ಕರಾಚಿ, ಪಾಕಿಸ್ತಾನ: ಸೌದಿ ಅರೇಬಿಯಾದ (Saudi Arabia) ಜೆಡ್ಡಾದಿಂದ ಭಾರತದ ಹೈದರಾಬಾದ್ ನಗರಕ್ಕೆ (Hyderabad City) ಹೊರಟಿದ್ದ ಇಂಡಿಗೋ ವಿಮಾನವು (IndiGo Flight) ನ.24, ಬುಧವಾರ ಪಾಕಿಸ್ತಾನದ (Pakistan) ಬಂದರು ನಗರವಾದ ಕರಾಚಿಯಲ್ಲಿ (Karachi City) ತುರ್ತು ಭೂಸ್ಪರ್ಶ ಮಾಡಿದೆ(Emergency Landing). ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ನೆರವು ಅಗತ್ಯ ಇದ್ದುದ್ದರಿಂದ ತುರ್ತು ಲ್ಯಾಂಡಿಂಗ್ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ದುರಂತವೆಂದರೆ, ತುರ್ತು ಲ್ಯಾಂಡಿಂಗ್ ಮತ್ತು ವೈದ್ಯಕೀಯ ನೆರವಿನ ಹೊರತಾಗಿಯೂ ಅಸ್ವಸ್ಥಗೊಂಡಿದ್ದ ಪ್ರಯಾಣಿಕ ಕೊನೆಯುಸಿರು (Passenger Dies) ಎಳೆದಿದ್ದಾರೆ.
ಇಂಡಿಗೋ ಫ್ಲೈಟ್ 6ಇ 68 ಜೆಡ್ಡಾದಿಂದ ಹೈದರಾಬಾದ್ಗೆ ಹೊರಟಿತ್ತು. ಈ ವೈಳೆ ವೈದ್ಯಕೀಯ ತುರ್ತುಸ್ಥಿತಿ ಎದುರಾಯಿತು. ಹಾಗಾಗಿ, ಕ್ಯಾಪ್ಟನ್ ವಿಮಾನವನ್ನು ಕರಾಚಿಯಲ್ಲಿ ಲ್ಯಾಂಡಿಂಗ್ ಮಾಡಿದರು. ಈ ವೇಳೆ ಅಸ್ವಸ್ಥ ಪ್ರಯಾಣಿಕರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ದುರದೃಷ್ಟವಶಾತ್, ಅಸ್ವಸ್ಥ ಪ್ರಯಾಣಿಕರು ಬದುಕುಳಿಯಲಿಲ್ಲ. ನಿಧನರಾಗಿದ್ದಾರೆಂದು ಘೋಷಿಸಸಾಯಿತು ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಇಂಡಿಗೋ ವಿಮಾನ ಪೈಲಟ್ ಕೂಡ ನಿಧನರಾಗಿದ್ದರು. ಕ್ಯಾಪ್ಟನ್ ಮನೋಜ್ ಸುಬ್ರಮಣ್ಯಂ ಅವರು ನಾಗ್ಪುರ್ ವಿಮಾನ ನಿಲ್ದಾಣದ ಬೋರ್ಡಿಂಗ್ ಗೇಟ್ನಲ್ಲಿ ಹಠಾತ್ ಕುಸಿದು ಮೃತಪಟ್ಟಿದ್ದರು. ಅವರು ನಾಗ್ಪುರದಿಂದ ಪುಣೆಗೆ ವಿಮಾನವನ್ನು ತೆಗೆದುಕೊಂಡು ಹೋಗುವವರಿದ್ದರು.
ಹಾರಾಟ ನಿರತ ವಿಮಾನಗು ಅನೇಕ ಕಾರಣಗಳಿಂದ ತುರ್ತು ಲ್ಯಾಂಡಿಂಗ್ ಮಾಡುತ್ತಿರುವುದು ಇದೇ ಮೊದಲ್ಲ. ಕಳೆದ ವರ್ಷ ಜುಲೈ ತಿಂಗಳಲ್ಲಿ ಇಂಡಿಗೋ ಮ್ತತು ಸ್ಪೈಸ್ಜೆಟ್ ವಿಮಾನಗಳು ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದವು.
ದುಬೈನಿಂದ ದಿಲ್ಲಿಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನದ ಇಂಧನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ತುರ್ತು ಲ್ಯಾಂಡಿಂಗ್ ನಂತರ, ಕಾಕ್ಪಿಟ್ನಲ್ಲಿ ಅಸಮರ್ಪಕ ಇಂಧನ ಸೂಚಕ ದೀಪದಿಂದಾಗಿ ಸಮಸ್ಯೆ ಉಂಟಾಗಿತ್ತು ಎಂದು ತಿಳಿದುಬಂದಿತ್ತು.
ಹಾಗೆಯೇ, ಇಂಡಿಗೋ ಕಂಪನಿಯ ಶಾರ್ಜಾ-ಹೈದ್ರಾಬಾದ್ 6ಇ 1406 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು.
ಈ ಸುದ್ದಿಯನ್ನೂ ಓದಿ: ALH Chopper: ಭಾರತ ನೌಕಾಪಡೆಯ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್, ಮೂವರು ಪೈಲಟ್ಗಳ ರಕ್ಷಣೆ