Paris Olympics 2024 : ಒಲಿಂಪಿಕ್ಸ್​ನಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆದ ಅಥ್ಲೀಟ್​ ಯಾರು? ಇಲ್ಲಿದೆ ಈ ಶ್ರೇಷ್ಠ ಕ್ರೀಡಾಪಟುವಿನ ವಿವರ - Vistara News

ಪ್ರಮುಖ ಸುದ್ದಿ

Paris Olympics 2024 : ಒಲಿಂಪಿಕ್ಸ್​ನಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆದ ಅಥ್ಲೀಟ್​ ಯಾರು? ಇಲ್ಲಿದೆ ಈ ಶ್ರೇಷ್ಠ ಕ್ರೀಡಾಪಟುವಿನ ವಿವರ

Paris Olympics 2024 : ಈ ಪಟ್ಟಿಯಲ್ಲಿ ಅಮೆರಿಕದ ಖ್ಯಾತ ಈಜುಗಾರ ಮೈಕೆಲ್ ಫೆಲ್ಪ್ಸ್ ಅಗ್ರಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್​ನಲ್ಲಿ 23 ಚಿನ್ನ ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದಿದ್ದಾರೆ. 2004 ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ, ಫೆಲ್ಪ್ಸ್ 6 ಚಿನ್ನದ ಪದಕಗಳು ಮತ್ತು 2 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು. 2008 ರ ಆವೃತ್ತಿಯಲ್ಲಿ, ಫೆಲ್ಪ್ಸ್ ಮಾರ್ಕ್ ಸ್ಪಿಟ್ಜ್ ಅವರ ದಾಖಲೆಯನ್ನು ಮುರಿದರು ಮತ್ತು 8 ಚಿನ್ನದ ಪದಕಗಳನ್ನು ಗಳಿಸಿದ್ದರು.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರಿಸ್​​ನಲ್ಲಿ ನಡೆಯಲಿರುವ 2024ನೇ ಆವೃತ್ತಿಯ (Paris Olympics 2024) ಒಲಿಂಪಿಕ್ಸ್​ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ವಿಶ್ವದಾದ್ಯಂತದ ಕ್ರೀಡಾಪಟುಗಳು ತಮ್ಮ ಜೀವನದ ಗುರಿಯಾಗಿರುವ ಒಲಿಂಪಿಕ್​​ ಪದಕಗಳನ್ನು ಪಡೆಯುವ ಭರವಸೆಯೊಂದಿಗೆ ಪ್ರೇಮಿಗಳ ನಗರಕ್ಕೆ ಹೊರಟಿದ್ದಾರೆ. ಜುಲೈ 26 ರಂದು ಪ್ಯಾರಿಸ್​​ನಲ್ಲಿ ಉದ್ಘಾಟನಾ ಸಮಾರಂಭದೊಂದಿಗೆ ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, 27 ರಿಂದ ಕ್ರೀಡಾಕೂಟಗಳು ಪ್ರಾರಂಭವಾಗಲಿವೆ.

ಪದಕಗಳು ಎಲ್ಲಾ ಕ್ರೀಡಾಪಟುಗಳಿಗೆ ದೃಢವಾದ ನಂಬಿಕೆಯಾಗಿದೆ. ಈ ನಡುವೆ ಒಲಿಂಪಿಕ್ಸ್​ ಇತಿಹಾಸದಲ್ಲಿ ​​ ಹೆಚ್ಚಿನ ಪದಕಗಳನ್ನು ಗಳಿಸಿದ ಕ್ರೀಡಾಪಟುಗಳು ಮತ್ತು ತಂಡಗಳನ್ನು ಯಾವುದು ಎಂಬುದನ್ನು ನೋಡೊಣ.

ಅತಿ ಹೆಚ್ಚು ಪದಕಗಳನ್ನು ಗೆದ್ದ ಕ್ರೀಡಾಪಟುಗಳು

ಈ ಪಟ್ಟಿಯಲ್ಲಿ ಅಮೆರಿಕದ ಖ್ಯಾತ ಈಜುಗಾರ ಮೈಕೆಲ್ ಫೆಲ್ಪ್ಸ್ ಅಗ್ರಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್​ನಲ್ಲಿ 23 ಚಿನ್ನ ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದಿದ್ದಾರೆ. 2004 ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ, ಫೆಲ್ಪ್ಸ್ 6 ಚಿನ್ನದ ಪದಕಗಳು ಮತ್ತು 2 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು. 2008 ರ ಆವೃತ್ತಿಯಲ್ಲಿ, ಫೆಲ್ಪ್ಸ್ ಮಾರ್ಕ್ ಸ್ಪಿಟ್ಜ್ ಅವರ ದಾಖಲೆಯನ್ನು ಮುರಿದರು ಮತ್ತು 8 ಚಿನ್ನದ ಪದಕಗಳನ್ನು ಗಳಿಸಿದ್ದರು.

ಮಹಿಳಾ ಕ್ರೀಡಾಪಟುಗಳ ವಿಷಯಕ್ಕೆ ಬಂದಾಗ, ಸೋವಿಯತ್ ಒಕ್ಕೂಟದ ಲಾರಿಸಾ ಲ್ಯಾಟಿನಿನಾ ಅತಿ ಹೆಚ್ಚು ಪದಕಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ. ಆರ್ಟಿಸ್ಟಿಕ್​ ಜಿಮ್ಯಾಸ್ಟಿಕ್​ ಪಟು ಲ್ಯಾಟಿನಿನಾ 18 ಪದಕಗಳನ್ನು ಗೆದ್ದಿದ್ದಾರೆ. ಅದರಲ್ಲಿ 9 ಕ್ಕೆ ಚಿನ್ನ. ಚಿನ್ನದ ಪದಕ ಹಾಗೂ ಒಟ್ಟು ಪದಕಗಳ ವಿಚಾರಕ್ಕೆ ಬಂದಾಗ ಮಹಿಳಾ ಕ್ರೀಡಾಪಟುವಾಗಿ ಗರಿಷ್ಠ ಸಾಧನೆಯಾಗಿದೆ.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ

ಒಲಿಂಪಿಕ್ಸ್​​ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದವರ ಪಟ್ಟಿಯಲ್ಲಿ ಮಾರಿಟ್ ಜೋರ್ಗೆನ್ ಮೂರನೇ ಸ್ಥಾನದಲ್ಲಿದ್ದಾರೆ. ನಾರ್ವೆಯ ಕ್ರಾಸ್ ಕಂಟ್ರಿ ಸ್ಕೇಟಿಂಗ್​ ಮಹಿಳಾ ಸ್ಪರ್ಧಿಯಾಗಿರುವ ಇವರು 15 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 8 ಚಿನ್ನದ ಪದಕಗಳು.

ಅಧಿಕ ಪದಕಗಳನ್ನು ಹೊಂದಿರುವ ರಾಷ್ಟ್ರ

ಹೆಚ್ಚಿನ ಪದಕಗಳನ್ನು ಹೊಂದಿರುವ ರಾಷ್ಟ್ರಗಳ ವಿಷಯಕ್ಕೆ ಬಂದಾಗ ಅಮೆರಿಕ ಒಲಿಂಪಿಕ್ಸ್​ ಇತಿಹಾಸದಲ್ಲಿ ಅತ್ಯಂತ ಪ್ರಬಲವಾಗಿದೆ. ಯುಎಸ್ಎ ಇದುವರೆಗೆ 2,522 ಪದಕಗಳನ್ನು ಗೆದ್ದಿದೆ, ಅದರಲ್ಲಿ 1,022 ಚಿನ್ನ. ಇದು ಒಲಿಂಪಿಕ್ಸ್​​ನಲ್ಲಿ ರಾಷ್ಟ್ರವೊಂದು ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ದಾಖಲೆಯಾಗಿದೆ. ಜರ್ಮನಿ 1083 ಪದಕಗಳು (351 ಚಿನ್ನ,371 ಬೆಳ್ಳಿ, 361 ಕಂಚು) ಎರಡನೇ ಸ್ಥಾನದಲ್ಲಿದೆ. ಯುನೈಟೆಡ್ ಕಿಂಗ್​ಡಮ್​ 965 (304 ಚಿನ್ನ, 329 ಬೆಳ್ಳಿ, 332 ಕಂಚು) ಮೂರನೇ ಸ್ಥಾನ ಹೊಂದಿದೆ. ಫ್ರಾನ್ಸ್​ (910 ಪದಕ), ಇಟಲಿ (713 ಪದಕ), ಚೀನಾ (713 ಪದಕ) ನಂತರದಲ್ಲಿ ಸ್ಥಾನಗಳಲ್ಲಿವೆ.

ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ಕ್ರೀಡಾಪಟುಗಳು

ಫೆಲ್ಪ್ಸ್ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಮಹಿಳಾ ಅಥ್ಲೀಟ್​​ಗಳ ವಿಷಯಕ್ಕೆ ಬಂದರೆ, ಜರ್ಮನಿಯ ಈಜುಗಾರ್ತಿ ಕ್ರಿಸ್ಟಿನ್ ಒಟ್ಟೊ 1988ರ ಒಲಿಂಪಿಕ್ಸ್​ನಲ್ಲಿ 6 ಅಂಕಗಳೊಂದಿಗೆ ದಾಖಲೆಯನ್ನು ಹೊಂದಿದ್ದಾರೆ.

1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​​ನಲ್ಲಿ 83 ಚಿನ್ನದ ಪದಕಗಳನ್ನು ಗೆದ್ದಿದ್ದ ಅಮೆರಿಕ, ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ದಾಖಲೆ ತನ್ನದಾಗಿಸಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Vande Mataram: ಸಂಸತ್ತಿನಲ್ಲಿ ವಂದೇ ಮಾತರಂ, ಥ್ಯಾಂಕ್ಸ್‌ ಎಂದು ಹೇಳುವಂತಿಲ್ಲ; ಏಕಿಂಥ ಆದೇಶ?

Vande Mataram: ಸದನದ ಕಾರ್ಯಕಲಾಪಗಳ ಶಿಸ್ತು, ಪ್ರಕ್ರಿಯೆ ಹಾಗೂ ಶಿಷ್ಟಾಚಾರಗಳನ್ನು ಪಾಲಿಸುವ ದೃಷ್ಟಿಯಿಂದ ಹಲವು ಘೋಷಣೆಗಳನ್ನು ಸದಸ್ಯರು ಕೂಗಬಾರದು. ಥ್ಯಾಂಕ್ಸ್‌, ಥ್ಯಾಂಕ್‌ ಯು, ಜೈ ಹಿಂದ್‌, ವಂದೇ ಮಾತರಂ ಸೇರಿ ಯಾವುದೇ ಘೋಷಣೆಗಳನ್ನು ಕೂಗಬಾರದು ಎಂದು ಸದಸ್ಯರಿಗೆ ಸೂಚಿಸಲಾಗಿದೆ.

VISTARANEWS.COM


on

Vande Mataram
Koo

ನವದೆಹಲಿ: ಜುಲೈ 22ರಿಂದ ಆಗಸ್ಟ್‌ 12ರವರೆಗೆ ಸಂಸತ್‌ ಬಜೆಟ್‌ ಅಧಿವೇಶನ (Parliament Session 2024) ನಡೆಯಲಿದೆ. ಜುಲೈ 23ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರವು ಬಜೆಟ್‌ ಮೂಲಕ ಜನರ ಗಮನ ಸೆಳೆಯಲು ಸಜ್ಜಾಗಿದ್ದರೆ, ಬೆಲೆಯೇರಿಕೆ, ನೀಟ್‌ ಹಗರಣ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ. ಇದರ ಬೆನ್ನಲ್ಲೇ, ಅಧಿವೇಶನದ ವೇಳೆ ವಂದೇ ಮಾತರಂ, ಜೈ ಹಿಂದ್‌ ಸೇರಿ ಹಲವು ಘೋಷಣೆಗಳನ್ನು ಕೂಗದಂತೆ ಉಭಯ ಸದನಗಳ ಸದಸ್ಯರಿಗೆ ಸೂಚಿಸಲಾಗಿದೆ.

ಘೋಷಣೆಗಳನ್ನು ಕೂಗಬಾರದು ಎಂದು ರಾಜ್ಯಸಭೆಯ ಸಭಾಧ್ಯಕ್ಷರು ಜುಲೈ 15ರಂದೇ ಬುಲೆಟಿನ್‌ ಹೊರಡಿಸಿದ್ದಾರೆ. “ಸದನದ ಕಾರ್ಯಕಲಾಪಗಳ ಶಿಸ್ತು, ಪ್ರಕ್ರಿಯೆ ಹಾಗೂ ಶಿಷ್ಟಾಚಾರಗಳನ್ನು ಪಾಲಿಸುವ ದೃಷ್ಟಿಯಿಂದ ಹಲವು ಘೋಷಣೆಗಳನ್ನು ಸದಸ್ಯರು ಕೂಗಬಾರದು. ಥ್ಯಾಂಕ್ಸ್‌, ಥ್ಯಾಂಕ್‌ ಯು, ಜೈ ಹಿಂದ್‌, ವಂದೇ ಮಾತರಂ ಸೇರಿ ಯಾವುದೇ ಘೋಷಣೆಗಳನ್ನು ಕೂಗಬಾರದು. ಅಧಿವೇಶನ ನಡೆಯುವಾಗ ಸದನದ ಒಳಗೆ ಹಾಗೂ ಸಂಸತ್‌ ಆವರಣದಲ್ಲಿಯೂ ಘೋಷಣೆಗಳನ್ನು ಕೂಗುವಂತಿಲ್ಲ” ಎಂದು ಸದಸ್ಯರಿಗೆ ಸೂಚಿಸಲಾಗಿದೆ.

Parliament Security

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಇದೇ ತಿಂಗಳು ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ಹಾಗೆಯೇ, ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಸೇರಿ ಹಲವು ನಿರೀಕ್ಷೆಗಳನ್ನು ಜನ ಇಟ್ಟುಕೊಂಡಿದ್ದಾರೆ. “ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ 2.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಇದ್ದು, ಈ ಮೊತ್ತವನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಇವುಗಳ ಜತೆಗೆ ನೌಕರರ ಮನೆ ಬಾಡಿಗೆ ಭತ್ಯೆ (HRA) ಹಾಗೂ 80 ಟಿಟಿಎ ಅಡಿಯಲ್ಲಿ ಮೊತ್ತವನ್ನು 10 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಏರಿಕೆ ಮಾಡುವುದು ಸೇರಿ ಹಲವು ನಿರೀಕ್ಷೆಗಳಿವೆ.

ಇದನ್ನೂ ಓದಿ: Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Continue Reading

ಕರ್ನಾಟಕ

Karnataka Rain: ಶಿರೂರು ಗುಡ್ಡ ಕುಸಿತದ ಸ್ಥಳ ವೀಕ್ಷಿಸಿದ ಸಿಎಂ; NDRF-SDRF ತಂಡಗಳ ಕಾರ್ಯಕ್ಕೆ ಮೆಚ್ಚುಗೆ

Karnataka Rain: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಸ್ಥಳ ಹಾಗೂ ಕಡಲ್ಕೊರೆತದ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.

VISTARANEWS.COM


on

Karnataka Rain
Koo

ಶಿರೂರು: ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಸ್ಥಳದಲ್ಲಿ (Karnataka Rain) ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿರುವ NDRF, SDRF ತಂಡಗಳ ಸಿಬ್ಬಂದಿಯ ಕಾರ್ಯಕ್ಷಮತೆಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿರೂರು ಬಳಿ ಗುಡ್ಡ ಕುಸಿತ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಕುಸಿತದ ಗುಡ್ಡ-ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದೆ ಎಂದು ಮುಖ್ಯಮಂತ್ರಿಗಳು ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.

ನಾಲ್ಕು ತಂಡಗಳು ಗುಡ್ಡ ಕುಸಿತದ ಕೆಳಗೆ ಸಿಲುಕಿರಬಹುದಾದವರ ಪತ್ತೆಗೆ ರಾಡಾರ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ನಾಲ್ಕು ತಂಡಗಳು ಮತ್ತೊಂದು ಬದಿಯ ನದಿಯೊಳಗೆ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಹಲವು ದಿನಗಳಿಂದ ತಾಲ್ಲೂಕಿನಲ್ಲೇ ಮೊಕ್ಕಾಂ ಹೂಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡರು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಇದನ್ನೂ ಓದಿ | Karnataka Rain : ಭಾರಿ ಮಳೆಗೆ ಮುಂದುವರಿದ ಸಾವು-ನೋವು; ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ಕಾರ್ಯಾಚರಣೆ ನಡೆಯುತ್ತಿರುವ ಜಾಗ ಮತ್ತು ಮಣ್ಣು ತುಂಬಿರುವ ರಸ್ತೆಯೂ ಕುಸಿಯುವ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಈ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಎಚ್ಚರಿಸಿದರು.

ಗುಡ್ಡ ಕುಸಿತದ ಸ್ಥಳ ಒಂದು ರೀತಿ ದ್ವೀಪದಂತಾಗಿದೆ. ಸುತ್ತಲೂ ಕಾಳಿ ನದಿ ಭೋರ್ಗರೆದು ಹರಿಯುತ್ತಿದೆ. ನಡುವೆ ಅರ್ಧ ಕುಸಿದ ಗುಡ್ಡ ನಿಂತಿದೆ. ಹೀಗಾಗಿ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು, ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ಮಾಡಬೇಕು ಎಂದ ಸಿಎಂ, ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಉನ್ನತ ಮಟ್ಟದ ತಜ್ಞರಿಂದ ಮಾಹಿತಿ ಪಡೆದು ತಂತ್ರಜ್ಞಾನದ ನೆರವು ಪಡೆಯುವಂತೆ ಸೂಚಿಸಿದರು.

ಅಂಕೋಲಾದ ಕಡಲ್ಕೊರೆತದ ಸ್ಥಳಕ್ಕೆ ಭೇಟಿ

ಗುಡ್ಡ ಕುಸಿತ ಸ್ಥಳ ವೀಕ್ಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕೋಲಾದ ಕಡಲ್ಕೊರೆತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಸತೀಶ್ ಸೈಲ್ ಮತ್ತು ಅಧಿಕಾರಿಗಳು ಜೊತೆಗಿದ್ದರು.

ಪತ್ರಕರ್ತರಿಗೆ ರೇನ್ ಕೋಟ್ ಕೊಟ್ಟಿದ್ದೀರಾ?

ಒಂದೇ ಸಮನೆ ಸುರಿಯುತ್ತಿದ್ದ ಭೀಕರ ಮಳೆ ನಡುವೆ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತರು ಮತ್ತು ಕ್ಯಾಮೆರಾಮನ್‌ಗಳನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಪತ್ರಕರ್ತರಿಗೆಲ್ಲಾ ರೇನ್ ಕೋಟ್ ಮತ್ತು ರಬ್ಬರ್ ಶೂ ಕೊಟ್ಟಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಮುಖ್ಯಮಂತ್ರಿಗಳಿಂದ ಈ ಪ್ರಶ್ನೆ ನಿರೀಕ್ಷಿಸಿರದ ಅಧಿಕಾರಿಗಳು ತಬ್ಬಿಬ್ಬಾದರು.

ಯಾರೇ ತಪ್ಪು ಮಾಡಿದ್ರೂ ಕ್ರಮ: ಸಿಎಂ ಎಚ್ಚರಿಕೆ

ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತದಲ್ಲಿ 10 ಜನರು ಕಾಣೆಯಾಗಿದ್ದಾರೆ. 7 ಮೃತದೇಹ ದೊರಕಿದ್ದು, ಇನ್ನೂ 3 ಮೃತದೇಹ ದೊರಕಬೇಕಿದೆ. ಎಸ್‌ಡಿಆರ್‌ಎಫ್‌ 44, ಎನ್‌ಡಿಆರ್‌ಎಫ್‌ 24, ಸೇನೆಯ 44 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ವಾಹನಗಳು ಕೂಡ ಸ್ಥಳ ಕಾಣೆಯಾಗಿವೆ. ಟೀ ಅಂಗಡಿಯಿಟ್ಟು ವಾಸವಾಗಿದ್ದವರು ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತದವರಿಗೆ ಹಾಗೂ ಶಾಸರಿಗೆ ರಕ್ಷಣಾ ಕಾರ್ಯಾಚರಣೆ ತ್ವರಿತ ಮಾಡಲು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅಧೀವೇಶನದ ಕಾರಣ ಬೇಗ ಬರಲಾಗಲಿಲ್ಲ, ಆದರೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತ್ವರಿತಗತಿ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ. ಈಗಾಗಲೇ ಮೃತರ ಕುಟುಂಬಕ್ಕೆ 5 ಲಕ್ಷ ರೂ. ನೀಡಲಾಗಿದೆ. ಯಾವುದೇ ಕುಟುಂಬದ ಸದಸ್ಯದ ಮೃತದೇಹ ದೊರಕಿದರೆ ಅವರಿಗೂ ಪರಿಹಾರ ನೀಡಲಾಗುತ್ತದೆ. ಗುಡ್ಡ ಕುಸಿತವಾದ ನದಿ ಬದಿಯಲ್ಲೂ ಹುಡುಕಾಟ ನಡೆಸಲು ತಿಳಿಸಿದ್ದೇನೆ ಎಂದರು.

ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಸಿಎಂ, ರಸ್ತೆ ಪೂರ್ಣ ಮಾಡದಿದ್ದರೂ ಟೋಲ್ ಕಲೆಕ್ಷನ್ ಮಾಡಲಾಗುತ್ತಿದೆ. ರೆಸ್ಕ್ಯೂ ಕಾರ್ಯಾಚರಣೆ ಯಾವುದೇ‌ ರೀತಿಯಲ್ಲಿ ತಡವಾಗುತ್ತಿಲ್ಲ. ಬಹಳ ವರ್ಷಗಳಿಂದ ಲ್ಯಾಂಡ್ ಸ್ಲೈಡ್ ಆಗಿಲ್ಲ, ಈಗ ಆಗಿದೆ. ಘಟನೆ ಸಂಬಂಧಿಸಿ ನಾವು ಯಾವುದೇ ರಾಜಕಾರಣ ಮಾಡಲ್ಲ. ಬಿಜೆಪಿ ಮೇಲೆ ಆರೋಪ ಮಾಡೋ ಮಣ್ಣೆರೆಚಾಟ ಮಾಡಲ್ಲ. ನಾವು ಕೊಡೋ ಪರಿಹಾರದಿಂದ ಜೀವ ವಾಪಸ್ ಬರಲ್ಲ, ಇದು ಪ್ರಾಕೃತಿಕ ಘಟನೆ. ಮೃತದೇಹಗಳನ್ನು ಹುಡುಕುವ ಕೆಲಸ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ | Karnataka Rain : ಭಾರಿ ಮಳೆ ಎಫೆಕ್ಟ್‌; ಬೆಳಗಾವಿಯಲ್ಲಿ 17 ಸಂಪರ್ಕ ಸೇತುವೆಗಳು ಜಲಾವೃತ

ಈ ವೇಳೆ ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಸತೀಶ್ ಸೈಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನೀಶ್ ಸೇರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.‌

Continue Reading

ಪ್ರಮುಖ ಸುದ್ದಿ

Women’s Asia Cup : ಯುಎಇ ವಿರುದ್ಧ ಭಾರತದ ವನಿತೆಯರಿಗೆ ಭರ್ಜರಿ 78 ರನ್ ವಿಜಯ

Women’s Asia Cup : ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 201 ರನ್ ಬಾರಿಸಿತು. ಇದು ಭಾರತ ಮಹಿಳೆಯರ ಕ್ರಿಕೆಟ್ ತಂಡದ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಪ್ರತಿಯಾಗಿ ಬ್ಯಾಟ್ ಮಾಡಿದ ಯುಎಇ ವನಿತೆಯರು ತಮ್ಮ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 123 ರನ್​ ಬಾರಿಸಿ ಹೀನಾಯವಾಗಿ ಸೋಲೊಪ್ಪಿಕೊಂಡರು.

VISTARANEWS.COM


on

Women's Asia Cup
Koo

ಡಂಬುಲ್ಲಾ: ಭಾರತದ ಮಹಿಳೆಯರ ಕ್ರಿಕೆಟ್ ತಂಡ ಏಷ್ಯಾ ಕಪ್​ನಲ್ಲಿ (Women’s Asia Cup) ತನ್ನ ಎರಡನೇ ಗೆಲುವು ಸಾಧಿಸಿದೆ. ಈ ಮೂಲಕ ಸೆಮೀಸ್​ ಪ್ರವೇಶವನ್ನು ಸುಲಭಗೊಳಿಸಿದೆ. ಯುಎಇ (UAE Women’s Cricket Team) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ 78 ರನ್​ ಗೆಲುವು ಸಾಧಿಸಿ ಗುಂಪು ಹಂತದಲ್ಲಿ ಒಟ್ಟು 4 ಅಂಕಗಳನ್ನು ಗಳಿಸಿದೆ. ಭಾರತ ತಂಡದ ಆಟಗಾರರು ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪಾರಮ್ಯ ಸಾಧಿಸಿ ತನ್ನ ಅಜೇಯ ಓಟ ಮುಂದುವರಿಸಿದೆ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಮತ್ತೊಂದು ಸ್ಮರಣೀಯ ವಿಜಯವನ್ನು ತನ್ನದಾಗಿಸಿಕೊಂಡಿತು.

ಇಲ್ಲಿನ ರಣಗಿರಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆಯಿತು. ಅಂತೆಯೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 201 ರನ್ ಬಾರಿಸಿತು. ಇದು ಭಾರತ ಮಹಿಳೆಯರ ಕ್ರಿಕೆಟ್ ತಂಡದ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಪ್ರತಿಯಾಗಿ ಬ್ಯಾಟ್ ಮಾಡಿದ ಯುಎಇ ವನಿತೆಯರು ತಮ್ಮ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 123 ರನ್​ ಬಾರಿಸಿ ಹೀನಾಯವಾಗಿ ಸೋಲೊಪ್ಪಿಕೊಂಡರು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಶಫಾಲಿ ವರ್ಮಾ 18 ಎಸೆತಕ್ಕೆ 37 ರನ್ ಬಾರಿಸಿದರೆ ಸ್ಮೃತಿ ಮಂಧಾನಾ 9 ಎಸೆತಕ್ಕೆ 13 ರನ್ ಗಳಿಸಿದರು. ಆದರೆ, ಸ್ಮೃತಿ ಬೇಗ ನಿರ್ಗಮಿಸಿದರು. ಈ ವೇಳೆ ಭಾರತದ ಸ್ಕೋರ್​ 23. ಆದರೆ, ನಂತರ ಬಂದ ದಯಾಳನ್ ಹೇಮಲತಾ 4 ಎಸೆತಗಳನ್ನು ಎದುರಿಸಿ 2 ರನ್ ಬಾರಿಸುವ ಮೂಲಕ ನಿರಾಸೆ ಮೂಡಿಸಿದರು. 52 ರನ್​ಗೆ 2 ವಿಕೆಟ್​ ಕಳೆದುಕೊಂಡ ಹೊರತಾಗಿಯೂ ಭಾರತದ ರನ್​ ಗಳಿಕೆ ವೇಗ ಕಡಿಮೆ ಆಗಲಿಲ್ಲ. ನಾಯಕಿ ಹರ್ಮನ್​ಪ್ರೀತ್ ಕೌರ್​ (66 ರನ್​) ಅರ್ಧ ಶತಕ ಬಾರಿಸಿದರು. ತಾವೆದುರಿಸಿದ 47 ಎಸೆತಗಳಲ್ಲಿ 7 ಫೋರ್ ಹಾಗೂ 1 ಸಿಕ್ಸರ್ ಬಾರಿಸಿದರು. ಹೀಗಾಗಿ ನಾಲ್ಕನೇ ವಿಕೆಟ್ ಪತನಗೊಳ್ಳುವಾಗ ಭಾರತ 104 ರನ್ ಬಾರಿಸಿತು.

ಜೆಮಿಮಾ ರೋಡ್ರಿಗಸ್​ 14 ರನ್​ಗೆ ಸೀಮಿತಗೊಂಡರೆ ಕೊನೆಯಲ್ಲಿ ವಿಕೆಟ್​ ಕೀಪರ್​ ರಿಚಾ ಘೋಷ್​ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 29 ಎಸೆತಗಳನ್ನು ಎದುರಿಸಿದ ಅವರು 12 ಫೋರ್ ಹಾಗೂ 1 ಸಿಕ್ಸರ್ ಮೂಲಕ 64 ರನ್ ಬಾರಿಸಿದರು. ಇವರ ಬ್ಯಾಟಿಂಗ್​ ವೇಗಕ್ಕೆ ಯುಎಇ ಬೌಲರ್​ಗಳು ಸಂಪುರ್ಣವಾಗಿ ಮಂಕಾದರು. ಅಲ್ಲದೆ ಭಾರತ ತಂಡಕ್ಕೆ ದಾಖಲೆಯ 200 ರನ್​ಗಳ ಗುರಿ ದಾಟಲು ನೆರವಾದರು.

ಬೌಲರ್​ಗಳ ಪಾರಮ್ಯ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಮುಂದಾದ ಯುಎಇ ತಂಡವೂ ವೇಗದ ಆಟಕ್ಕೆ ಮೊರೆ ಹೋಗುವ ಪ್ರಯತ್ನ ಮಾಡಿತು. ಆದರೆ, ಭಾರತೀಯ ಬೌಲರ್​ಗಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಆರಂಭಿಕ ಬ್ಯಾಟರ್​ ಇಶ್ ಒಜಾ 3 ರನ್ ಬಾರಿಸಿದ ಹೊರತಾಗಿಯೂ ತೀರ್ಥ ಸತೀಶ್​ (4), ರಿನಿತಾ ರಜಿತ್​ (7 ರನ್​), ಸಮೈರಾ (5 ರನ್​) ಬೇಗನೆ ವಿಕೆಟ್ ಒಪ್ಪಿಸಿದರು. 36ಕ್ಕೆ 3 ವಿಕೆಟ್​ ನಷ್ಟ ಮಾಡಿಕೊಂಡರ ಯುಎಇ ಸಂಕಷ್ಟಕ್ಕೆ ಒಳಗಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕವಿಶಾ ಎಗೋಡ್ಗೆ 32 ಎಸೆತಕ್ಕೆ 40 ರನ್ ಬಾರಿಸಿ ಮಿಂಚಿದರು. ಆದರೆ, ಉಳಿದವರಿಂದ ಹೆಚ್ಚಿನ ನೆರವು ಸಿಗದ ಕಾರಣ ಅವರಿಗೆ ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆದ ಅಥ್ಲೀಟ್​ ಯಾರು? ಇಲ್ಲಿದೆ ಈ ಶ್ರೇಷ್ಠ ಕ್ರೀಡಾಪಟುವಿನ ವಿವರ

ಎ ಗುಂಪಿನಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ಪಂದ್ಯ ಗೆದ್ದಿರುವ ಕಾರಣ ಭಾರತ ಬಹುತೇಕ ಸೆಮಿಫೈನಲ್ ತಲುಪಿದೆ. ಭಾರತ ಹಾಲಿ ಚಾಂಪಿಯನ್ ತಂಡವಾಗಿದ್ದು ಕಪ್ ಉಳಿಸಲು ಯತ್ನಿಸಲಿದೆ.

Continue Reading

ಅಂಕಣ

Guru Purnima 2024: ಗುರು ಎಂದರೆ ವ್ಯಕ್ತಿಯಲ್ಲ, ಅದ್ಭುತವಾದ ಶಕ್ತಿ!

Guru Purnima 2024: ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು, ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು, ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಹೀಗೆ ಗುರು-ಶಿಷ್ಯರಿಗೆ ಪರಂಪರೆಗಳ ಐತಿಹ್ಯವಿದೆ.

VISTARANEWS.COM


on

Guru Purnima 2024
Koo

ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
(ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)

ಆಷಾಢ ಮಾಸ ಶುಕ್ಲ ಪಕ್ಷದಲ್ಲಿ ಬರುವ “ಕಡ್ಲಿಗರ ಹುಣ್ಣಿಮೆ”ಯನ್ನು ನಾವು ಆಚರಿಸ್ಪಡುವ, ಶ್ರೇಷ್ಠವಾದ ಪರ್ವವೆಂದರೆ ಅದು “ಗುರು ಪೂರ್ಣಿಮೆ”.
ಈ ದಿನ ನಾವು ನಂಬಿದ ನಮ್ಮಲ್ಲಿಯ ಅಂಧಕಾರವನ್ನು ತೊಲಗಿಸಿ ಜ್ಞಾನ ಸಾಕ್ಷಾತ್ಕಾರ ಮಾಡಿಸಿದ ನಮ್ಮ ಗುರುಗಳಿಗೆ ವಂದನೆ (Guru Purnima 2024) ಸಲ್ಲಿಸುವ ದಿನ. ಆ ಗುರುವನ್ನು ನೆನೆದು ಅವರ ಮಹತ್ವವನ್ನು ಸಾರುವ ದಿನ. ಗುರುಗಳು ನಮಗೆ ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ ದಿಕ್ಸೂಚಿ,ದಾರಿದೀಪ. ಪರಮಾತ್ಮನ, ಪರಮಾರ್ಥದ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮಜ್ಯೋತಿಯನ್ನು ಜ್ಞಾನವೆಂಬ ತೈಲ ಹಾಕಿ ಬೆಳುಗುವಂತೆ ಮಾಡಿ ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಜತೆಗೆ ಲೌಕಿಕ ಪ್ರಪಂಚದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟವ ತನಕ ಸಹಾಯ ಮಾಡುವವನೇ “ ಶ್ರೇಷ್ಠಗುರು”.

ಅಲೆದು ಅಲೆದು ಹುಡಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವುಗಳೆಲ್ಲರೂ ಆ ಗುರುವಿನ ಮುಖಾಂತರವೇ ಪರಮಾತ್ಮನ ಅರಿವು, ಪ್ರಪಂಚದ ಅರಿವು, ಅರಿಯಬೇಕಾಗಿರುವುದರಿಂದ, ನಾವು ಪ್ರತಿ ಆಷಾಢ ಮಾಸದ ಈ ಪೌರ್ಣಿಮೆಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ನಮ್ಮ ಅಂತರಂಗದಲ್ಲೇ ಪ್ರತಿಷ್ಠಾಪಿಸಿ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲ ಎಂದು ಅಂತಹ ಗುರುವಿಗೆ ಶರಣಾದಾಗ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಫಲಪ್ರದವಾಗುತ್ತದೆ.

ಉಪನಿಷತ್ತಿನಲ್ಲಿ ಗುರು

ಉಪನಿಷತ್ತಿನಲ್ಲಿ ಗುರು ಎಂಬುದನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗು” ಎಂದರೆ ಅಂಧಕಾರವೆಂದು “ರು” ಎಂದರೆ ದೂರೀಕರಿಸುವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಯ ಕಡೆಗೆ ನಡೆಸುವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ನಿಜವಾದ ಗುರು ಎಂದು ಅರ್ಥೈಸಬಹುದೇನೋ ಎಂಬ ಅಭಿಪ್ರಾಯ.

ಆದಿಗುರು ಶ್ರೀ ಶಂಕರಭಗವತ್ಪಾದಚಾರ್ಯರು ಗುರು ಮಹಿಮೆ ಕುರಿತು ಹೀಗೆ ಸ್ತೋತ್ರವನ್ನು ಹೇಳಿದ್ದಾರೆ:

ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||

ಗುರುವು ತ್ರೀಮೂರ್ತಿ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ. ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಲ್ಪಟಿದೆ :

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ।
ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ॥
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ।
ಚಕ್ಷುರುನ್ಮೀಲಿತಂ ಯೇನ
ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳ್ಗಿಗೆ ಬೇಕಾದ ಸೋಪಾನವನ್ನು ಹತ್ತಿಸುವ ಹಾಗೂ ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.
ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ..

ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ।
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ॥

ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಯಾವುದೂ ಇಲ್ಲ. ಜ್ಞಾನವೆಂಬ ದಾರಿದೀಪವಾಗಿರುವ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ. ಶಾಶ್ವತವಾದ ಆನಂದವನ್ನು ಪಡೆಯುವುದು ಆ ಸದ್ಗುರುವಿನಿಂದಲೆ ಮಾತ್ರವೇ ಸಾಧ್ಯ ಎಂದು ಶ್ರೀ ಶಂಕರಾಚಾರ್ಯರು ತಮ್ಮ “ಗುರ್ವಷ್ಟಕಮ್” ಎಂಬ ಸ್ತೂತ್ರದಲ್ಲಿ ಹೀಗೆ ಹೇಳಿದ್ದಾರೆ :
ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್।।

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ, ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ ಎಂದು.ಏನೆಲ್ಲ ಸಾಧಿಸಿದ್ದರೂ, ತ್ಯಜಿಸಿದ್ದರೂ,ಗುರುವಿನ ಕರುಣೆಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಯುತ್ತದೆ.ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾದ್ಯ ಎನ್ನುತ್ತಾ ಗುರುವಿನ ಮಹತ್ವನ್ನು ವಿವರಿಸುತ್ತಾರೆ ಆಚಾರ್ಯರು.

ನಮ್ಮ ಈ ಸನಾತನ ಪರಂಪರೆಯಲ್ಲಿ ಈಗಿರುವ “ಗುರುವಿನ ಗುರುವಿಗೆ ಪರಮಗುರು”ಎಂದೂ, “ಪರಮ ಗುರುವಿನ ಗುರುವನ್ನು ಪರಾಪರ ಗುರು”ಎಂದೂ,”ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು”ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ಯಂದು ಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ. ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರ ವಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನ ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜತೆಗೇ “ಗುರು ಪೂರ್ಣಿಮೆ”ಯಂದು ಪೂಜಿಸುತ್ತೇವೆ. ಲೋಕಗುರು, ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು. ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ. “ಗುರು” ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬ ಚೈತನ್ಯದಾಯಕವಾಗಿರುತ್ತದೆ.

ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ ಸಿದ್ಧ ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ. ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ,ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು,ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಇವರೆಲ್ಲ ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಗುರುವಿನ ಬಗೆಗೆ ವರ್ಣಿಸುತ್ತಾ ಹೊರಟರೆ ಅದು ಸಾಗರದಷ್ಟು ಆಳ, ಅಗಲ. ಆಗಸದಷ್ಟು ವಿಶಾಲ, ವಿಸ್ತಾರ. ಗುರು ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಅದ್ಬುತ ಶಕ್ತಿ ಎಂದು ಅರ್ಥೈಸಿ ತಿಳಿದುಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ….

ಇದನ್ನೂ ಓದಿ: Guru Purnima 2024: ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ‘ಗುರು’ಗಳಿವರು

Continue Reading
Advertisement
Vande Mataram
ದೇಶ4 mins ago

Vande Mataram: ಸಂಸತ್ತಿನಲ್ಲಿ ವಂದೇ ಮಾತರಂ, ಥ್ಯಾಂಕ್ಸ್‌ ಎಂದು ಹೇಳುವಂತಿಲ್ಲ; ಏಕಿಂಥ ಆದೇಶ?

karnataka Weather Forecast
ಮಳೆ30 mins ago

Karnataka Weather : ಥಂಡಿ ಮಿಶ್ರಿತ ಗಾಳಿ-ಮಳೆಗೆ ಹೈರಣಾದ ಜನತೆ; ಜು.25ರವರಗೆ ಮಳೆ ಮುಂದುವರಿಕೆ

Karnataka Rain
ಕರ್ನಾಟಕ56 mins ago

Karnataka Rain: ಶಿರೂರು ಗುಡ್ಡ ಕುಸಿತದ ಸ್ಥಳ ವೀಕ್ಷಿಸಿದ ಸಿಎಂ; NDRF-SDRF ತಂಡಗಳ ಕಾರ್ಯಕ್ಕೆ ಮೆಚ್ಚುಗೆ

Women's Asia Cup
ಪ್ರಮುಖ ಸುದ್ದಿ56 mins ago

Women’s Asia Cup : ಯುಎಇ ವಿರುದ್ಧ ಭಾರತದ ವನಿತೆಯರಿಗೆ ಭರ್ಜರಿ 78 ರನ್ ವಿಜಯ

karnataka rain
ಮಳೆ56 mins ago

Karnataka Rain : ಭರ್ತಿಯತ್ತ ಜಲಾಶಯಗಳು; ಪ್ರವಾಹ ಭೀತಿ ಹಿನ್ನೆಲೆ ನದಿ ತೀರದಲ್ಲಿ ಹೈ ಅಲರ್ಟ್

Guru Purnima 2024
ಅಂಕಣ1 hour ago

Guru Purnima 2024: ಗುರು ಎಂದರೆ ವ್ಯಕ್ತಿಯಲ್ಲ, ಅದ್ಭುತವಾದ ಶಕ್ತಿ!

Fatty liver disease
ಆರೋಗ್ಯ1 hour ago

Fatty Liver Problem: ಫ್ಯಾಟಿ ಲಿವರ್‌ ಸಮಸ್ಯೆ ಎದುರಿಸುತ್ತಿದ್ದೀರಾ? ಈ ಮೂರು ಪೇಯಗಳಿಂದ ಎಂದೆಂದಿಗೂ ದೂರವಿರಿ

Lakshmi Hebbalkar
ಉಡುಪಿ1 hour ago

Lakshmi Hebbalkar: ಮಳೆಗೆ ತತ್ತರಿಸಿದ ಉಡುಪಿ; ನನ್ನ ಅವಶ್ಯಕತೆ ಇದ್ದಾಗಷ್ಟೇ ಬರ್ತೀನಿ ಎಂದ ಲಕ್ಷ್ಮೀ ಹೆಬ್ಬಾಳಕರ್

Kanwar Yatra
ದೇಶ2 hours ago

Kanwar Yatra: ನೇಮ್‌ಪ್ಲೇಟ್‌ ಅಳವಡಿಕೆಗೆ ಆದೇಶ ಪ್ರಶ್ನಿಸಿ ಅರ್ಜಿ; ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ವಿಚಾರಣೆ

HD Kumaraswamy
ಕರ್ನಾಟಕ2 hours ago

HD Kumaraswamy: ದರೋಡೆ, ಲೂಟಿ ತಡೆಯಲು ಸೇನೆ ಕರೆಸಬೇಕಿತ್ತಾ? ಡಿಕೆಶಿಗೆ ತಿರುಗೇಟು ಕೊಟ್ಟ ಎಚ್‌ಡಿಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ1 day ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ2 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ2 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ3 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ5 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ6 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ6 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌