Site icon Vistara News

Airline : ವಿಮಾನ ಲ್ಯಾಂಡ್​ ಆದ ಅರ್ಧ ಗಂಟೆಯಲ್ಲಿ ಲಗೇಜ್​ ಕೊಡಲೇಬೇಕು; ಸರ್ಕಾರದ ಆದೇಶ

Airport Laguge

ಬೆಂಗಳೂರು: ವಿಮಾನ ಲ್ಯಾಂಡ್ ಆದ 30 ನಿಮಿಷಗಳಲ್ಲಿ ಪ್ರಯಾಣಿಕರ ಚೆಕ್-ಇನ್ ಲಗೇಜ್​ಗಳನ್ನು ವಿತರಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಭದ್ರತಾ ವಿಭಾಗವಾದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS ) ಎಂದು ವಿಮಾನಯಾನ ಸಂಸ್ಥೆಗಳಿಗೆ (Airline ) ಹೇಳಿದೆ. ಫೆಬ್ರವರಿ 26 ರೊಳಗೆ ಸಮಯೋಚಿತ ಬ್ಯಾಗೇಜ್ ವಿತರಣೆಯ ಕ್ರಮಗಳನ್ನು ಜಾರಿಗೆ ತರಲು ಅದು ಕೇಳಿಕೊಂಡಿದೆ. ವಿಮಾನ ನಿಲ್ದಾಣಗಳಲ್ಲಿ ದಟ್ಟಣೆಯನ್ನು ತಪ್ಪಿಸಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಕೈಗೊಂಡ ಪ್ರಯತ್ನಗಳ ಭಾಗವಾಗಿ ಈ ಸೂಚನೆ ನೀಡಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 16ರ ಪತ್ರದಲ್ಲಿ ಬಿಸಿಎಎಸ್, ಪ್ರತಿ ವಿಮಾನಯಾನ ಸಂಸ್ಥೆಗಳು ತಮ್ಮ ಸರಂಜಾಮುಗಳನ್ನು ಕನ್ವೇಯರ್ ಬೆಲ್ಟ್ಗಳಿಗೆ ತಲುಪಿಸಲು ತೆಗೆದುಕೊಳ್ಳುವ ಸಮಯವನ್ನು ಅಧ್ಯಯನ ಮಾಡಿದ ನಂತರ, ನಿಯಮಗಳನ್ನು ಪಾಲಿಸುವಲ್ಲಿನ ಆಗುತ್ತಿರುವ ದೋಷಗಳನ್ನು ಎತ್ತಿ ತೋರಿಸಿದೆ.

ಕಾರ್ಯಾಚರಣೆ, ನಿರ್ವಹಣೆ ಮತ್ತು ವಿತರಣಾ ಒಪ್ಪಂದದ (ಒಎಂಡಿಎ) ಸೇವಾ ಗುಣಮಟ್ಟದ ಅವಶ್ಯಕತೆಗಳ ಪ್ರಕಾರ ಕೊನೆಯ ಲಗೇಜ್​ ಅನ್ನು 30 ನಿಮಿಷಗಳಲ್ಲಿ ತಲುಪಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳಿಗೆ ಹೇಳಿದೆ. 2024 ರ ಫೆಬ್ರವರಿ 26ರೊಳಗೆ 10 ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಜಾರಿಗೆ ತರಲು ಬಿಸಿಎಎಸ್ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ವರ್ಷದ ಜನವರಿಯಿಂದ ಆರು ಪ್ರಮುಖ ವಿಮಾನ ನಿಲ್ದಾಣಗಳ ಆಗಮನ ದ್ವಾರದ ಮೂಲಕ ಪ್ರಯಾಣಿಕರನ್ನು ಕಳುಹಿಸಲು ವಿಮಾನಯಾನ ಸಂಸ್ಥೆಗಳು ತೆಗೆದುಕೊಂಡ ಸಮಯವನ್ನು ಬಿಸಿಎಎಸ್ ಅಧ್ಯಯನ ಮಾಡುತ್ತಿದೆ. ಅದರ ಪ್ರಕಾರ ಹೊಸ ಸೂಚನೆ ನೀಡಿದೆ. ಈ ವಿಮಾನ ನಿಲ್ದಾಣಗಳಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತಾ ಮತ್ತು ಚೆನ್ನೈ ಸೇರಿವೆ.

ಹೊಸ ಆದೇಶದ ನಿಯಮವೇನು?

ಆದೇಶದ ಪ್ರಕಾರ ವಿಮಾನದ ಎಂಜಿನ್ ಅನ್ನು ಆಫ್​ ಆದ 10 ನಿಮಿಷಗಳಲ್ಲಿ ಮೊದಲ ಲಗೇಜ್​​ ಬ್ಯಾಗೇಜ್ ಬೆಲ್ಟ್​ಗೆ ಬರಬೇಕು. ಕೊನೆಯ ಸರಂಜಾಮು 30 ನಿಮಿಷಗಳ ಒಳಗೆ ಬೆಲ್ಟ್​​ನಲ್ಲಿರಬೇಕು ಎಂದು ಹೇಳಿದೆ. ಫೆಬ್ರವರಿ 16, 2024 ರಂದು, ಬಿಸಿಎಎಸ್ ಏರ್ ಇಂಡಿಯಾ, ಇಂಡಿಗೊ, ಅಕಾಸಾ, ಸ್ಪೈಸ್ ಜೆಟ್, ವಿಸ್ತಾರಾ, ಏರ್ ಇಂಡಿಯಾ ಎಕ್ಸ್ಪ್ರೆಸ್ ಕನೆಕ್ಟ್ ಮತ್ತು ಏರ್ ಇಂಡಿಯಾ ಎಕ್ಸ್​ಪ್ರೆಸ್​ ಸೇರಿದಂತೆ ಏಳು ವಿಮಾನಯಾನ ಸಂಸ್ಥೆಗಳಿಗೆ ಪತ್ರಗಳನ್ನು ಬರೆದಿದೆ. ಬಿಸಿಎಎಸ್ ವಿಮಾನಯಾನ ಸಂಸ್ಥೆಗಳಿಗೆ 10 ದಿನಗಳಲ್ಲಿ ಅಂದರೆ 2024 ರ ಫೆಬ್ರವರಿ 26ರೊಳಗೆ ಎಲ್ಲಾ ಕ್ರಮಗಳನ್ನು ಜಾರಿಗೆ ತರಲು ಕೇಳಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : CJI Chandrachud : ಸುಪ್ರೀಂ ಕೋರ್ಟ್ ಮುಖ್ಯ​ ನ್ಯಾಯಮೂರ್ತಿ ಚಂದ್ರಚೂಡ್ ಕಾರಿನ ನಂಬರ್ ಪ್ಲೇಟ್ ವೈರಲ್

ಶುಕ್ರವಾರ ಬರೆದ ಪತ್ರದ ರೂಪದಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಅಂತಿಮ ಎಚ್ಚರಿಕೆ ನೀಡಲಾಗಿದೆ. ವಿಮಾನಯಾನ ಸಂಸ್ಥೆ ಇನ್ನೂ ಸಾಮಾನುಗಳನ್ನು ತಲುಪಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡಿದರೆ, ಸಚಿವಾಲಯವು ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಟ್ಟಣೆ ನಿವಾರಣೆ ತಂತ್ರ

ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣ ದಟ್ಟಣೆಯು ಕಳವಳಕಾರಿ ವಿಷಯವಾಗಿದೆ. ದೆಹಲಿ ಮತ್ತು ಮುಂಬೈನಂತಹ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡುಬಂದ ಡಿಸೆಂಬರ್ 2022 ರ ನಂತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ದಟ್ಟಣೆ ಕಡಿಮೆ ಮಾಡಲು ವಿಮಾನ ನಿಲ್ದಾಣಗಳು, ವಿಮಾನಯಾನ ಸಂಸ್ಥೆಗಳ ಜತೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ನಿರ್ಗಮನ ದ್ವಾರಗಳ ಹೆಚ್ಚಳ, ತ್ವರಿತ ಭದ್ರತಾ ಅನುಮತಿಗಾಗಿ ಹೊಸ ತಂತ್ರಜ್ಞಾನಗಳ ಪರಿಚಯ, ಡಿಜಿ ಯಾತ್ರೆ, ವಿಮಾನ ನಿಲ್ದಾಣಗಳಲ್ಲಿ ಮಾನವ ಸಂಪನ್ಮೂಲಗಳ ಹೆಚ್ಚಳ ಸೇರಿದಂತೆ ಕಾರ್ಯತಂತ್ರದ ಸುಧಾರಣೆಗಳ ಬಗ್ಗೆ ಅವರು ಕೆಲಸ ಮಾಡುತ್ತಿದ್ದಾರೆ.

Exit mobile version