ಬೆಂಗಳೂರು: ಕೋವಿಡ್ -19 ಮುನ್ನೆಚ್ಚರಿಕೆಗಳಿಂದಾಗಿ 2020 ರ ಟೋಕಿಯೊ ಕ್ರೀಡಾಕೂಟದ ಸಮಯದಲ್ಲಿ ಜಾರಿಯಲ್ಲಿದ್ದ ಲೈಂಗಿಕ ಸಂಬಂಧಗಳ ಮೇಲಿನ ನಿಷೇಧವನ್ನು 2024 ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ತೆಗೆದುಹಾಕಲಾಗಿತ್ತು . ಹೀಗಾಗಿ ಹಿಂದಿನ ಒಲಿಂಪಿಕ್ಸ್ಗಿಂತ ಭಿನ್ನವಾಗಿ ನಡೆಯುತ್ತಿರುವ ಕ್ರೀಡಾಕೂಟಗಳು ಕ್ರೀಡಾಪಟುಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿವೆ. 1988ರ ಸಿಯೋಲ್ ಒಲಿಂಪಿಕ್ಸ್ ಬಳಿಕ ಒಲಿಂಪಿಕ್ಸ್ನಲ್ಲಿ ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವ ಮತ್ತು ಜಾಗೃತಿ ಮೂಡಿಸುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಅಂತೆಯೇ ಎಚ್ಐವಿ ಮತ್ತು ಏಡ್ಸ್ ಜಾಗೃತಿಯನ್ನು ಉತ್ತೇಜಿಸಲು ಪ್ರತಿಬಾರಿಯೂ ಅಥ್ಲೀಟ್ಗಳಿಗೆ ಕಾಂಡೋಮ್ಗಳನ್ನು ನೀಡಲಾಗುತ್ತದೆ. ಅಂತೆಯೇ ಈ ಬಾರಿಯೂ ಕಾಂಡೋಮ್ಗಳನ್ನು ವಿತರಣೆ ಮಾಡಲಾಗಿದೆ. ಆದರೆ ವಿಶೇಷ ಪ್ಯಾಕೆಟ್ನಲ್ಲಿ ನೀಡಲಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಕ್ರೀಡಾ ಗ್ರಾಮದಲ್ಲಿ ಕಾಂಡೋಮ್ಗಳನ್ನು ಅತ್ಯಾಕರ್ಷಕ ಬಣ್ಣದ ಪ್ಯಾಕೆಟ್ಗಳಲ್ಲಿ ನೀಡಿಎ. ಅದರಲ್ಲಿ ಒಲಿಂಪಿಕ್ಸ್ನ ಕೆಂಪು ಲಾಂಛನವಾದ ಫ್ರೈಜ್ ಚಿತ್ರವೂ ಇದೆ. ಅದೇ ರೀತಿ ಅತ್ಯಾಕರ್ಷಕ ಶೀರ್ಷಿಕೆಗಳೊಂದಿಗೆ ವರ್ಣರಂಜಿತ ಪ್ಯಾಕೆಟ್ಗಳಲ್ಲಿ ನೀಡಲಾಗಿದೆ. ರೋಮಾಂಚಕ ವಿನ್ಯಾಸದ ಜೊತೆಗೆ, ಪ್ಯಾಕೆಟ್ ಗಳು ಕ್ರೀಡಾಪಟುಗಳಿಗೆ ಎಚ್ಚರಿಕೆಯಿಂದ ಇರುವಂಥ ಸಲಹೆಯನ್ನೂ ನೀಡಿದೆ.
ಒಲಿಂಪಿಕ್ಸ್ ವೆಬ್ಸೈಟ್ ಪ್ರಕಾರ, 2024 ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 14,250 ಕ್ರೀಡಾಪಟುಗಳಿಗೆ ಸುಮಾರು 3 ಲಕ್ಷ ಕಾಂಡೋಮ್ಗಳನ್ನು ವಿತರಿಸಲಾಗಿದೆ. ಇದರಲ್ಲಿ 2 ಲಕ್ಷ ಪುರುಷ ಕಾಂಡೋಮ್ಗಳು 20,000 ಮಹಿಳಾ ಕಾಂಡೋಮ್ಗಳಾಗಿದೆ. ಮತ್ತು 10,000 ಓರಲ್ ಡ್ಯಾಮ್ಗಳೂ ಸೇರಿವೆ. ಮುದ್ದಾದ ಲಾಂಛನ ಫ್ರೈಜ್ ಅನ್ನು ಒಳಗೊಂಡಿರುವ ಕಾಂಡೋಮ್ಗಳ ಮೇಲೆ ಆಕರ್ಷಕ ಘೋಷಣೆಗಳನ್ನು ಹೊಂದಿದ್ದು ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುತ್ತವೆ.
ಇದನ್ನೂ ಓದಿ: Manu Bhaker : ಮನು ಭಾಕರ್ಗೆ ಕ್ರೀಡಾ ಇಲಾಖೆಯಿಂದ ವಿಶೇಷ ಸನ್ಮಾನ; 30 ಲಕ್ಷ ರೂಪಾಯಿ ವಿತರಣೆ
“ಇದನ್ನು ಹಾಕಿಕೊಳ್ಳುವುದಕ್ಕೆ ಚಿನ್ನದ ಪದಕ ವಿಜೇತರಾಗುವ ಅಗತ್ಯವಿಲ್ಲ”, “ನ್ಯಾಯಯುತವಾದ ಮತ್ತು ಸುರಕ್ಷಿತ ಆಟವಾಡಿ”, ‘ಮೊದಲು ಸಮ್ಮತಿ ಪಡೆಯಿರಿ ನಂತರ ಗೆಲುವು ಸಾಧಿಸಿ”; ”ಸಮ್ಮತಿಗೆ ಯೆಸ್ ಹೇಳಿ, ಎಸ್ಟಿಡಿಗಳಿಗೆ ಅಲ್ಲ.” ಮತ್ತೊಂದು ಪ್ಯಾಕೆಟ್ ಮೇಲೆ “ಗೆಲುವಿಗಿಂತ ಬಿಟ್ಟು ಬೇರೇನನ್ನೂ ಹಂಚಿಕೊಳ್ಳಬೇಡಿ. ಎಸ್ಟಿಡಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ” ಹಾಗೂ “ಪ್ರೀತಿಯ ಮೈದಾನದಲ್ಲಿ, ನ್ಯಾಯಯುತವಾಗಿ ಆಟವಾಡಿ. ಒಪ್ಪಿಗೆ ಪಡೆಯಿರಿ,” ಎಂದು ಬರೆಯಲಾಗಿದೆ.
ಶಾಂಪೆನ್ಗೆ ಇಲ್ಲ ಚಾನ್ಸ್
ಒಲಿಂಪಿಕ್ ಕ್ರೀಡಾಕೂಟಕ್ಜೆ ಕಾಂಡೋಮ್ಗಳು ಮರಳಿದ್ದರೂ, ಕ್ರೀಡಾಪಟುಗಳಿಗೆ ಶಾಂಪೇನ್ ಇನ್ನೂ ಮೆನುವಿನಿಂದ ಹೊರಗುಳಿದಿದೆ. ಕ್ರೀಡಾ ಗ್ರಾಮದ ನಿರ್ದೇಶಕ ಲಾರೆಂಟ್ ಮಿಚೌಡ್, “ಕ್ರೀಡಾಪಟುಗಳು ತುಂಬಾ ಉತ್ಸಾಹ ಮತ್ತು ಆರಾಮದಾಯಕವಾಗಿರುವ ಕೆಲವು ಸ್ಥಳಗಳನ್ನು ರಚಿಸಲು ನಾವು ಬಯಸಿದ್ದೇವೆ. ಕ್ರೀಡಾ ಗ್ರಾಮದಲ್ಲಿ ಶಾಂಪೇನ್ ಗೆ ಅನುಮತಿ ಇಲ್ಲ. ಆದರೆ ಅವರು ಬಯಸುವ ಎಲ್ಲಾ ಶಾಂಪೇನ್ ಅನ್ನು ಪ್ಯಾರಿಸ್ ನಲ್ಲಿಯೂ ಸೇವಿಸಬಹುದು. ನಾವು ವಿಶ್ವ ಆಹಾರ ಮೇಳದಲ್ಲಿ 350 ಮೀಟರ್ ಗಿಂತ ಹೆಚ್ಚು ಬಫೆ ವ್ಯವಸ್ಥೆ ಹೊಂದಿದ್ದೇವೆ.. ಕ್ರೀಡಾಪಟುಗಳು ಇಲ್ಲಿ ಕೆಲವು ಫ್ರೆಂಚ್ ಖಾದ್ಯಗಳನ್ನು ತಯಾರಿಸಲು ಇಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ.
2024 ರ ಪ್ಯಾರಿಸ್ ಕ್ರೀಡಾಕೂಟಕ್ಕಾಗಿ ಒಲಿಂಪಿಕ್ ಗ್ರಾಮವು ಅತ್ಯಂತ ದುಬಾರಿ ಯೋಜನೆಯಾಗಿದೆ ಎಂದು ವರದಿಯಾಗಿದೆ. 1,83,12 ಕೋಟಿ ರೂಪಾಯಿಯಲ್ಲಿ ನಿರ್ಮಿಸಲಾಗಿದೆ.