Site icon Vistara News

Mission Divyastra : ಐತಿಹಾಸಿಕ ಮಿಲಿಟರಿ ಸಾಧನೆ, ದೇಶೀಯವಾಗಿ ನಿರ್ಮಿಸಿದ ಅಗ್ನಿ -5 ಕ್ಷಿಪಣಿ ಸಕ್ಸೆಸ್‌ ಘೋಷಿಸಿದ ಮೋದಿ

Narendra modi

Baar Baar Launch: PM Narendra Modi's jibe at Rahul Gandhi

ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO ) ಅಭಿವೃದ್ಧಿಪಡಿಸಿದ ಮೇಡ್ ಇನ್ ಇಂಡಿಯಾ ಅಗ್ನಿ 5 ಕ್ಷಿಪಣಿಯಾಗಿರುವ ಮಿಷನ್​ ದಿವ್ಯಾಸ್ತ್ರ (Mission Divyastra) ಮೊದಲ ಪರೀಕ್ಷಾ ಹಾರಾಟವನ್ನು ಪ್ರಧಾನಿ ನರೇಂದ್ರ ಮೋದಿ (Narendra modi) ಸೋಮವಾರ ಘೋಷಿಸಿದ್ದಾರೆ.

“ಬಹು ಸ್ವತಂತ್ರ ಗುರಿಯ ಮರು-ಪ್ರವೇಶ ವಾಹನ (MIRV ) ತಂತ್ರಜ್ಞಾನದೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ -5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆಯಾದ ಮಿಷನ್ ದಿವ್ಯಾಸ್ತ್ರಕ್ಕಾಗಿ ನಮ್ಮ ಡಿಆರ್​ಡಿಒ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತೇನೆ” ಎಂದು ಪ್ರಧಾನಿ ಮೋದಿ ಎಕ್ಸ್​​ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಬಹು ಸ್ವತಂತ್ರ ಗುರಿಯ ಮರು-ಪ್ರವೇಶ ವಾಹನ (MIRV) ತಂತ್ರಜ್ಞಾನದೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ -5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆಯಾದ ಮಿಷನ್ ದಿವ್ಯಾಸ್ತ್ರವನ್ನು ಸೋಮವಾರ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ. ಇದು ಭಾರತದ ಮಿಲಿಟರಿ ಶಕ್ತಿಯಲ್ಲಿ ಹೊಸ ಮೈಲುಗಲ್ಲು ಎಂದು ಗುರುತಿಸಲಾಗಿದೆ. ಈ ಸಂಭ್ರಮವನ್ನು ಪ್ರಧಾನಿ ಮೋದಿ ಸಂಜೆ ವೇಳೆಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : PM Narendra Modi: “ಕಾಂಗ್ರೆಸ್‌ಗೆ ನಿದ್ರೆ ಬರುತ್ತಿಲ್ಲ…ʼʼ ದ್ವಾರಕಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿ ಪ್ರಧಾನಿ ಮೋದಿ

ಸರ್ಕಾರಿ ಮೂಲಗಳ ಪ್ರಕಾರ, ಒಂದೇ ಕ್ಷಿಪಣಿಯು ವಿವಿಧ ಸ್ಥಳಗಳಲ್ಲಿ ಅನೇಕ ಸಿಡಿ ತಲೆಗಳನ್ನು ನಿಯೋಜಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವೆಂದರೆ ಈ ಯೋಜನೆಯ ನಿರ್ದೇಶಕರು ಮಹಿಳೆಯಾಗಿದ್ದು, ಭಾರತದಲ್ಲಿ ಮಹಿಳಾ ಶಕ್ತಿಯ ಕೊಡುಗೆಯನ್ನು ಈ ಮೂಲಕ ಪ್ರತಿಬಿಂಬಿಸಲಾಗಿದೆ.

ಭಾರತದ ಸಾಮರ್ಥ್ಯ ಹೆಚ್ಚಳ

ಮಿಷನ್ ದಿವ್ಯಾಸ್ತ್ರ ಪರೀಕ್ಷೆಯೊಂದಿಗೆ ಎಂಐಆರ್​ವಿ ಶಕ್ತಿಯನ್ನು ಹೊಂದಿರುವ ಆಯ್ದ ಕೆಲವೇ ರಾಷ್ಟ್ರಗಳ ಗುಂಪಿಗೆ ಭಾರತ ಸೇರಿಕೊಂಡಿದೆ. ಈ ವ್ಯವಸ್ಥೆಯು ಸ್ಥಳೀಯ ಏವಿಯಾನಿಕ್ಸ್ ವ್ಯವಸ್ಥೆಗಳು ಮತ್ತು ಹೆಚ್ಚಿನ ನಿಖರತೆಯ ಸಂವೇದಕ ಪ್ಯಾಕೇಜ್ ಗಳನ್ನು ಹೊಂದಿದೆ. ಈ ಸಾಮರ್ಥ್ಯವು ಭಾರತದ ಬೆಳೆಯುತ್ತಿರುವ ತಾಂತ್ರಿಕ ಪರಾಕ್ರಮವನ್ನು ಸೂಚಿಸುತ್ತದೆ.

Exit mobile version