ಕಟಕ್: ಕೋಲ್ಕತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಮಹಿಳಾ ವೈದ್ಯೆಯನ್ನು ಭೀಕರವಾಗಿ ಅತ್ಯಾಚಾರ ಮತ್ತು ಕೊಲೆ ಮಾಡಿರುವ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ವ್ಯಕ್ತಗೊಳ್ಳುತ್ತಿರುವ ನಡುವೆಯೇ ಒಡಿಶಾದ ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳಿಬ್ಬರಿಗೆ ಅಲ್ಲಿನ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿದ (Physical Abuse) ಪ್ರಕರಣ ನಡೆದಿದೆ. ಆದರೆ, ವಿಷಯ ತಿಳಿದ ತಕ್ಷಣವೇ ಜೂನಿಯರ್ ವೈದ್ಯರುಗಳು ಆತನಿಗೆ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡ ಆತ ಐಸಿಯು ಸೇರಿದ್ದಾನೆ.
ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯ ತಾಯಿ ಮತ್ತು ಚಿಕ್ಕಮ್ಮ ಶುಕ್ರವಾರ ತಪಾಸಣೆಗಾಗಿ ಹೃದ್ರೋಗ ವಿಭಾಗಕ್ಕೆ ಹೋಗಿದ್ದಾಗ ಆರೋಪಿ ವೈದ್ಯ ಕೃತ್ಯ ಎಸಗಿದ್ದಾನೆ. ಇಬ್ಬರು ಮಹಿಳೆಯರಿಗೆ ಎಕೋಕಾರ್ಡಿಯೋಗ್ರಾಮ್ಗೆ ಸಲಹೆ ನೀಡಲಾಗಿತ್ತು ಕಾರ್ಡಿಯಾಲಜಿ ಎಂಡಿ ವಿದ್ಯಾರ್ಥಿಯಾಗಿರುವ ಪುರುಷ ವೈದ್ಯ ಇಸಿಜಿ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. .
SCB doctor 'rapes' 2 patients: #Odisha Government forms three-member committee to undertake a detailed enquiry into the allegations regarding alleged misconduct by a DM Cardiology Resident Doctor of SCB Medical College and Hospital, #Cuttack pic.twitter.com/VqY57yezMX
— Argus News (@ArgusNews_in) August 13, 2024
ವಿಷಯ ತಿಳಿದ ಕಿರಿಯ ವೈದ್ಯರ ಸಂಘದ ಸದಸ್ಯರು ಆರೋಪಿ ವೈದ್ಯನಿಗೆ ಚೆನ್ನಾತಿ ಥಳಿಸಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಅದೇ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರು ಆರಂಭದಲ್ಲಿ ಪ್ರಕರಣ ದಾಖಲಿಸಲು ಹಿಂಜರಿದಿದ್ದರು. ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಮಧ್ಯಪ್ರವೇಶಿಸಿ ಹಾಗೆ ಮಾಡಲು ಮನವೊಲಿಸಿದ ನಂತರ ಅವರು ಎಫ್ಐಆರ್ ದಾಖಲಿಸಿದ್ದಾರೆ.
ಮಂಗಳಬಾಗ್ ಪೊಲೀಸ್ ಠಾಣೆಗೆ ಸೋಮವಾರ ಇಬ್ಬರು ರೋಗಿಗಳಿಂದ ಲಿಖಿತ ದೂರು ನೀಡಿದ್ದರು. ಅದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ” ಎಂದು ಕಟಕ್ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ ಅನಿಲ್ ಮಿಶ್ರಾ) ತಿಳಿಸಿದ್ದಾರೆ. ನಿವಾಸಿ ವೈದ್ಯರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂವರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಆರೋಪಿಯನ್ನು ರೋಗಿಗಳ ಕೆಲವು ಸಂಬಂಧಿಕರು ಥಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಸಂಬಂಧ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ ಎಂದು ಮಿಶ್ರಾ ಹೇಳಿದರು.
ಸಿಆರ್ಪಿಸಿಯ ಸೆಕ್ಷನ್ 161 ಮತ್ತು 164 ರ ಅಡಿಯಲ್ಲಿ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆಗಸ್ಟ್ 11ರಂದು ಈ ಘಟನೆ ನಡೆದಿದೆ. ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಪ್ರಕರಣವು ಸೂಕ್ಷ್ಮವಾಗಿರುವುದರಿಂದ, ನಾವು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಹೆಚ್ಚುವರಿ ಡಿಸಿಪಿ ಅನಿಲ್ ಮಿಶ್ರಾ ಹೇಳಿದ್ದಾರೆ.
ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಹರಿಬಿಟ್ಟ ಯುವಕ!
ಧಾರವಾಡ: ಅಪ್ರಾಪ್ತೆ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ (Physical abuse) ಎಸಗಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಅದನ್ನು ವಿಡಿಯೊ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Hindenburg Report : ಸೆಬಿ ಅಧ್ಯಕ್ಷರ ವಜಾಗೆ ಆಗ್ರಹಿಸಿದ ಕಾಂಗ್ರೆಸ್ನಿಂದ ಆಗಸ್ಟ್ 22ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ
ಆಗಸ್ಟ್ 8 ರಂದು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಹಲವು ವಾಟ್ಸ್‌ಆ್ಯಪ್ ಗ್ರೂಪ್‌ಗೂ ಹಾಕಿದ್ದು, ಹಲವರು ಬೇರೆ ಗ್ರೂಪ್‌ಗೆ ಶೇರ್ ಮಾಡಿದ್ದಾರೆ.
ಸದ್ಯ ಯುವಕನನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಬೇರೆ ಬೇರೆ ಗ್ರೂಪ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಸದ್ಯ ದೌರ್ಜನ್ಯ ಎಸಗಿದ ಆರೋಪಿ ಮೇಲೆ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.