ಇಂದೋರ್: ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ 69 ವರ್ಷದ ಮುದುಕನೊಬ್ಬ 16 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಪ್ರಕಾರ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಆಗಸ್ಟ್ 14 ರಂದು ಬಿಯೋಹರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮರುದಿನ ಪೊಲೀಸರಿಗೆ ದೂರು ನೀಡಲಾಗಿದೆ.
16 ವರ್ಷದ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವುದನ್ನು ಕಂಡು ಆರೋಪಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಿಯೋಹರಿ ಪೊಲೀಸ್ ಠಾಣೆಯ ಉಸ್ತುವಾರಿ ಅರುಣ್ ಪಾಂಡೆ ತಿಳಿಸಿದ್ದಾರೆ. ಬಾಲಕಿ ಮತ್ತು ಆಕೆಯ ಕುಟುಂಬ ಸದಸ್ಯರು ಆಗಸ್ಟ್ 15 ರಂದು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಆರೋಪಿಯನ್ನು ಆಗಸ್ಟ್ 16 ರಂದು ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕೋಲ್ಕತಾ ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ-ಕೊಲೆಯ ಬಗ್ಗೆ ಹೆಚ್ಚುತ್ತಿರುವ ಆಕ್ರೋಶದ ಮಧ್ಯೆ ಈ ಬೆಳವಣಿಗೆ ನಡೆದಿದೆ.
Physical Abuse: ಮತ್ತೊಂದು ಪೈಶಾಚಿಕ ಕೃತ್ಯ; ಬಸ್‌ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
ಡೆಹ್ರಾಡೂನ್: ದೇಶದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಎದುರಾಗಿದ್ದು, ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಬೆನ್ನಿಗೆ ಉತ್ತರಾಖಂಡದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ (Physical Abuse). ಉತ್ತರ ಪ್ರದೇಶದ ಮೊರಾದಾಬಾದ್ನಿಂದ ಡೆಹ್ರಾಡೂನ್‌ಗೆ ಬಸ್‌ನಲ್ಲಿ ಹೊರಟಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಘಟನೆ ಆಗಸ್ಟ್ 13ರಂದು ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪಂಜಾಬ್ ಮೂಲದ ಬಾಲಕಿ ಡೆಹ್ರಾಡೂನ್‌ಗೆ ತೆರಳಲು ಆಗಸ್ಟ್ 12ರಂದು ಉತ್ತರಾಖಂಡದ ಅಂತಾರಾಜ್ಯ ಸರ್ಕಾರಿ ಬಸ್ ಏರಿದ್ದಳು. ಆಗಸ್ಟ್ 13ರ ಮುಂಜಾನೆ ನಿಲ್ಲಿಸಿದ್ದ ಬಸ್‌ನಲ್ಲಿ ಯಾರೂ ಇಲ್ಲದ ವೇಳೆ ಐವರು ಬಾಲಕಿ ಮೇಲೆ ಎರಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೈದ್ಯಕೀಯ ವರದಿ ಇನ್ನಷ್ಟೇ ಕೈ ಸೇರಬೇಕಿದೆ.
ಅಧಿಕಾರಿಗಳು ಹೇಳಿದ್ದೇನು?
ಮಕ್ಕಳ ಕಲ್ಯಾಣ ಸಮಿತಿ (Child Welfare Committee-CWC)ಯ ಅಧಿಕಾರಿಗಳು ಘಟನೆ ಬಗ್ಗೆ ಮಾಹಿತಿ ನೀಡಿ, ಆಗಸ್ಟ್ 13ರ ಮುಂಜಾನೆ ಸುಮಾರು 2-2.30ರ ವೇಳೆಗೆ ಬಾಲಕಿ ಪತ್ತೆಯಾಗಿದ್ದಳು. ಈ ವೇಳೆ ಅವಳ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದಳು. ಆಕೆಯ ದೇಹದಲ್ಲಿ ಹೊರ ಭಾಗದಲ್ಲಿ ಯಾವುದೇ ಗಾಯ ಕಂಡು ಬಂದಿರಲಿಲ್ಲ. ಬಳಿಕ ಆಕೆಯನ್ನು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲಾಯಿತುʼʼ ಎಂದು ತಿಳಿಸಿದ್ದಾರೆ.
ಬಸ್‌ನ ಚಾಲಕ, ನಿರ್ವಾಹಕ ಸೇರಿ ಇದುವರೆಗೆ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ಪಂಜಾಬ್‌ನ ಈ ಬಾಲಕಿ ಅನಾಥೆಯಾಗಿದ್ದು, ತನ್ನ ಸಹೋದರಿ ಮತ್ತು ಭಾವನೊಂದಿಗೆ ವಾಸವಾಗಿದ್ದಳು. ಆಗಸ್ಟ್ 11ರಂದು ಅಕ್ಕ-ಭಾವ ಸೇರಿ ಆಕೆಯನ್ನು ಮನೆಯಿಂದ ಹೊರ ಹಾಕಿದ್ದರು. ಇದರಿಂದ ದಿಕ್ಕೇ ತೋಚದಂತಾದ ಆಕೆ ದಿಲ್ಲಿಗೆ ಬಂದು ಅಲ್ಲಿಂದ ಉತ್ತರಪ್ರದೇಶದ ಮೊರಾದಾಬಾದ್‌ಗೆ ಆಗಮಿಸಿದ್ದಳು. ಬಳಿಕ ಅಲ್ಲಿಂದ ಡೆಹ್ರಾಡೂನ್ ತಲುಪಿದ್ದಳು.
ಇದನ್ನೂ ಓದಿ: Heart Attack : ಬೈಕ್‌ನಲ್ಲಿ ತೆರಳುತ್ತಿದ್ದಾಗಲೇ ಬಡಿತ ನಿಲ್ಲಿಸಿದ ಹೃದಯ; ಯೋಧನ ಸಾವಿನ ಕೊನೆ ಕ್ಷಣ ಸೆರೆ
ಘಟನೆ ವಿವರ
ದಿಲ್ಲಿಯಿಂದ ಉತ್ತರ ಪ್ರದೇಶದ ಸಾರಿಗೆ ಬಸ್ ಮೂಲಕ ಮೊರಾದಾಬಾದ್‌ಗೆ ತಲುಪಿದ ಬಾಲಕಿ ಅಲ್ಲಿಂದ ಆಗಸ್ಟ್ 12ರಂದು ಅಂತಾರಾಜ್ಯ ಬಸ್ ಹತ್ತಿ ಡೆಹ್ರಾಡೂನ್ ತಲುಪಿದ್ದಳು. ಬಸ್‌ನಿಂದ ಎಲ್ಲರೂ ಇಳಿದು ಹೋದ ಬಳಿಕ ಆಕೆಯೊಬ್ಬಳೇ ಉಳಿದಿಕೊಂಡಿದ್ದಳು. ಆಕೆ ಒಬ್ಬಳೇ ಇರುವುದನ್ನು ಗಮನಿಸಿದ ಐವರು ಆಗಸ್ಟ್ 13ರಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಸ್‌ನಿಂದ ಹೊರಗೆ ಎಸೆದು ಪರಾರಿಯಾಗಿದ್ದರು ಎಂದು ವರದಿಯೊಂದು ತಿಳಿಸಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸುತ್ತಿದ್ದಾರೆ.