Site icon Vistara News

Paris Olympics 2024 : ಒಲಿಂಪಿಕ್ಸ್​ಗೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​ನ ರೈಲ್ವೆ ವ್ಯವಸ್ಥೆ ಮೇಲೆ ವಿಧ್ವಂಸಕ ದಾಳಿ

Paris Olympics 2024

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024 ರ (Paris Olympics 2024) ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್​​ನ ಹೈಸ್ಪೀಡ್ ಟಿಜಿವಿ ರೈಲು ಜಾಲದ ಮೇಲೆ ದುಷ್ಕರ್ಮಿಗಳ ದಾಳಿ ನಡೆದಿದೆ. ಶುಕ್ರವಾರ ರೈಲಿನ ತಾಂತ್ರಿಕ ನಿರ್ವಹಣಾ ಕೇಂದ್ರಗಳಿಗೆ ಬೆಂಕಿ ಹಚ್ಚವಲಾಗಿದೆ. ದುರುದ್ದೇಶದ ಕೃತ್ಯಗಳಿಂದಾಗಿ ರೈಲು ಸಂಪರ್ಕ ಜಾಲಕ್ಕೆ ಹಾನಿಯಾಗಿದೆ. ಇದು ದೇಶದ ಜನನಿಬಿಡ ರೈಲು ಮಾರ್ಗಗಳಿಗೆ ಅಡ್ಡಿಯಾಗಿದ್ದು, ಪ್ರಯಾಣಿಕರು ಅರ್ಧ ದಾರಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಕ್ರೀಡಾಕೂಟಕ್ಕೆ ಮುಂಚಿತವಾಗಿ ಪ್ರಯಾಣಕ್ಕೆ ಅಡ್ಡಿಪಡಿಸಲು ಈ ದಾಳಿ ನಡೆಸಲಾಗಿದ್ದು ಇದು ಸಂಘಟಿತ ವಿಧ್ವಂಸಕ ಕೃತ್ಯ ಎಂದು ಹೇಳಲಾಗಿದೆ.

ಪ್ಯಾರಿಸ್ ಅನ್ನು ಪಶ್ಚಿಮ, ಉತ್ತರ ಮತ್ತು ಪೂರ್ವ ಪ್ರದೇಶಗಳೊಂದಿಗೆ ಸಂಪರ್ಕಿಸುವ ಮಾರ್ಗಗಳಲ್ಲಿನ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಎಸ್ಎನ್​ಸಿಎಫ್ ತಿಳಿಸಿದೆ. ಇಂಗ್ಲಿಷ್ ಕಾಲುವೆಯ ಕೆಳಗಿರುವ ಲಂಡನ್ ಮತ್ತು ನೆರೆಯ ಬೆಲ್ಜಿಯಂಗೆ ಪ್ರಯಾಣದ ಮೇಲೂ ಇದು ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.

ಅಲ್ಲಿ ರೈಲು ವಿಭಾಗ ಹಲವಾರು ರೈಲುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಯಿತು ಮತ್ತು ರದ್ದುಗೊಳಿಸಬೇಕಾಯಿತು ಎಂದು ಹೇಳಲಾಗಿದೆ. ದುರಸ್ತಿಯ ಮೇಲ್ವಿಚಾರಣೆಗಾಗಿ ಸುರಕ್ಷತಾ ತಂಡ ಸ್ಥಳದಲ್ಲಿದೆ ಎಂದು ಹೇಳಿದ್ದಾರೆ. ವಾರಾಂತ್ಯದಲ್ಲಿ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

“ಅಟ್ಲಾಂಟಿಕ್, ಉತ್ತರ ಮತ್ತು ಪೂರ್ವ ಹೈಸ್ಪೀಡ್ ಮಾರ್ಗಗಳಲ್ಲಿ ಹಲವೆಡೆ ಬೆಂಕಿ ಹಚ್ಚಲಾಗಿದೆ. ನಮ್ಮ ರೈಲ್ವೆ ವ್ಯವಸ್ಥೆಗಳನ್ನು ಹಾನಿಗೊಳಿಸಲು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ನಡೆದ ದಾಳಿಗಳನ್ನು ಸರ್ಕಾರಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ, ಈ ಘಟನೆಗಳಿಂದ ಕ್ರೀಡಾಕೂಟಗಳ ತಾಣಕ್ಕೆ ಯಾವುದೇ ಸಂಪರ್ಕ ಕಡಿತಗೊಂಡಿಲ್ಲ.

ಸಾರಿಗೆ ಸಚಿವ ಪ್ಯಾಟ್ರಿಸ್ ವೆರ್ಗ್ರೀಟ್ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ “ಕ್ರಿಮಿನಲ್ ಘಟನೆಗಳನ್ನು ಖಂಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ರೈಲ್ವೆ ಸಂಚಾರವನ್ನು ಪುನಃಸ್ಥಾಪಿಸಲು ಎಸ್ ಎನ್ ಸಿಎಫ್ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.ದುರಸ್ತಿ ಕಾರ್ಯಗಳು ನಡೆಯುತ್ತಿದೆ. ರೈಲುಗಳನ್ನು ತಮ್ಮ ನಿರ್ಗಮನ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಆದಾಗ್ಯೂ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಪ್ರಯಾಣಿಕರಿಗೆ ಕೋಲಾಗಿದೆ.

ಇಷ್ಟು ದೊಡ್ಡ ಪ್ರಮಾಣದ ದಾಳಿಯು “ಟಿಜಿವಿ ನೆಟ್ವರ್ಕ್ ಅನ್ನು ನಿಷ್ಕ್ರಿಯಗೊಳಿಸುವ” ಗುರಿ ಹೊಂದಿತ್ತು ರೈಲ್ವೆ ಕಂಪನಿ ಹೇಳಿದೆ. ಸುಮಾರು 800,000 ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂದು ಅದು ಹೇಳಿದೆ.

ವಿಧ್ವಂಸಕ ಕೃತ್ಯದಿಂದ ಲಂಡನ್ ಮತ್ತು ಪ್ಯಾರಿಸ್ ನಡುವಿನ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ.

Exit mobile version