Site icon Vistara News

Paris Olympics : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸೆಕ್ಸ್​ಗೆ ಇಲ್ಲ ಬ್ಯಾನ್​; ಫ್ರೀ ಕಾಂಡೋಮ್​ ವಿತರಣೆ ನಿರಂತರ

Paris Olympics

ಬೆಂಗಳೂರು: ಈ ಹಿಂದಿನ ಟೋಕಿಯೊ ಒಲಿಂಪಿಕ್ಸ್​ನಲ್ಲಿ (Tokyo Olympics) ಜಾರಿಯಲ್ಲಿದ್ದ ಲೈಂಗಿಕ ಕ್ರಿಯೆಗೆ ನಿಷೇಧದ ನಿಯಮ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics) ಜಾರಿಯಲ್ಲಿರುವುದಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಉಚಿತ ಕಾಂಡೋಮ್ (Free Condom) ಕೊಡುವ ಯೋಜನೆ ಮುಂದುವರಿಸಿದ್ದೇವೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್​ಗೆ 14,250 ಅಥ್ಲೀಟ್​ಗಳು ಪಾಲ್ಗೊಳ್ಳಲಿದ್ದಾರೆ. ಅವರಿಗಾಗಿ 300,000 ಕಾಂಡೋಮ್​ಗಳು ಲಭ್ಯವಿರುತ್ತವೆ ಎಂದು ಒಲಿಂಪಿಕ್ ವಿಲೇಜ್ ನಿರ್ದೇಶಕ ಲಾರೆಂಟ್ ಮಿಚೌಡ್ ಶನಿವಾರ ಹೇಳಿದ್ದಾರೆ.

ಸ್ಕೈ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು “ಇಲ್ಲಿ ಎಲ್ಲ ರೀತಿಯ ಸಾಮರಸ್ಯಕ್ಕೆ ಇಲ್ಲಿ ಮುಕ್ತ ಸ್ವಾತಂತ್ರ್ಯವಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಅಂದ ಹಾಗೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020 ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಸೆಕ್ಸ್​ಗೆ ನಿಷೇಧ ಹೇರಲಾಗಿತ್ತು. ರೋಗ ಹರಡುವುದನ್ನು ತಡೆಯಲು ಕ್ರೀಡಾಪಟುಗಳು ಪರಸ್ಪರ ದೈಹಿಕ ಸಂಪರ್ಕ ಸಾಧಿಸಬಾರದು ಎಂದು ಹೇಳಲಾಗಿತ್ತು. ಒಬ್ಬರಿಂದ ಒಬ್ಬರು ಆರೂವರೆ ಅಡಿ ಅಂತರವನ್ನು ಕಾಯ್ದುಕೊಳ್ಳುವಂತೆ ಹೇಳಲಾಗಿತ್ತು.

ಕ್ರೀಡಾಪಟುಗಳಿಗೆ ಉತ್ಸಾಹ ತುಂಬುವ ಮತ್ತು ವಿನೋದದಿಂದ ಕಳೆಯಲು ಕೆಲವು ಸ್ಥಳಗಳನ್ನು ನಿರ್ಮಿಸಲು ನಾವು ಬಯಸಿದ್ದೇವೆ” ಎಂದು ಮಿಚೌಡ್ ಅವರು ಹೇಳಿದ್ದಾರೆ. ನಿಷೇಧ ಹಿಂದೆ ತೆಗೆದುಕೊಂಡಿರುವ ಹೊರತಾಗಿಯೂ ಅನಾಹುತಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಎಣ್ನೆಯೂ ಇಲ್ಲ!

ಕ್ರೀಡಾ ಗ್ರಾಮದಲ್ಲಿ ಅಥ್ಲೀಟ್​ಗಳಿಗೆ ಶಾಂಪೇನ್ ಸಿಗುವುದಿಲ್ಲ. ಆದರೆ ಅವರು ಬಯಸುವ ಎಲ್ಲಾ ಶಾಂಪೇನ್ ಅನ್ನು ಪ್ಯಾರಿಸ್​ನಲ್ಲಿ ಸೇವಿಸಬಹುದು” ಎಂದು ಮಿಚೌಡ್ ಹೇಳಿದರು. “ನಾವು ವಿಶ್ವ ನಾನಾ ದೇಶದ ಆಹಾರ ಪದ್ಧತಿಯೊಂದಿಗೆ 350 ಮೀಟರ್ ಗಿಂತ ಹೆಚ್ಚು ಬಫೆ ವ್ಯವಸ್ಥೆ ಹೊಂದಿದ್ದೇವೆ. ಕ್ರೀಡಾಪಟುಗಳಿಗೆ ಇಲ್ಲಿನ ಫ್ರೆಂಚ್ ತಿನಿಸುಗಳನ್ನು ನೀಡಲೂ ಬಯಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : IPL 2024: ಇದುವರೆಗಿನ 16 ಐಪಿಎಲ್​ ಫೈನಲ್​ ಪಂದ್ಯಗಳ ಹಿನ್ನೋಟ ಕುತೂಹಲಕರ!

ಇದು ಅತ್ಯಂತ ದುಬಾರಿ ಒಲಿಂಪಿಕ್ ನಿರ್ಮಾಣ ಯೋಜನೆಯಾಗಿದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ. ಜುಲೈನಲ್ಲಿ ಜ್ಯೋತಿ ಬೆಳಗುವ ಸಮಾರಂಭ ನಡೆಯುವ ಹೊತ್ತಿಗೆ ಪ್ಯಾರಿಸ್ ಸುಮಾರು 2.1 ಬಿಲಿಯನ್ ಡಾಲರ್ ಖರ್ಚು ಮಾಡುವ ನಿರೀಕ್ಷೆಯಿದೆ.

ಕಾಂಡೋಮ್ ವಿತರಣೆಯು ಒಲಿಂಪಿಕ್ಸ್​ ಏರ್ಪಾಟಿನ ಒಂದು ಸಂಪ್ರದಾಯವಾಗಿದೆ. 1988ರ ಸಿಯೋಲ್ ಒಲಿಂಪಿಕ್ಸ್ ಬಳಿಕ ಎಚ್ಐವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಸಂಘಟಕರು ಗರ್ಭನಿರೋಧಕಗಳನ್ನು ವಿತರಿಸಲು ಆರಂಭಿಸಿದ್ದರು. ಸೆಕ್ಸ್​​ಗೆ ಬ್ಯಾನ್ ಇದ್ದ ಹೊರತಾಗಿಯೂ 2020ರ ಕ್ರೀಡಾಕೂಟದಲ್ಲೂ 1,50,000 ಕಾಂಡೋಮ್​ಗಳನ್ನು ವಿತರಣೆ ಮಾಡಲಾಗಿತ್ತು.

Exit mobile version