Site icon Vistara News

Paris Olympics 2024 : ಪೋಲ್ ವಾಲ್ಟ್ ‌ಪಟುವಿಗೆ ಮರ್ಮಾಘಾತ! ಪದಕ ತಪ್ಪಿಸಿದ ಮರ್ಮಾಂಗ! ವಿಡಿಯೊ ನೋಡಿ

Paris Olympic 2024

ಬೆಂಗಳೂರು: ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ (Paris Olympics 2024) ಆತಿಥೇಯ ದೇಶದ ಪೋಲ್​ವಾಲ್ಡ್​ ಪಟುವೊಬ್ಬರು ತಮ್ಮ ಮರ್ಮಾಂಗದ ಉಬ್ಬುವಿಕೆಯ ಕಾರಣಕ್ಕೆ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುವ ವೇಳೆ ಅವರ ಮರ್ಮಾಂಗವು ಬಾರ್​ಗೆ ತಾಗಿದ್ದ ಕಾರಣ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲಗೊಂಡರು. ಅರ್ಹತೆ ಪಡೆಯದೇ ಇರುವುದು ಸಾಮಾನ್ಯ ವಿಷಯವಾಗಿದ್ದರೂ, ಮರ್ಮಾಂಗದ ಕಾರಣಕ್ಕೆ ಅವರು ಅವಕಾಶ ಕಳೆದುಕೊಂಡಿದ್ದು ವೈರಲ್ ಸುದ್ದಿಯಾಯಿತು.

ಫ್ರೆಂಚ್ ಪೋಲ್ ವಾಲ್ಟರ್ ಆಂಥೋನಿ ಅಮ್ಮಿರಾಟಿ ವೈರಲ್ ಆದ ಕ್ರೀಡಾಪಟು. ಯಾಕೆಂದರೆ ಸ್ಪರ್ಧೆ ಅವರು ಬಯಸಿದ ರೀತಿಯಲ್ಲಿ ನಡೆಯಲಿಲ್ಲ. . ಸ್ಟೇಡ್ ಡಿ ಫ್ರಾನ್ಸ್​ನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ನಡೆದ ಸ್ಪರ್ಧೆಯಲ್ಲಿ ಆಂಥೋನಿ ಆಗಸ್ಟ್ 3 ರ ಶನಿವಾರ ಪುರುಷರ ಪೋಲ್ ವಾಲ್ಸ್​​ ಫೈನಲ್​ನಲ್ಲಿ ಸ್ಥಾನವನ್ನು ಕಳೆದುಕೊಂಡರು. ಅವರ ಸೋಲು ಕೆಲವೇ ಇಂಚುಗಲಿಂದ ಆಗಿತ್ತು. ಆದರೆ, ಅದು ಮರ್ಮಾಂಗದ ಇಂಚಿನಿಂದ ಎಂಬುದು ದೊಡ್ಡ ವಿಷಯವಾಯಿತು.

5.70 ಮೀಟರ್ ಎತ್ತರ ಹಾರುವಲ್ಲಿ ಅವರು ಮೂರು ಬಾರಿ ವಿಫಲರಾದರು. ಅದರಲ್ಲೂ ಎರಡನೇ ಪ್ರಯತ್ನದಲ್ಲಿ 21 ವರ್ಷದ ಆಟಗಾರನ ಮರ್ಮಾಂಗದ ಉಬ್ಬು ಬಾರ್ ಗೆ ತಾಗಿತು.. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೊದಲ್ಲಿ, ಆಂಥೋನಿ ಅವರ ಕಾಲುಗಳು ಆರಂಭದಲ್ಲಿ ಬಾರ್​ಗೆ ತಾಗಿದ್ದನ್ನು ತೋರಿಸುತ್ತಿತ್ತು. ಆದರೆ ನಂತರ ಶಿಶ್ನವು ಬಾರ್​ಗೆ ತಾಗಿದಾಗ ಸಂಪೂರ್ಣವಾಗಿ ಅದು ಕೆಳಕ್ಕೆ ಬಿತ್ತು.

ಆಂಥೋನಿ ಅಮ್ಮಿರಾಟಿ ಅವರು ಮ್ಯಾಚ್ ಮೇಲೆ ಬೀಳುವಾಗ ನೋವಿನಿಂದ ಬಳಲಿದ್ದು ಗೊತ್ತಾಯಿತು. ಹೀಗಾಗಿ ಮರ್ಮಾಂಗಕ್ಕೆ ಬಲವಾಗಿ ಹೊಡೆದಂತೆ ಬಿದ್ದಂತೆ ಕಂಡಿತು. ಪುರುಷತ್ವದ ಉಬ್ಬಿನ ಕಾರಣಕ್ಕೆ ಅವಕಾಶ ಕಳೆದುಕೊಂಡ ಪೋಲ್ ವಾಲ್ಟರ್ ಎಂಬ ಅಪಖ್ಯಾತಿಗೆ ಪಾತ್ರರಾದರು. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಜಪಾನ್​​ ಹಿರೋಕಿ ಒಗಿಟಾ ಅವರು ಮರ್ಮಾಗ ತಾಗಿದ್ದು ಸುದ್ದಿಯಾಗಿತ್ತು.

ಆಂಥೋನಿ ಅಮ್ಮಿರಾಟಿ ಮೂರು ಪ್ರಯತ್ನಗಳಲ್ಲಿ 5.70 ಮೀಟರ್ ವಾಲ್ಟ್ ಅನ್ನು ಪೂರ್ಣಗೊಳಿಸಲು ವಿಫಲರಾದರು ಮತ್ತು 15 ನೇ ಸ್ಥಾನ ಪಡೆದು 31 ಜನರ ಸ್ಪರ್ಧೆಯಿಂದ ಹೊರನಡೆದರು. 2022ರಲ್ಲಿ ವಿಶ್ವ ಅಂಡರ್-20 ಚಾಂಪಿಯನ್​​ಶಿಪ್​ ಗೆದ್ದಿದ್ದ ಆಂಥೋನಿ, ಅರ್ಹತೆ ಪಡೆಯಲು ಅಗ್ರ 12ರಲ್ಲಿ ಸ್ಥಾನ ಪಡೆಯಬೇಕಿತ್ತು.

ಇದನ್ನೂ ಓದಿ:Wasim Jaffer : ಪಂಜಾಬ್ ತಂಡದ ಕೋಚ್​ ಆಗಿ ಮಾಜಿ ಬ್ಯಾಟರ್​ ವಾಸಿಮ್​ ಜಾಫರ್ ನೇಮಕ

ಒಲಿಂಪಿಕ್ ಕನಸುಗಳು ಭಗ್ನಗೊಂಡಾಗ ಹೊರತಾಗಿಯೂ ಆಂಥೋನಿ ಅಮ್ಮಿರಾಟಿ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆದರು. ದುರದೃಷ್ಟಕರ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ಜತೆಗೆ ಇದರಿಂದ ಅವರಿಗೆ ಆಗಿರುವ ಲಾಭವೇನೆಂದರೆ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಫಾಲೋಯರ್​ಗಳ ಸಂಖ್ಯೆ ಜಾಸ್ತಿಯಾಯಿತು.

ವಿಶ್ಲೇಷಕರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ವಿವರಿಸಲು ಹೆಣಗಾಡಿದರು. ಅದು ದುರದೃಷ್ಟಕರ ಎಂದರು. ಈ ದೃಶ್ಯವು ಹಾಸ್ಯಮಯ ಟೀಕೆಗಳನ್ನು ಹುಟ್ಟುಹಾಕಿದವು.

ನಿರೀಕ್ಷೆಯಂತೆ, ವಿಶ್ವ ದಾಖಲೆ ಹೊಂದಿರುವ ಸ್ವೀಡನ್​​ ಮೊಂಡೊ ಡುಪ್ಲಾಂಟಿಸ್ ತಮ್ಮ ಮೊದಲ ಪ್ರಯತ್ನದಲ್ಲಿ 5.75 ಮೀಟರ್ ದೂರವನ್ನು ಕ್ರಮಿಸುವ ಮೂಲಕ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು. ನಾರ್ವೆಯ ಗುಟ್ಟೋರ್ಮ್ಸೆನ್ ಸೊಂಡ್ರೆ ಎರಡನೇ ಸ್ಥಾನ ಪಡೆದರೆ, ಗ್ರೀಸ್ ನ ಕರಲಿಸ್ ಎಮಾನೌಲಿ ಮೂರನೇ ಸ್ಥಾನ ಪಡೆದರು. ಪ್ರಾಸಂಗಿಕವಾಗಿ, ಯಾವುದೇ ಪೋಲ್ ವಾಲ್ಟರ್ಗಳು 5.80 ಮೀಟರ್ ಸ್ವಯಂ ಅರ್ಹತೆ ಪಡೆಯಲು ಹೋಗಲಿಲ್ಲ.

Exit mobile version