ಬೆಂಗಳೂರು: ಪ್ಯಾರಿಸ್ನಲ್ಲಿ ನಡೆಯಲಿರುವ 2024ನೇ ಆವೃತ್ತಿಯ (Paris Olympics 2024) ಒಲಿಂಪಿಕ್ಸ್ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ವಿಶ್ವದಾದ್ಯಂತದ ಕ್ರೀಡಾಪಟುಗಳು ತಮ್ಮ ಜೀವನದ ಗುರಿಯಾಗಿರುವ ಒಲಿಂಪಿಕ್ ಪದಕಗಳನ್ನು ಪಡೆಯುವ ಭರವಸೆಯೊಂದಿಗೆ ಪ್ರೇಮಿಗಳ ನಗರಕ್ಕೆ ಹೊರಟಿದ್ದಾರೆ. ಜುಲೈ 26 ರಂದು ಪ್ಯಾರಿಸ್ನಲ್ಲಿ ಉದ್ಘಾಟನಾ ಸಮಾರಂಭದೊಂದಿಗೆ ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, 27 ರಿಂದ ಕ್ರೀಡಾಕೂಟಗಳು ಪ್ರಾರಂಭವಾಗಲಿವೆ.
You heard @MichaelPhelps, welcome to Game 5 of the 2023 World Series!
— FOX Sports: MLB (@MLBONFOX) November 2, 2023
📺: FOX pic.twitter.com/2H21prmOUd
ಪದಕಗಳು ಎಲ್ಲಾ ಕ್ರೀಡಾಪಟುಗಳಿಗೆ ದೃಢವಾದ ನಂಬಿಕೆಯಾಗಿದೆ. ಈ ನಡುವೆ ಒಲಿಂಪಿಕ್ಸ್ ಇತಿಹಾಸದಲ್ಲಿ ಹೆಚ್ಚಿನ ಪದಕಗಳನ್ನು ಗಳಿಸಿದ ಕ್ರೀಡಾಪಟುಗಳು ಮತ್ತು ತಂಡಗಳನ್ನು ಯಾವುದು ಎಂಬುದನ್ನು ನೋಡೊಣ.
ಅತಿ ಹೆಚ್ಚು ಪದಕಗಳನ್ನು ಗೆದ್ದ ಕ್ರೀಡಾಪಟುಗಳು
ಈ ಪಟ್ಟಿಯಲ್ಲಿ ಅಮೆರಿಕದ ಖ್ಯಾತ ಈಜುಗಾರ ಮೈಕೆಲ್ ಫೆಲ್ಪ್ಸ್ ಅಗ್ರಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್ನಲ್ಲಿ 23 ಚಿನ್ನ ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದಿದ್ದಾರೆ. 2004 ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ, ಫೆಲ್ಪ್ಸ್ 6 ಚಿನ್ನದ ಪದಕಗಳು ಮತ್ತು 2 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು. 2008 ರ ಆವೃತ್ತಿಯಲ್ಲಿ, ಫೆಲ್ಪ್ಸ್ ಮಾರ್ಕ್ ಸ್ಪಿಟ್ಜ್ ಅವರ ದಾಖಲೆಯನ್ನು ಮುರಿದರು ಮತ್ತು 8 ಚಿನ್ನದ ಪದಕಗಳನ್ನು ಗಳಿಸಿದ್ದರು.
ಮಹಿಳಾ ಕ್ರೀಡಾಪಟುಗಳ ವಿಷಯಕ್ಕೆ ಬಂದಾಗ, ಸೋವಿಯತ್ ಒಕ್ಕೂಟದ ಲಾರಿಸಾ ಲ್ಯಾಟಿನಿನಾ ಅತಿ ಹೆಚ್ಚು ಪದಕಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ. ಆರ್ಟಿಸ್ಟಿಕ್ ಜಿಮ್ಯಾಸ್ಟಿಕ್ ಪಟು ಲ್ಯಾಟಿನಿನಾ 18 ಪದಕಗಳನ್ನು ಗೆದ್ದಿದ್ದಾರೆ. ಅದರಲ್ಲಿ 9 ಕ್ಕೆ ಚಿನ್ನ. ಚಿನ್ನದ ಪದಕ ಹಾಗೂ ಒಟ್ಟು ಪದಕಗಳ ವಿಚಾರಕ್ಕೆ ಬಂದಾಗ ಮಹಿಳಾ ಕ್ರೀಡಾಪಟುವಾಗಿ ಗರಿಷ್ಠ ಸಾಧನೆಯಾಗಿದೆ.
ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ
ಒಲಿಂಪಿಕ್ಸ್ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದವರ ಪಟ್ಟಿಯಲ್ಲಿ ಮಾರಿಟ್ ಜೋರ್ಗೆನ್ ಮೂರನೇ ಸ್ಥಾನದಲ್ಲಿದ್ದಾರೆ. ನಾರ್ವೆಯ ಕ್ರಾಸ್ ಕಂಟ್ರಿ ಸ್ಕೇಟಿಂಗ್ ಮಹಿಳಾ ಸ್ಪರ್ಧಿಯಾಗಿರುವ ಇವರು 15 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 8 ಚಿನ್ನದ ಪದಕಗಳು.
ಅಧಿಕ ಪದಕಗಳನ್ನು ಹೊಂದಿರುವ ರಾಷ್ಟ್ರ
ಹೆಚ್ಚಿನ ಪದಕಗಳನ್ನು ಹೊಂದಿರುವ ರಾಷ್ಟ್ರಗಳ ವಿಷಯಕ್ಕೆ ಬಂದಾಗ ಅಮೆರಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯಂತ ಪ್ರಬಲವಾಗಿದೆ. ಯುಎಸ್ಎ ಇದುವರೆಗೆ 2,522 ಪದಕಗಳನ್ನು ಗೆದ್ದಿದೆ, ಅದರಲ್ಲಿ 1,022 ಚಿನ್ನ. ಇದು ಒಲಿಂಪಿಕ್ಸ್ನಲ್ಲಿ ರಾಷ್ಟ್ರವೊಂದು ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ದಾಖಲೆಯಾಗಿದೆ. ಜರ್ಮನಿ 1083 ಪದಕಗಳು (351 ಚಿನ್ನ,371 ಬೆಳ್ಳಿ, 361 ಕಂಚು) ಎರಡನೇ ಸ್ಥಾನದಲ್ಲಿದೆ. ಯುನೈಟೆಡ್ ಕಿಂಗ್ಡಮ್ 965 (304 ಚಿನ್ನ, 329 ಬೆಳ್ಳಿ, 332 ಕಂಚು) ಮೂರನೇ ಸ್ಥಾನ ಹೊಂದಿದೆ. ಫ್ರಾನ್ಸ್ (910 ಪದಕ), ಇಟಲಿ (713 ಪದಕ), ಚೀನಾ (713 ಪದಕ) ನಂತರದಲ್ಲಿ ಸ್ಥಾನಗಳಲ್ಲಿವೆ.
ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ಕ್ರೀಡಾಪಟುಗಳು
ಫೆಲ್ಪ್ಸ್ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಮಹಿಳಾ ಅಥ್ಲೀಟ್ಗಳ ವಿಷಯಕ್ಕೆ ಬಂದರೆ, ಜರ್ಮನಿಯ ಈಜುಗಾರ್ತಿ ಕ್ರಿಸ್ಟಿನ್ ಒಟ್ಟೊ 1988ರ ಒಲಿಂಪಿಕ್ಸ್ನಲ್ಲಿ 6 ಅಂಕಗಳೊಂದಿಗೆ ದಾಖಲೆಯನ್ನು ಹೊಂದಿದ್ದಾರೆ.
1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ 83 ಚಿನ್ನದ ಪದಕಗಳನ್ನು ಗೆದ್ದಿದ್ದ ಅಮೆರಿಕ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ದಾಖಲೆ ತನ್ನದಾಗಿಸಿಕೊಂಡಿದೆ.