ಬೆಂಗಳೂರು: ಉತ್ತರಾಖಂಡದ ಖಾಸಗಿ ಆಸ್ಪತ್ರೆಯಿಂದ ಉತ್ತರ ಪ್ರದೇಶದ ಗಡಿಯಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ವೃತ್ತಿ ತರಬೇತಿ ಪಡೆಯುತ್ತಿದ್ದ ವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿಕೊಂಡ ಕೊಲೆ ಮಾಡಿದ ಪ್ರಕರಣದ ಬಗ್ಗೆ ಗಂಭೀರ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಅದೇ ಮಾದರಿಯ ಘಟನೆಯೊಂದು ಉತ್ತರಾಖಂಡಲ್ಲಿ ವರದಿಯಾಗಿದೆ. ಜುಲೈ 30 ರ ಸಂಜೆ ಆಸ್ಪತ್ರೆಯಿಂದ ಹೊರಟ ಅವರು ರುದ್ರಪುರದ ಇಂದ್ರ ಚೌಕ್ನಿಂದ ಇ-ರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಆದರೆ ಉತ್ತರ ಪ್ರದೇಶದ ಬಿಲಾಸ್ಪುರದ ಕಾಶಿಪುರ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ತಲುಪಲಿಲ್ಲ. ವಿವಾಹಿತ ಮಹಿಳೆಗೆ 11 ವರ್ಷದ ಮಗಳಿದ್ದು ಆಕೆಯೊಂದು ವಾಸವಾಗಿದ್ದರು. ಆಕೆಯನ್ನು ಕೊಲೆ ಮಾಡಿರುವ ದಿನಗೂಲಿ ಕಾರ್ಮಿಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರಿ ಕಾಣೆಯಾದ ದೂರು ದಾಖಲಿಸಿದರು. ಎಂಟು ದಿನಗಳ ನಂತರ, ಆಗಸ್ಟ್ 8 ರಂದು, ಉತ್ತರ ಪ್ರದೇಶ ಪೊಲೀಸರು ಡಿಬ್ಡಿಬಾ ಗ್ರಾಮದಲ್ಲಿರುವ ಅವರ ಮನೆಯಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಆಕೆಯ ಶವವನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಅದ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿತ್ತು.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಆರೋಪಿಗಳನ್ನು ಹುಡುಕಲು ಪೊಲೀಸ್ ತಂಡವನ್ನು ರಚಿಸಿದ್ದರು. ಪೊಲೀಸರು ಸಂತ್ರಸ್ತೆಯ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ ಅದರ ಮೂಲಕ ವಿವರಗಳನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಆರೋಪಿ ಧರ್ಮೇಂದ್ರ ಬಳಿಗೆ ಸಿಕ್ಕಿ ಬಿದ್ದಿದ್ದಾನೆ. ಉತ್ತರ ಪ್ರದೇಶದ ಬರೇಲಿಯ ದಿನಗೂಲಿ ಕಾರ್ಮಿಕನಾದ ಆರೋಪಿಯನ್ನು ರಾಜಸ್ಥಾನದಲ್ಲಿ ಬುಧವಾರ ಬಂಧಿಸಲಾಗಿದೆ.
ಇದನ್ನೂ ಓದಿ: Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್ ಬೆಂಚ್; ಬಿಜೆಪಿ- ಕಾಂಗ್ರೆಸ್ ಜಟಾಪಟಿ
ಕುಡಿದ ಮತ್ತಿನಲ್ಲಿದ್ದ ಧರ್ಮೇಂದ್ರ, ನರ್ಸ್ ಹಿಂಬಾಲಿಸಿ ಹಿಂಬಾಲಿಸಿ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಪ್ರವೇಶಿಸುತ್ತಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆಕೆಯನ್ನು ಹತ್ತಿರದ ಪೊದೆಗಳಿಗೆ ಎಳೆದೊಯ್ದನು. ಸ್ಕಾರ್ಫ್ ಬಳಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಉಧಮ್ ಸಿಂಗ್ ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಟಿ.ಸಿ ಹೇಳಿದ್ದಾರೆ.
ಆರೋಪಿಯು ಆಕೆ ಮೃತಪಟ್ಟ ಮೇಲೆ ಫೋನ್ ಮತ್ತು ಪರ್ಸ್ ನಿಂದ 3,000 ರೂ.ಗಳನ್ನು ಸಹ ಕದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದ ಸಮಯದಲ್ಲಿ ಮಹಿಳಾ ತರಬೇತಿ ವೈದ್ಯರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ಮಧ್ಯೆ ಈ ಬೆಳವಣಿಗೆ ನಡೆದಿದೆ. ಕಳೆದ ವಾರ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ 31 ವರ್ಷದ ಮಹಿಳೆಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು.
ಈ ಕ್ರೂರ ಘಟನೆಯು ವೈದ್ಯರ ಕೆಲಸದ ಸ್ಥಳಗಳಲ್ಲಿ ಉತ್ತಮ ಸುರಕ್ಷತೆಯ ಕಾಳಜಿಯ ಬಗ್ಗೆ ಚರ್ಚೆಗಳು ಎದ್ದಿವೆ. ವೈದ್ಯಕೀಯ ಸಿಬ್ಬಂದಿಯ ಮೇಲಿನ ದಾಳಿಯನ್ನು ತಡೆಯಲು ಕೇಂದ್ರ ಆರೋಗ್ಯ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ದೇಶಾದ್ಯಂತ ನಿವಾಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.