ ಪಾರ್ಟಿ, ಪ್ರಹಾರ್ ಜನಶಕ್ತಿ ಪಾರ್ಟಿ, ರಾಷ್ಟ್ರೀಯ ಸಮಾಜ ಪಕ್ಷ, ಜನ್ ಸುರಾಜ್ಯ ಶಕ್ತಿ ಪಾರ್ಟಿ, ಕುಕಿ ಪೀಪಲ್ಸ್ ಕೂಟ, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ(ಮೇಘಾಲಯ), ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ನಿಷಾದ್ ಪಾರ್ಟಿ, ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್, ಎಚ್ಎಎಂ, ಜನ ಸೇನಾ ಪಾರ್ಟಿ, ಹರ್ಯಾಣ ಲೋಕಹಿತ್ ಪಾರ್ಟಿ, ಭಾರತ ಧರ್ಮ ಜನ ಸೇನಾ, ಕೇರಳ ಕಾಮರಾಜ ಕಾಂಗ್ರೆಸ್, ಪುಥಿಯಾ ತಮಿಳಗಂ, ಲೋಕ ಜನ ಶಕ್ತಿ ಪಾರ್ಟಿ(ರಾಮ್ ವಿಲಾಸ ಪಾಸ್ವಾನ್), ಗೋರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version