Site icon Vistara News

Modi Ka Parivar : ಸೋಶಿಯಲ್​ ಮೀಡಿಯಾ ಹ್ಯಾಂಡಲ್​​ಗಳಿಂದ ‘ಮೋದಿ ಕಾ ಪರಿವಾರ್​’ ತೆಗೆಯಲು ಸೂಚನೆ

Modi Ka Parivar

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟ ಸರ್ಕಾರ ರಚಿಸಿದ ಬಳಿಕ ತಮ್ಮ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಧನ್ಯವಾದ ತಿಳಿಸಿದ ಪ್ರಧಾನ ಮಂತ್ರಿ ಮೋದಿ ಅವರು, ಚುನಾವಣೆ ವೇಳೆ ತಮಗೆ ಬೆಂಬಲ ವ್ಯಕ್ತಪಡಿಸಲು ತಮ್ಮ ತಮ್ಮ ಸೋಶಿಯಲ್​ ಮೀಡಿಯಾ ಹ್ಯಾಂಡಲ್​ಗಳಲ್ಲಿ ಹಾಕಿದ್ದ ‘ಮೋದಿ ಕಾ ಪರಿವಾರ್​’ (ಮೋದಿಯ ಕುಟುಂಬ) ಉಲ್ಲೇಖವನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ. ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು, ಮೋದಿಗೆ ಕುಟುಂಬವಿಲ್ಲ ಎಂದು ಹೇಳಿರುವುದಕ್ಕೆ ಪ್ರತಿಯಾಗಿ ಮೋದಿ ಅಭಿಮಾನಿಗಳು, ಬಿಜೆಪಿ ನಾಯಕರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹ್ಯಾಂಡಲ್​ಗಳಲ್ಲಿ ‘ಮೋದಿ ಕಾ ಪರಿವಾರ್​’ (Modi Ka Parivar) ಎಂದು ಬರೆದುಕೊಂಡಿದ್ದರು.

ಕಳೆದ ಮಾರ್ಚ್​ನಲ್ಲಿ ಲಾಲೂ ಪ್ರಸಾದ್ ಯಾದವ್​​, ಮೋದಿಯ ವಿರುದ್ಧ ಟೀಕೆ ಮಾಡುವಾಗ, ಕುಟುಂಬವೇ ಇಲ್ಲದವರು ಎಂದಿದ್ದರು. ತಿರುಗೇಟು ಕೊಟ್ಟಿದ್ದ ಮೋದಿ, ಭಾರತ ಎಲ್ಲರೂ ನನ್ನ ಕುಟುಂಬದ ಸದಸ್ಯರು ಎಂದಿದ್ದರು. ಈ ವೇಳೆ ಮೋದಿ ಪರವಾಗಿ ನಿಂತ ಬಿಜೆಪಿ ನಾಯಕರು ನಾವೆಲ್ಲರೂ ಅವರ ಕುಟುಂಬ ಎಂದು ಹೇಳಿದ್ದರು. ಆ ಅಭಿಯಾನದ ಭಾಗವೇ ‘ಮೋದಿ ಕಾ ಪರಿವಾರ್​’.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಚುನಾವಣಾ ಪ್ರಚಾರದ ಮೂಲಕ ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ತಮ್ಮ ಸಾಮಾಜಿಕ ಮಾಧ್ಯಮಕ್ಕೆ ‘ಮೋದಿ ಕಾ ಪರಿವಾರ್’ ಸೇರಿಸಿದ್ದರು. ನಾನು ಅದರಿಂದ ಸಾಕಷ್ಟು ಶಕ್ತಿಯನ್ನು ಪಡೆದುಕೊಂಡೆ. ಭಾರತದ ಜನರು ಎನ್​ಡಿಎಗೆ ಸತತ ಮೂರನೇ ಬಾರಿಗೆ ಬಹುಮತ ನೀಡಿದ್ದಾರೆ, ಇದು ಒಂದು ರೀತಿಯ ದಾಖಲೆಯಾಗಿದ. ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಜನಾದೇಶವನ್ನು ನೀಡಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ: Odisha chief minister : ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾaದ ನೂತನ ಮುಖ್ಯಮಂತ್ರಿ; ಇಬ್ಬರು ಉಪಮುಖ್ಯಮಂತ್ರಿಗಳ ಆಯ್ಕೆ

“ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸುವುದರೊಂದಿಗೆ, ನಾನು ಮತ್ತೊಮ್ಮೆ ಭಾರತದ ಜನರಿಗೆ ಧನ್ಯವಾದ ಹೇಳುತ್ತೇನೆ. ಈಗ ನಿಮ್ಮ ಸಾಮಾಜಿಕ ಮಾಧ್ಯಮಗಳಿಂದ ‘ಮೋದಿ ಕಾ ಪರಿವಾರ್’ ಅನ್ನು ತೆಗೆದುಹಾಕುವಂತೆ ವಿನಂತಿಸುತ್ತೇನೆ. ಹ್ಯಾಂಡಲ್​ಗಳ ಹೆಸರು ಬದಲಾಗಬಹುದು. ಆದರೆ ಭಾರತದ ಪ್ರಗತಿಗಾಗಿ ಶ್ರಮಿಸುತ್ತಿರುವ ಒಂದು ಪರಿವಾರವಾಗಿ ನಮ್ಮ ಬಂಧವು ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಪಿಎಂ ಮೋದಿ ತಮ್ಮ ಎಕ್ಸ್ ಹ್ಯಾಂಡಲ್​​ನಲ್ಲಿ ತಮ್ಮ ಪ್ರೊಫೈಲ್ ಮತ್ತು ಹೆಡರ್ ಫೋಟೋಗಳನ್ನು ಸಹ ಬದಲಾಯಿಸಿದ್ದಾರೆ. ಇತ್ತೀಚಿನ ಚಿತ್ರಗಳು ಅವರ ಅಧಿಕಾರದ ಮೊದಲ ದಿನ ಮತ್ತು ಅವರ ಸರ್ಕಾರದ ಮೂರನೇ ಅವಧಿಯ ಪ್ರಮಾಣವಚನ ಸಮಾರಂಭದ ಚಿತ್ರಗಳಾಗಿವೆ. ಅವರು ಸಂವಿಧಾನವನ್ನು ಹಣೆಗೆ ಒತ್ತಿಕೊಳ್ಳುವ ಚಿತ್ರ ಹೆಡರ್​ನಲ್ಲಿದೆ.

Exit mobile version